ಜಗನಮೋಹನ್ ರೆಡ್ಡಿ, ಇಬ್ಬರು ಮಂತ್ರಿಗಳು, ದೇವಸ್ಥಾನಮ್‌ನ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ವೈ.ಎಸ್. ಜಗನಮೋಹನ ರೆಡ್ಡಿಯವರು ಸೆಪ್ಟೆಂಬರ್ ೨೩ ರಂದು ತಿರುಮಲ ತಿರುಪತಿಯಲ್ಲಿರುವ ವೆಂಕಟೇಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಪಾಟಲಿಪುತ್ರ (ಪಾಟ್ನಾ) ದಲ್ಲಿ ಭಾಜಪ ನಾಯಕನ ಹತ್ಯೆ

ಇಲ್ಲಿಯ ಭಾಜಪದ ಮುಖಂಡ ರಾಜೇಶಕುಮಾರ್ ಝಾ ಅಲಿಯಾಸ್ ರಾಜು ಬಾಬಾರವರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಅಕ್ಟೋಬರ್ ೧ ರಂದು ಬೆಳಗ್ಗೆ ೬ ಗಂಟೆಗೆ ಬಿವೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಾಪ ನಗರದ ಸೀತಾರಾಮ್ ಉತ್ಸವ್ ಹಾಲ್ ಬಳಿ ಈ ಘಟನೆ ನಡೆದಿದೆ. ಝಾ ಇವರು ಕೇವಲ ಎರಡು ದಿನಗಳ ಹಿಂದೆ ಭಾಜಪಗೆ ಸೇರಿದ್ದರು.

ಶತ್ರುರಾಷ್ಟ್ರಗಳ ಮೈತ್ರಿ !

ಅಮೇರಿಕಾದ ಮಧ್ಯಸ್ಥಿಕೆಯೊಂದಿಗೆ ಸಂಯುಕ್ತ ಅರಬ್ ಎಮಿರೇಟ್ (ಯುಎಇ) ಮತ್ತು ಬಹರೀನ್ ಈ ಇಸ್ಲಾಮೀ ದೇಶಗಳು ಇಸ್ರೇಲ್ ಜೊತೆಗೆ ಮೈತ್ರಿ ಮಾಡಿಕೊಂಡಿವೆ. ಈ ಮೂರೂ ದೇಶಗಳು ಈಗ ‘ಮಿತ್ರ ದೇಶಗಳೆಂದು ಗುರುತಿಸಲ್ಪಡುವವು ಹಾಗೂ ವ್ಯಾಪಾರ, ಆರೋಗ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಅವುಗಳಿಗೆ ಒಟ್ಟಾಗಿ ಕಾರ್ಯ ಮಾಡಲಿಕ್ಕಿವೆ. ಇತ್ತೀಚೆಗಷ್ಟೇ ಸಂಯುಕ್ತ ಅರಬ್ ಎಮಿರೇಟ್ ಮತ್ತು ಇಸ್ರೇಲ್ ಇವುಗಳ ನಡುವೆ ಶಾಂತಿ ಒಪ್ಪಂದವಾಯಿತು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಇತರ ದೇಶಗಳ ಇತಿಹಾಸವು ಹೆಚ್ಚೆಂದರೆ ೨-೩ ಸಾವಿರ ವರ್ಷಗಳದ್ದಿರಬಹುದು ಆದರೆ, ಭಾರತದ ಇತಿಹಾಸವು ಲಕ್ಷಾಂತರ ವರ್ಷಗಳ, ಯುಗಾನುಯುಗಗಳದ್ದಾಗಿದೆ. ಇದನ್ನು ಶಾಲೆಯಲ್ಲಿ ಕಲಿಸುವುದಿಲ್ಲ. ಮೊಘಲರು ಮತ್ತು ಬ್ರಿಟಿಷರು ಭಾರತವನ್ನು ಆಳಿದ ಇತಿಹಾಸವನ್ನು ಕಲಿಸುತ್ತಾರೆ;  ಆದರೆ ಅದರಲ್ಲಿಯೂ ‘ಇಂತಹ ಪರಿಸ್ಥಿತಿ ಏಕೆ ಉದ್ಭವಿಸಿತು ಮತ್ತು ಅದು ಪುನಃ ಸಂಭವಿಸಬಾರದು ಎಂದು ಏನು ಮಾಡಬೇಕು, ಎನ್ನುವುದನ್ನು ಕಲಿಸುವುದಿಲ್ಲ.

ಶ್ರೀಕೃಷ್ಣ ಜನ್ಮಭೂಮಿಯ ಮೇಲೆ ಶಾಹಿ ಈದ್ಗಾ ಮಸೀದಿಯಿಂದಾಗಿರುವ ಅತಿಕ್ರಮಣವನ್ನು ತೆರವುಗೊಳಿಸಬೇಕೆಂದು ಅರ್ಜಿ ಮಥುರಾ ನ್ಯಾಯಾಲಯದಿಂದ ತಿರಸ್ಕೃತ

ಮಥುರಾದ ಶ್ರೀಕೃಷ್ಣ ಜನ್ಮಭೂಮಿಗೆ ಸೇರಿದ ೧೩.೩೭ ಎಕರೆ ಜಮೀನಿನ ಮಾಲೀಕತ್ವ ಮತ್ತು ಈ ಭೂಮಿಯಲ್ಲಿ ಶಾಹಿ ಈದ್ಗಾ ಮಸೀದಿಯಿಂದಾಗಿರುವ ಅತಿಕ್ರಮಣ ತೆರವುಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೆಪ್ಟೆಂಬರ್ ೩೦ ರಂದು ಮಥುರಾ ನ್ಯಾಯಾಲಯ ತಿರಸ್ಕರಿಸಿದೆ. ಭಗವಾನ್ ಕೃಷ್ಣ ವಿರಾಜಮಾನ್, ಕಟರಾ ಕೇಶವ ದೇವ ಖೇವಾಟ್, ರಂಜನಾ ಅಗ್ನಿಹೋತ್ರಿ ಸೇರಿದಂತೆ ಒಟ್ಟು ಆರು ಮಂದಿ ಅರ್ಜಿ ಸಲ್ಲಿಸಿದ್ದರು.

‘ಐಕಿಯಾ’ ಸಂಸ್ಥೆಯು ಯೋಗಾಸನ ಅಭಿಯಾನವನ್ನು ಕೀಳಾಗಿ ತೋರಿಸುವ ವೀಡಿಯೋವನ್ನು ಹಿಂಪಡೆದು ಕ್ಷಮೆಯಾಚಿಸಬೇಕು ! – ಅಮೇರಿಕಾದಲ್ಲಿ ಆಕ್ರೋಶಗೊಂಡ ಹಿಂದೂಗಳ ಆಗ್ರಹ

ಮೇಜು, ಖುರ್ಚಿ, ಕಪಾಟುಗಳು ಇತ್ಯಾದಿ ಪೀಠೋಪಕರಣಗಳನ್ನು ತಯಾರಿಸುವ ಬಹುರಾಷ್ಟ್ರೀಯ ವ್ಯಾಪಾರಿ ಸಂಸ್ಥೆ ‘ಐಕಿಯಾ’ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ ‘ಐಕಿಯಾ ಪ್ರಾಡಕ್ಟ್ಸ’ ವೀಡಿಯೋದಲ್ಲಿ ಯೋಗಾಸನದ ಅಭಿಯಾನವನ್ನು ಕೀಳಾಗಿ ತೋರಿಸಲಾಗಿದೆ. ಈ ವೀಡಿಯೋವನ್ನು ತಕ್ಷಣ ಹಿಂಪಡೆಯಬೇಕು ಮತ್ತು ಕ್ಷಮೆಯಾಚಿಸಬೇಕು, ಎಂದು ಹಿಂದೂಗಳು ಒತ್ತಾಯಿಸಿದ್ದಾರೆ.

ಬಾಬರಿ ಮಸೀದಿ ಧ್ವಂಸ ಮಾಡಿದ ಪ್ರಕರಣದಲ್ಲಿ ಎಲ್ಲ ೩೨ ಆರೋಪಿಗಳು ನಿರ್ದೋಷಿ

೧೯೯೨ ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಣಪುರಿಯ ಸಿಬಿಐನ ವಿಶೇಷ ನ್ಯಾಯಾಲಯವು ಭಾಜಪದ ಹಿರಿಯ ಮುಖಂಡರಾದ ಲಾಲಕೃಷ್ಣ ಅಡವಾಣಿ, ಮುರಳಿ ಮನೋಹರ ಜೋಶಿ, ವಿನಯ ಕಟಿಯಾರ್, ಉಮಾ ಭಾರತಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಹ, ಸಾಧ್ವಿ ಋತಂಭರಾ ಇವರೊಂದಿಗೆ ಎಲ್ಲ ೩೨ ಆರೋಪಿಗಳನ್ನು ನಿದೋರ್ಷಿಗಳೆಂದು ತೀರ್ಪು ನೀಡಿದೆ.

ನಿಮ್ಮ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ‘ಅಪ್‌ಲೋಡ್ ಮಾಡುವಾಗ ಜಾಗರೂಕರಾಗಿರಿ ! – ಸೈಬರ್ ಪೊಲೀಸ್

ಪ್ರಸ್ತುತ ‘ಫೇಸ್‌ಬುಕ್ ಈ ಸಾಮಾಜಿಕ ಪ್ರಸಾರ ಮಾಧ್ಯಮದಿಂದ ‘ಕಪಲ ಚ್ಯಾಲೆಂಜ್ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಅನೇಕ ದಂಪತಿಗಳು ತಮ್ಮ ಫೋಟೋಗಳನ್ನು ‘ಅಪ್‌ಲೋಡ್ ಮಾಡಿದ್ದಾರೆ. ತಮ್ಮ ಛಾಯಾಚಿತ್ರವನ್ನು ಸಾಮಾಜಿಕ ಪ್ರಸಾರ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುವಾಗ ಬಹಳ ಜಾಗರೂಕರಾಗಿರಬೇಕು.

ತಮಿಳುನಾಡಿನಲ್ಲಿ ಹಿಂದೂ ವಿರೋಧಿ ನಾಯಕ ದಿವಂಗತ ಪೆರಿಯಾರ್ ಅವರ ಪ್ರತಿಮೆಯ ಮೇಲೆ ಕೇಸರಿ ಬಣ್ಣ ಎರಚಲಾಯಿತು

ತಮಿಳುನಾಡಿನ ಹಿಂದೂ ವಿರೋಧಿ ನಾಯಕ ದಿವಂಗತ ಇ.ವಿ. ರಾಮಸ್ವಾಮಿ ‘ಪೆರಿಯಾರ್’ ಪ್ರತಿಮೆಯ ಮೇಲೆ ಅಜ್ಞಾತರು ಕೇಸರಿ ಬಣ್ಣ ಹಾಗೂ ಚಪ್ಪಲಿಗಳನ್ನು ಹಾಕಿರುವ ಘಟನೆ ನಡೆದಿದೆ. ಈ ಪ್ರತಿಮೆ ಇನಾಮಕುಲಾತೂರನ ಸಮತುವಾಪುರಮ್ ಕಾಲೋನಿಯಲ್ಲಿದೆ.

ಕರ್ಣಾವತಿ (ಗುಜರಾತ್) ನ ಆರ್ಚರ್ ಆರ್ಟ್ ಗ್ಯಾಲರಿಯಿಂದ ಹಿಂದೂ ವಿರೋಧಿ ಚಿತ್ರಕಾರ ಎಂ.ಎಫ್. ಹುಸೇನ್ ಅವರ ಚಿತ್ರಗಳ ಆನ್‌ಲೈನ್ ಮಾರಾಟ

ಗುಜರಾತ್‌ನ ಕರ್ಣಾವತಿಯಲ್ಲಿನ ಆರ್ಚರ್ ಆರ್ಟ್ ಗ್ಯಾಲರಿ ಇವರಿಂದ ಚಿತ್ರಗಾರರ ಚಿತ್ರಗಳ ಮಾರಾಟ ಮಾಡಲಾಗುತ್ತಿದೆ. ಈ ಗ್ಯಾಲರಿಯ ಜಾಲತಾಣದಿಂದ ಕೆಲವು ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಇವರಲ್ಲಿ ಹಿಂದೂದ್ವೇಷಿ ಚಿತ್ರಕಾರ ಎಂ.ಎಫ್. ಹುಸೇನ್ ಇವರ ಕೆಲವು ಚಿತ್ರಗಳು ಒಳಗೊಂಡಿದೆ.