ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಸದ್ಗುರುಗಳ ಆಶೀರ್ವಾದದ ಮಹತ್ವ

ಹಣವು ಅಶಾಶ್ವತವಾಗಿದೆ. ಸಂತರು ನೀಡಿದ ಆಶೀರ್ವಾದವು ಅಖಂಡವಾಗಿ ಉಳಿಯುವಂತಹುದಾಗಿದೆ. ಅಖಂಡವೆಂದರೆ ಎಲ್ಲಿಯವರೆಗೆ ಚಂದ್ರ ಮತ್ತು ಸೂರ್ಯರು ಇರುತ್ತಾರೆಯೋ ಅಲ್ಲಿಯವರೆಗೆ ಉಳಿಯಲಿದೆ.

ವಿಜ್ಞಾನದ ನಿಜವಾದ ಅಭ್ಯಾಸ ಮಾಡಿದವನಿಗೆ ವಿಜ್ಞಾನದ ಮಿತಿಯು ತಿಳಿಯುತ್ತದೆ. ಇತರ ತಥಾಕಥಿತ ಬುದ್ಧಿಜೀವಿಗಳು ವಿಜ್ಞಾನವನ್ನು ತಲೆಯ ಮೇಲಿಟ್ಟು ಕೊಂಡು ಕುಣಿಯುತ್ತಾರೆ.

ಪಾಶ್ಚಾತ್ಯ ಶಿಕ್ಷಣವು ಯಾವುದೇ ಸಮಸ್ಯೆಯ ಮೂಲ ಕಾರಣದವರೆಗೆ ಉದಾ. ಪ್ರಾರಬ್ಧ, ಕೆಟ್ಟ ಶಕ್ತಿ, ಕಾಲಮಹಾತ್ಮೆ ಇವುಗಳ ವರೆಗೆ ಹೋಗುವುದಿಲ್ಲ. ಕ್ಷಯರೋಗಿಗೆ ಕ್ಷಯರೋಗದ ಜಂತು ಸಾಯುವ ಔಷಧಿಯನ್ನು ನೀಡುವ ಬದಲು ಕೇವಲ ಕೆಮ್ಮಿನ ಔಷಧಿ ನೀಡುವಂತೆ ಅವರ ಉಪಚಾರವಿದೆ.

ಅನಂತಕೋಟಿ ಬ್ರಹ್ಮಾಂಡ ನಾಯಕನ ವರ್ಣನೆಯು ಇತರ ಪಂಥಗಳಲ್ಲಿರುವಂತೆ ಒಂದೇ ಪುಸ್ತಕದಲ್ಲಿ ಮಾಡಲು ಸಾಧ್ಯವೇ? ಹಾಗಾಗಿಯೇ ಹಿಂದೂ ಧರ್ಮದಲ್ಲಿ ಸಾವಿರಾರು ಗ್ರಂಥಗಳಿವೆ. ಅವುಗಳಿಂದ ಪರಿಪೂರ್ಣವಾದ ಮಾಹಿತಿಯು ಸಿಗುತ್ತದೆ.

ಢೋಂಗಿ ಬುದ್ಧಿಜೀವಿಗಳು

ಡಾಕ್ಟರ್, ವಕೀಲರು ಹೇಳಿದ್ದನ್ನು ಬುದ್ಧಿಜೀವಿಗಳು ಕೂಡಲೆ ಕೇಳುತ್ತಾರೆ. ಅವರನ್ನು ಯಾಕೆ? ಹೇಗೆ? ಎಂದು ಕೇಳುವುದಿಲ್ಲ; ಆದರೆ ಸಂತರು ಏನಾದರೂ ಹೇಳಿದರೆ ಬುದ್ಧಿಜೀವಿಗಳ ಮನಸ್ಸಿನಲ್ಲಿ ಯಾಕೆ ? ಹೇಗೆ ?, ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.

ಸಾವಿರಾರು ವರ್ಷಗಳ ಹಿಂದೆಯೇ ಋಷಿಮುನಿಗಳು ಅಂಕಗಣಿತ, ಖಗೋಳಶಾಸ್ತ್ರ, ವಾಸ್ತುಶಾಸ್ತ್ರ, ಆರೋಗ್ಯಶಾಸ್ತ್ರ, ವಿಮಾನ ಉಡ್ಡಾಯನಶಾಸ್ತ್ರ, ನೌಕಾಯಾನಶಾಸ್ತ್ರ ಮುಂತಾದವುಗಳ ವಿಷಯದಲ್ಲಿ ಆಧುನಿಕ ವೈಜ್ಞಾನಿಕ ಉಪಕರಣಗಳಿಲ್ಲದೆ ಮೂಲದಿಂದಲೇ ಕಂಡುಹಿಡಿದರು. ಆ ಶೋಧನೆಯ ಆಧಾರದಲ್ಲಿ ಆಧುನಿಕ ವಿಜ್ಞಾನಿಗಳು ಸಂಶೋಧನೆಯನ್ನು ಮಾಡಿದ್ದಾರೆ. ಇದಕ್ಕಾಗಿಯೇ ಭಾರತೀಯ ಋಷಿಮುನಿಗಳೇ ಹೆಚ್ಚಿನ ವಿಜ್ಞಾನಿಗಳ ಸಂಶೋಧನೆಯ ನಿಜವಾದ ಜನಕರಾಗಿದ್ದಾರೆ. – (ಪರಾತ್ಪರ ಗುರು) ಡಾ. ಆಠವಲೆ