ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
ಎಲ್ಲಿ ಸಂಶೋಧನೆಯ ವಿಷಯದಲ್ಲಿ ಶಿಶುವಿಹಾರದಲ್ಲಿರುವ ಪಾಶ್ಚಾತ್ಯ ಸಂಶೋಧಕರು ಮತ್ತು ಎಲ್ಲಿ ಸರ್ವಜ್ಞ ಋಷಿಗಳು
ಎಲ್ಲಿ ಯಾವುದೇ ಒಂದು ವಿಷಯದಲ್ಲಿ ಕೆಲವು ವರ್ಷ ಸಂಶೋಧನೆಯನ್ನು ಮಾಡಿ ಸಂಖ್ಯಾ ಶಾಸ್ತ್ರಾನುಸಾರ (Statistics ದಿಂದ) ನಿಷ್ಕರ್ಷಕ್ಕೆ ಬರುವ ಪಾಶ್ಚಾತ್ಯ ಸಂಶೋಧಕರು ಮತ್ತು ಎಲ್ಲಿ ಯಾವುದೇ ರೀತಿಯ ಸಂಶೋಧನೆಯನ್ನು ಮಾಡದೇ ಸಿಗುವ ಈಶ್ವರೀ ಜ್ಞಾನದಿಂದ ಯಾವುದೇ ವಿಷಯದ ನಿಷ್ಕರ್ಷವನ್ನು ತಕ್ಷಣ ಹೇಳುವ ಋಷಿಗಳು.
ಅಂತರ್ಜ್ಞಾನಿ ಭಾರತೀಯ ಋಷಿಗಳು
ಪಾಶ್ಚಾತ್ಯರಿಗೆ ಸಂಶೋಧನೆಗಾಗಿ ಯಂತ್ರವು ಬೇಕಾಗುತ್ತದೆ. ಋಷಿಗಳಿಗೆ ಹಾಗೂ ಸಂತರಿಗೆ ಬೇಕಾಗುವುದಿಲ್ಲ. ಅವರಿಗೆ ಯಂತ್ರಕ್ಕಿಂತ ಅನೇಕ ಪಟ್ಟು ಮಾಹಿತಿಯು ಸಿಗುತ್ತದೆ.
ಅಧ್ಯಾತ್ಮದ ಶ್ರೇಷ್ಠತೆ
ವಿಜ್ಞಾನವು ಪಂಚಜ್ಞಾನೇಂದ್ರಿಯಗಳು, ಮನಸ್ಸು ಹಾಗೂ ಬುದ್ಧಿಗಳಿಂದ ತಿಳಿದುಕೊಳ್ಳುತ್ತದೆ. ಹಾಗಾಗಿ ಅದಕ್ಕೆ ಮಿತಿಯಿದೆ. ತದ್ವಿರುದ್ಧ ಅಧ್ಯಾತ್ಮವು ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಆಚೆಗಿನದ್ದಾಗಿರುವುದರಿಂದ ಅದಕ್ಕೆ ಮಿತಿ ಇಲ್ಲ.
ಧರ್ಮ ಪದದ ಅರ್ಥ
ಅನಿಷ್ಟಗಳಿಂದ ಜಗತ್ತಿನ ರಕ್ಷಣೆಯನ್ನು ಮಾಡುವುದು ಹಾಗೆಯೇ ಮಾನವನಿಗೆ ಐಹಿಕ ಹಾಗೂ ಪಾರಮಾರ್ಥಿಕ ಉನ್ನತಿಯೊಂದಿಗೆ ಮೋಕ್ಷ ಲಭಿಸುವಂತೆ ಮಾಡುವ ತತ್ತ್ವವೆಂದರೆ ಧರ್ಮ !
ಸರ್ವಸಾಮಾನ್ಯ ವ್ಯಕ್ತಿ ಹಾಗೂ ಸಾಧಕರು
ಸರ್ವಸಾಮಾನ್ಯ ವ್ಯಕ್ತಿಗಳು ಏನಾದರೂ ಮಾಡಿದಾಗ ಅದರ ಹಿಂದೆ ಏನಾದರೂ ಸಿಗಬೇಕು, ಎಂಬ ಉದ್ದೇಶ ಇರುತ್ತದೆ. ತದ್ವಿರುದ್ಧ ಸಾಧಕರು ಮಾಡುತ್ತಿರುವ ಪ್ರತಿಯೊಂದು ಕೃತಿಯ ಹಿಂದೆ ಸರ್ವಸ್ವದ ತ್ಯಾಗ ಮಾಡಿ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದು ಎಂಬ ಉದ್ದೇಶ ಇರುತ್ತದೆ.
ಎಲ್ಲಿ ಪಾಶ್ಚಾತ್ಯ ವಿಚಾರಶೈಲಿ ಮತ್ತು ಎಲ್ಲಿ ಹಿಂದೂ ಧರ್ಮ
ಪಾಶ್ಚಾತ್ಯ ವಿಚಾರಶೈಲಿ ಹಾಗೂ ಸಂಶೋಧನೆಯು ಕೇವಲ ಸುಖಪ್ರಾಪ್ತಿಗಾಗಿ ಇರುತ್ತದೆ. ಮನುಷ್ಯನ ಸುಖದ ಆಸೆಯು ಎಂದೂ ಪೂರ್ಣವಾಗುವುದಿಲ್ಲವೆಂದು ಅನೇಕ ಸಂಶೋಧನೆಯನ್ನು ಮಾಡಿಯೂ ಮನುಷ್ಯನು ಹೆಚ್ಚುಹೆಚ್ಚು ದುಃಖಿಯಾಗುತ್ತಿದ್ದಾನೆ.
ರಾಷ್ಟ್ರ-ಧರ್ಮಕ್ಕಾಗಿ ಆಧ್ಯಾತ್ಮಿಕ ಸ್ತರಗಳಲ್ಲಿಯೂ ಕಾರ್ಯ ಮಾಡುವುದು ಅತ್ಯಾವಶ್ಯಕವಾಗಿದೆ
ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕ ಸ್ತರಗಳಲ್ಲಿ ರಾಷ್ಟ್ರ-ಧರ್ಮಕ್ಕಾಗಿ ಕಾರ್ಯ ಮಾಡಿ ಏನನ್ನೂ ಸಾಧಿಸಲು ಆಗುವುದಿಲ್ಲ. ಇದು ಕಳೆದ ೭೪ ವರ್ಷಗಳಲ್ಲಿ ಅನೇಕ ಸಲ ಅನುಭವಕ್ಕೆ ಬಂದಿದೆ. ಈಗ ಅದರ ಜೊತೆಗೆ ಆಧ್ಯಾತ್ಮಿಕ ಸ್ತರದಲ್ಲಿಯೂ ಕಾರ್ಯ ಮಾಡುವುದು ಅತ್ಯಾವಶ್ಯಕವಾಗಿದೆ, ಇದನ್ನು ಎಲ್ಲರೂ ಗಮನದಲ್ಲಿಡುವುದು ಆವಶ್ಯಕವಾಗಿದೆ.
ಮಾನವೀಯತೆಯನ್ನು ಕಲಿಸುವ ಸಾಧನೆಯನ್ನು ಬಿಟ್ಟು ಉಳಿದೆಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರಕ್ಕೆ ಪರಮ ಅಧೋಗತಿಯಾಗಿದೆ. – (ಪರಾತ್ಪರ ಗುರು) ಡಾ. ಆಠವಲೆ