ನೀರಿನ ವಿವಾದದ ಹಿನ್ನೆಲೆಯಲ್ಲಿ ಹತ್ಯೆ
ಹಿಂದುತ್ವನಿಷ್ಠ ಕಾರ್ಯಕರ್ತರಿಂದ ಮುಸ್ಲಿಮರ ಮನೆಗಳ ಮೇಲೆ ಕಲ್ಲು ತೂರಾಟ
ಆರೋಪಿ ಮುಸ್ಲಿಮರ ಅಕ್ರಮ ಮನೆಗಳನ್ನು ಧ್ವಂಸ ಮಾಡಿದ ಸರ್ಕಾರ, 12 ಜನರ ವಿರುದ್ಧ ಪ್ರಕರಣ ದಾಖಲು

ಡೆಹ್ರಾಡೂನ್ (ಉತ್ತರಾಖಂಡ) – ಇಲ್ಲಿನ ಸಹಸ್ಪುರ ಭಾಗದ ಬೈರಾಗಿವಾಲಾದಲ್ಲಿ ಬಿಜೆಪಿ ಯುವ ನಾಯಕ ವಿನೋದ್ ಕುಮಾರ್ ಅವರನ್ನು ಮುಸ್ಲಿಮರ ಗುಂಪೊಂದು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದೆ. ಜೂನ್ 13 ರ ಸಂಜೆ ನಡೆದ ಈ ಘಟನೆಯ ನಂತರ, ಹಿಂದುತ್ವನಿಷ್ಠ ಕಾರ್ಯಕರ್ತರು ತೀವ್ರವಾಗಿ ಖಂಡಿಸಿ ಮುಸ್ಲಿಮರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 12 ಮುಸ್ಲಿಮರ ಹೆಸರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ, ಹಾಗೂ ಆರೋಪಿ ಮುಸ್ಲಿಮರ ಅಕ್ರಮ ಮನೆಗಳನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ವಿನೋದ್ ಕುಮಾರ್ ಅವರು ಬಿಜೆಪಿಯ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೋರ್ಚಾದ ಜಿಲ್ಲಾ ಸಾಮಾಜಿಕ ಮಾಧ್ಯಮ ಸಂಯೋಜಕರಾಗಿದ್ದರು.
🚨 Dehradun, Uttarakhand: BJP Leader Allegedly Killed by an Armed Muslim Mob Over a Water Dispute
A dispute over water escalated into the brutal murder of a BJP leader with a hammer.
Following the incident, Hindu activists staged protests, while authorities demolished alleged… pic.twitter.com/znfXBO0bF0
— Sanatan Prabhat (@SanatanPrabhat) June 14, 2026
1. ನೆರೆಹೊರೆಯಲ್ಲಿ ವಾಸಿಸುವ ಇಮ್ತಿಯಾಜ್ ಮತ್ತು ವಿನೋದ್ ಕುಮಾರ್ ಹಾಗೂ ಅವರ ಕುಟುಂಬದವರ ನಡುವೆ ನೀರಿಗೆ ಸಂಬಂಧಿಸಿ ಹಳೆಯ ವಿವಾದವಿತ್ತು. ಜೂನ್ 13 ರಂದು ನೀರು ಬಿಡುವ ಬಗ್ಗೆ ಮತ್ತೆ ಜಗಳ ನಡೆಯಿತು. ಇದಾದ ಕೂಡಲೇ ಸಶಸ್ತ್ರ ಮುಸ್ಲಿಮರ ಗುಂಪು ವಿನೋದ್ ಕುಮಾರ್ ಅವರ ಮನೆಯ ಮೇಲೆ ದಾಳಿ ಮಾಡಿತು.
2. ಈ ದಾಳಿಯಲ್ಲಿ ವಿನೋದ್ ಅವರನ್ನು ಹತ್ಯೆ ಮಾಡಲಾಯಿತು. ಅಲ್ಲದೇ ಅವರ ಸಹೋದರರಾದ ಅಶೋಕ್, ರಾಜೇಶ್ ಮತ್ತು ಅತ್ತಿಗೆ ಸುಷ್ಮಾ ಅವರು ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
3. ವಿನೋದ್ ಅವರ ಗಾಯಾಳು ಸಹೋದರ ಅಶೋಕ್ ತಮ್ಮ ಪೊಲೀಸ್ ದೂರಿನಲ್ಲಿ, “ನೆರೆಯ ಹೊಲದ ನೀರಿನ ವಿಷಯವಾಗಿ ಈ ಹಿಂದೆ ವಿವಾದ ನಡೆದಿತ್ತು. ಈ ಹೊಲ ಇಮ್ತಿಯಾಜ್‌ಗೆ ಸೇರಿದ್ದಾಗಿದೆ. ಜೂನ್ 13 ರ ಸಂಜೆ 6 ಗಂಟೆಗೆ ರಜ್ಜಾಕ್, ಇಮ್ತಿಯಾಜ್, ಅಮನ್, ಯೂನುಸ್, ಶಾಹಬಾಜ್, ಶರಾಫತ್ ಅಲಿ, ಮಾಸೂಮ್, ಆದಿಲ್, ಶಾಮೂನ್, ಸಲ್ಮಾನ್, ಜಾವೇದ್, ಇಂತೆಜಾರ್ ಮತ್ತು ಬೈರಾಗಿವಾಲಾದ ಸುಮಾರು 35-40 ಇತರ ನಿವಾಸಿಗಳು ಲಾಠಿ, ಮರದ ಹಲಗೆ, ಸುತ್ತಿಗೆ ಮತ್ತು ಹಾರೆಗಳನ್ನು ಹಿಡಿದುಕೊಂಡು ನಮ್ಮ ಮನೆಗೆ ನುಗ್ಗಿದರು ಮತ್ತು ನಮ್ಮ ಕುಟುಂಬದವರ ಮೇಲೆ ದಾಳಿ ಮಾಡಿದರು. ವಿನೋದ್ ಅವರನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಲಾಯಿತು” ಎಂದು ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !