ಯುಗಾದಿಯ ಹಬ್ಬದಂದು ಹೊಸ ವಸ್ತುಗಳ ಖರೀದಿ ಅಥವಾ ಕಾರ್ಯಗಳನ್ನು ಮಾಡಲು ಸಮಯ ಮತ್ತು ಧನವನ್ನು ಖರ್ಚು ಮಾಡುವುದಕ್ಕಿಂತ ಅವುಗಳನ್ನು ಮುಂಬರುವ ಯುದ್ಧಕಾಲದಲ್ಲಿ ಪ್ರಾಣರಕ್ಷಣೆಗಾಗಿ ಪೂರ್ವತಯಾರಿ ಮತ್ತು ಖರ್ಚು ಮಾಡಿರಿ !
‘ಯುಗಾದಿ ಅಂದರೆ ಚೈತ್ರ ಶುಕ್ಲ ಪಕ್ಷ ಪಾಡ್ಯ, ಇದು ಹಿಂದೂಗಳ ವರ್ಷಾರಂಭವಾಗಿದೆ. ಈ ಯುಗಾದಿ ತಿಥಿಯು ಶಾಸ್ತ್ರಾನುಸಾರ ಮೂರುವರೆ ಮುಹೂರ್ತಗಳ ಪೈಕಿ ಒಂದಾಗಿರುವುದರಿಂದ ಈ ದಿನ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ ಅಥವಾ ಕಾರ್ಯದ ಹೊಸಸಂಕಲ್ಪವನ್ನು ಮಾಡಲಾಗುತ್ತದೆ. ಹೊಸ ವಸ್ತುಗಳ ಖರೀದಿ ಮತ್ತು ಕಾರ್ಯಗಳ ಶುಭಾರಂಭ ಇವುಗಳಿಗಾಗಿ ಈ ದಿನವನ್ನು ಶುಭವೆಂದು ತಿಳಿಯಲಾಗುತ್ತದೆ. ಆದರೆ ಪ್ರಸ್ತುತ ದೇಶ ಮತ್ತು ವಿಶ್ವವು ಸಂಕ್ರಮಣಕಾಲದಿಂದ ಸಾಗುತ್ತಿದೆ. ವೈಶ್ವಿಕ ಸ್ತರದಲ್ಲಿ ಹಬ್ಬಿದ ಮಹಾಮಾರಿ, ಆರ್ಥಿಕ ಮುಗ್ಗಟ್ಟು, ಯುದ್ಧಜನ್ಯ ಸ್ಥಿತಿ ಇತ್ಯಾದಿ ಎಲ್ಲವೂ ಆಪತ್ಕಾಲದ ಲಕ್ಷಣಗಳಾಗಿವೆ. ಮುಂದಿನ ಎರಡು-ಮೂರು ವರ್ಷಗಳು ಪ್ರತಿಕೂಲ ಕಾಲವಾಗಿರಲಿವೆ. ಈ ಕಾಲದಲ್ಲಿ ಜಗತ್ತಿನಲ್ಲಿ ಪ್ರಚಂಡ ಜೀವಹಾನಿ ಮತ್ತು ಹಣಕಾಸಿನ ಹಾನಿಯಾಗುವ ಅಪಾಯವಿದೆ. ಮಾರುಕಟ್ಟೆಯಲ್ಲಿ ಸಿಗುವ ಬ್ರೆಡ್ ಸಹ ದುಬಾರಿ ಎನಿಸಬೇಕು, ಇಂತಹ ಪರಿಸ್ಥಿತಿಯು ಬಂದೆರಗಲಿದೆ. ಕಾಲದ ಗತಿಯನ್ನು ಗಮನದಲ್ಲಿಟ್ಟು ಈ ಯುಗಾದಿಯಂದು ಹೊಸ ವಸ್ತುಗಳ ಖರೀದಿ ಅಥವಾ ಕಾರ್ಯಗಳನ್ನು ಮಾಡಲು ಸಮಯ ಮತ್ತು ಧನವನ್ನು ಖರ್ಚು ಮಾಡುವುದಕ್ಕಿಂತ ಅದನ್ನು ಮುಂಬರುವ ಯುದ್ಧಕಾಲದಲ್ಲಿ ಪ್ರಾಣರಕ್ಷಣೆಗಾಗಿ ಪೂರ್ವತಯಾರಿ ಮತ್ತು ಖರ್ಚು ಮಾಡುವುದು ಉಪಯುಕ್ತವೆನಿಸುತ್ತದೆ.
ಈ ಯುದ್ಧಕಾಲದ ನಂತರ ಜಗತ್ತಿಗೆ ವಿಶ್ವಕಲ್ಯಾಣಕಾರಿ ವ್ಯವಸ್ಥೆಯು ಪ್ರಾಪ್ತವಾಗಲು ಭಾರತದಲ್ಲಿ ರಾಮರಾಜ್ಯರೂಪಿ ಹಿಂದೂ ರಾಷ್ಟ್ರವು ಅವತರಿಸುವುದು ಆವಶ್ಯಕವಾಗಿದೆ. ಆದುದರಿಂದ ಹಿಂದೂಗಳೇ, ಈ ಯುಗಾದಿಯಂದು ಭಾರತದಲ್ಲಿ ವಿಶ್ವಕಲ್ಯಾಣಕಾರಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಕೃತಿಶೀಲರಾಗುವ ಹೊಸ ಸಂಕಲ್ಪವನ್ನು ಮಾಡಿರಿ !’
– (ಪರಾತ್ಪರ ಗುರು) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ.