
ಬರ್ನ್ (ಸ್ವಿಟ್ಜರ್ಲೆಂಡ್) – ದೇಶದ ಜನಸಂಖ್ಯೆಯನ್ನು ೨೦೫೦ ರ ವೇಳೆಗೆ ೧ ಕೋಟಿಗೆ ಸೀಮಿತಗೊಳಿಸುವ ಮತ್ತು ವಲಸೆಯ ಮೇಲೆ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ಹೇರುವ ಪ್ರಸ್ತಾಪವನ್ನು ಇಲ್ಲಿನ ನಾಗರಿಕರು ಸಾರ್ವಜನಿಕ ಮತದಾನದ ಮೂಲಕ ತೀವ್ರವಾಗಿ ವಿರೋಧಿಸಿದ್ದಾರೆ. ಬಲಪಂಥೀಯ ವಿಚಾರಧಾರೆಯ ‘ಸ್ವಿಸ್ ಪೀಪಲ್ಸ್ ಪಾರ್ಟಿ’ ಬೆಂಬಲಿತ ಈ ಪ್ರಸ್ತಾಪದ ವಿರುದ್ಧ ಶೇಕಡಾ ೫೫ ರಷ್ಟು ಮತದಾರರು ಮತ ಚಲಾಯಿಸಿದ್ದು, ಇದರಿಂದಾಗಿ ಈ ಪ್ರಸ್ತಾಪವು ಬಿದ್ದುಹೋಗಿದೆ.
ವಲಸೆಯಿಂದಾಗಿ ಹೆಚ್ಚುತ್ತಿರುವ ಜನಸಂಖ್ಯೆ, ವಸತಿ ಸೌಕರ್ಯಗಳ ಮೇಲಿನ ಒತ್ತಡ, ಸಾರ್ವಜನಿಕ ಸೇವೆಗಳು ಮತ್ತು ಪರಿಸರದ ಮೇಲಾಗುತ್ತಿರುವ ಪರಿಣಾಮಗಳನ್ನು ಉಲ್ಲೇಖಿಸಿ ಈ ಪ್ರಸ್ತಾಪವನ್ನು ಮಂಡಿಸಲಾಗಿತ್ತು. ಒಂದು ವೇಳೆ ಈ ಪ್ರಸ್ತಾಪವು ಅಂಗೀಕಾರಗೊಂಡಿದ್ದರೆ, ದೇಶದ ಜನಸಂಖ್ಯೆಯು ೧ ಕೋಟಿಯ ಮಿತಿಯನ್ನು ಮೀರಿದ ತಕ್ಷಣವೇ ಯುರೋಪಿಯನ್ ಯೂನಿಯನ್ ಜೊತೆಗಿನ ಮುಕ್ತ ಸಂಚಾರದ ಒಪ್ಪಂದ ಸೇರಿದಂತೆ ಕೆಲವು ಅಂತರರಾಷ್ಟ್ರೀಯ ಒಪ್ಪಂದಗಳನ್ನು ಮರುಪರಿಶೀಲಿಸಬೇಕಾಗುತ್ತಿತ್ತು.
ಕೈಗಾರಿಕಾ ಸಂಘಟನೆಗಳು, ಅರ್ಥಶಾಸ್ತ್ರಜ್ಞರು ಮತ್ತು ಕೆಲವು ಸರಕಾರಿ ಪ್ರತಿನಿಧಿಗಳು ಈ ಪ್ರಸ್ತಾಪವನ್ನು ಬಲವಾಗಿ ವಿರೋಧಿಸಿದರು. ಔಷಧ ಉತ್ಪಾದನೆ, ಹಣಕಾಸು, ತಂತ್ರಜ್ಞಾನ ಮತ್ತು ಆರೋಗ್ಯ ಸೇವಾ ಕ್ಷೇತ್ರಗಳಲ್ಲಿ ವಿದೇಶಿ ಕಾರ್ಮಿಕರ ಅಗತ್ಯತೆಯನ್ನು ಅವರು ಒತ್ತಿಹೇಳಿದ್ದರು. ವಿದೇಶಿ ಕೆಲಸಗಾರರ ಮೇಲೆ ಇಂತಹ ನಿಷೇಧ ಹೇರಿದರೆ ದೇಶದ ಆರ್ಥಿಕತೆಗೆ ಭಾರಿ ಹೊಡೆತ ಬೀಳಬಹುದು ಎಂದು ಅವರು ಎಚ್ಚರಿಕೆ ನೀಡಿದರು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !