ದೋಷಿಗಳಿಗೆ ಎಂತಹ ಶಿಕ್ಷೆ ನೀಡುತ್ತೇವೆಂದರೆ ಭವಿಷ್ಯದಲ್ಲಿ ಆ ಶಿಕ್ಷೆಯು ಉದಾಹರಣೆಯಾಗಿ ನೋಡಲಾಗುವುದು ! – ಹತ್ರಾಸ್ ಪ್ರಕರಣದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹೇಳಿಕೆ
ಉತ್ತರಪ್ರದೇಶದ ಎಲ್ಲ ತಾಯಂದಿರು ಹಾಗೂ ಸಹೋದರಿಯರ ಗೌರವ ಮತ್ತು ಸ್ವಾಭಿಮಾನವನ್ನು ಕೆಡಿಸಲು ಪ್ರಯತ್ನಿಸುವವರ ನಾಶ ಖಚಿತವಿದೆ. ಭವಿಷ್ಯದಲ್ಲಿ ಅದನ್ನು ಉದಾಹರಣೆಯಾಗಿ ನೋಡುವ ರೀತಿಯಲ್ಲಿ ಅವರಿಗೆ ಶಿಕ್ಷೆಯಾಗುವುದು. ನಿಮ್ಮ ಉತ್ತರ ಪ್ರದೇಶ ಸರಕಾರ ಪ್ರತಿಯೊಬ್ಬ ತಾಯಿ ಮತ್ತು ಸಹೋದರಿಯ ರಕ್ಷಣೆ ಮತ್ತು ಅಭಿವೃದ್ಧಿಗೆ ಬದ್ಧವಾಗಿದೆ.