ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆಸಲಾಗುವ ಆನ್‌ಲೈನ್ ಸತ್ಸಂಗಗಳ ಚಿತ್ರೀಕರಣಕ್ಕಾಗಿ ವಿವಿಧ ಉಪಕರಣಗಳ ಆವಶ್ಯಕತೆ ಇದೆ !
‘ಪ್ರಸ್ತುತ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಇವು ಸಂಯುಕ್ತವಾಗಿ ‘ಫೇಸ್‌ಬುಕ್’ ಮತ್ತು ‘ಯೂ ಟ್ಯೂಬ್’ ಈ ಸಾಮಾಜಿಕ ಮಾಧ್ಯಮಗಳಲ್ಲಿ ‘ನಾಮಜಪ ಸತ್ಸಂಗ’, ‘ಬಾಲಸಂಸ್ಕಾರ ವರ್ಗಗಳು’, ‘ಭಾವಸತ್ಸಂಗ’ ಹಾಗೂ ಧರ್ಮಸಂವಾದ’ ಈ ‘ಆನ್‌ಲೈನ್ ಸತ್ಸಂಗಗಳ ಮಾಲಿಕೆ’ಗಳ ಆಯೋಜನೆಯನ್ನು ಮಾಡುತ್ತಿವೆ. ಈ ಸತ್ಸಂಗಗಳಿಂದಾಗಿ ಲಕ್ಷಗಟ್ಟಲೆ ಜಿಜ್ಞಾಸುಗಳಿಗೆ ಅಧ್ಯಾತ್ಮ, ರಾಷ್ಟ್ರ, ಧರ್ಮ, ಭಾರತದ ಗೌರವಶಾಲಿ ಇತಿಹಾಸ, ಹಬ್ಬ ಮತ್ತು ವ್ರತಗಳು, ಧಾರ್ಮಿಕ ಉತ್ಸವಗಳು, ಬಾಲಸಂಸ್ಕಾರ, ಆಯುರ್ವೇದ, ಜ್ಯೋತಿಷ್ಯ, ವಾಸ್ತುಶಾಸ್ತ್ರ, ದೈನಂದಿನ ಆಚಾರ-ವಿಚಾರಗಳ ಶಾಸ್ತ್ರ, ಇವುಗಳೊಂದಿಗೆ ಅನೇಕ ವಿಷಯಗಳ ಬಗ್ಗೆ ಮನೆಯಲ್ಲಿಯೇ ಜ್ಞಾನ ದೊರಕುತ್ತಿದೆ. ಅಖಿಲ ಮನುಕುಲಕ್ಕೆ ಜ್ಞಾನಾಮೃತವನ್ನು ನೀಡುವ ಈ ಸತ್ಸಂಗಗಳಿಗೆ ದಿನದಿಂದ ದಿನಕ್ಕೆ ಜಿಜ್ಞಾಸುಗಳ ಅಭೂತಪೂರ್ವ ಬೆಂಬಲ ಸಿಗುತ್ತಿದೆ.
ಯಾವುದೇ ಆರ್ಥಿಕ ಬೆಂಬಲ ಇಲ್ಲದಿರುವಾಗಲೂ ಸಾಮಾಜಿಕ ಹಿತಕ್ಕಾಗಿ ನಡೆಸಿರುವ ಈ ‘ಆನ್‌ಲೈನ್’ ಸತ್ಸಂಗಗಳ ಚಿತ್ರೀಕರಣದ ಸೇವೆಯು ನಿರಂತರವಾಗಿ ನಡೆದಿದೆ. ಈ ಸತ್ಸಂಗಗಳ ಚಿತ್ರೀಕರಣಕ್ಕಾಗಿ ಕೆಳಗಿನ ಉಪಕರಣಗಳ ಆವಶ್ಯಕತೆಯಿದೆ.
ಮೇಲೆ ತಿಳಿಸಿದ ಉಪಕರಣಗಳನ್ನು ಅರ್ಪಣೆ ಸ್ವರೂಪದಲ್ಲಿ ನೀಡಬಹುದಾದ ಅಥವಾ ಅವುಗಳನ್ನು ಖರೀದಿಸಲು ಧನರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಲು ಇಚ್ಛಿಸುವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು, ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬೇಕು.
ಹೆಸರು ಮತ್ತು ಸಂಪರ್ಕ ಸಂಖ್ಯೆ : ಸೌ. ಭಾಗ್ಯಶ್ರೀ ಸಾವಂತ – ೭೦೫೮೮೮೫೬೧೦
ಗಣಕೀಯ ವಿಳಾಸ : sanatan.sanstha2025@gmail.com
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ’, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401
ಇದಕ್ಕಾಗಿ ಧನಾದೇಶವನ್ನು ನೀಡುವುದಿದ್ದರೆ ಅದನ್ನು ‘ಸನಾತನ ಸಂಸ್ಥೆ’ ಈ ಹೆಸರಿಗೆ ತೆಗೆಯಬೇಕು.
– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ. (೧೭.೯.೨೦೨೦)