ಪ್ರಧಾನಮಂತ್ರಿ ಮೋದಿಯವರ ಹೇಳಿಕೆ

ನವದೆಹಲಿ – ಕಳೆದ 12 ವರ್ಷಗಳಲ್ಲಿ ಭಾರತದಲ್ಲಿನ ಆರೋಗ್ಯ ಸೇವೆಗಳನ್ನು ಇನ್ನಷ್ಟು ಉತ್ತಮಗೊಳಿಸಲು, ಜನರಿಗೆ ಕೈಗೆಟುಕುವಂತೆ ಮಾಡಲು ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸಗಳನ್ನು ಮಾಡಲಾಗಿದೆ. ನಿರೋಗಿ ಭಾರತದ ನಿರ್ಮಾಣಕ್ಕಾಗಿ ಸರಕಾರವು ಈ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ‘ಎಕ್ಸ್’ (ಟ್ವಿಟರ್) ಮೂಲಕ ಹೇಳಿದ್ದಾರೆ. ಅವರು ಮುಂದುವರಿದು, “ವಿಶ್ವದ ಅತಿ ದೊಡ್ಡ ಆರೋಗ್ಯ ಕಾರ್ಯಕ್ರಮವಾದ ‘ಆಯುಷ್ಮಾನ್ ಭಾರತ್’ವನ್ನು ಅನುಷ್ಠಾನಗೊಳಿಸಿದ ದೇಶವಾಗಿ ಭಾರತ ಗುರುತಿಸಿಕೊಂಡಿರುವುದರ ಹೆಮ್ಮೆ ನನಗಿದೆ. ಈ ಯೋಜನೆಯು ಸಮಾಜದ ಅತ್ಯಂತ ಬಡ ಮತ್ತು ದುರ್ಬಲ ವರ್ಗದವರಿಗೆ ಅತ್ಯುತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ” ಎಂದಿದ್ದಾರೆ.
ಪ್ರಧಾನಮಂತ್ರಿಯವರು ಮಾತನಾಡುತ್ತ, ಸಾಮಾನ್ಯ ಜನರಿಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯನ್ನು ತಲುಪಿಸಲು ದೇಶವು ಕಳೆದ 12 ವರ್ಷಗಳಲ್ಲಿ ಕಠಿಣ ಪರಿಶ್ರಮಪಟ್ಟಿದೆ ಎಂದು ಹೇಳಿದರು. ‘ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ’ಯನ್ನು ಉಲ್ಲೇಖಿಸಿದ ಅವರು, ಈ ಯೋಜನೆಯಿಂದಾಗಿ ಔಷಧಗಳು, ‘ಸ್ಟೆಂಟ್‌ಗಳು’ (ಹೃದ್ರೋಗ ಚಿಕಿತ್ಸೆಯಲ್ಲಿ ರಕ್ತನಾಳಗಳ ತಡೆಯನ್ನು ನಿವಾರಿಸಲು ಬಳಸುವ ಸಣ್ಣ ಲೋಹದ ನಳಿಕೆ) ಮತ್ತು ಮೊಣಕಾಲಿನ ‘ಇಂಪ್ಲಾಂಟ್‌ಗಳು’ (ಮೊಣಕಾಲಿನ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಲೋಹದ ಕಪ್ ಅಥವಾ ಕೀಲು) ಗಣನೀಯವಾಗಿ ಅಗ್ಗವಾಗಿವೆ ಎಂದು ತಿಳಿಸಿದರು. ಇದರಿಂದಾಗಿ ಲಕ್ಷಾಂತರ ಜನರಿಗೆ ಭಾರಿ ಆರ್ಥಿಕ ನೆಮ್ಮದಿ ಸಿಕ್ಕಿದೆ ಎಂದು ಹೇಳಿದರು.
ಆರೋಗ್ಯ ಸೇವೆಯನ್ನು ಸುಲಭಗೊಳಿಸುವುದು ಯಾವುದೇ ರಾಷ್ಟ್ರಕ್ಕೆ ಅತ್ಯಂತ ಪ್ರಮುಖ ಹೂಡಿಕೆಯಾಗಿದೆ !
ಕೇಂದ್ರ ಸರಕಾರದ ನಾಗರಿಕ ಸಹಭಾಗಿತ್ವದ ವೇದಿಕೆಯಾದ ‘ಮೈಗವ್ ಇಂಡಿಯಾ’ (‘MyGov India’)ವು ‘ಆರೋಗ್ಯ ಸೇವೆಯನ್ನು ಸುಲಭಗೊಳಿಸುವುದು ಯಾವುದೇ ರಾಷ್ಟ್ರದ ಅತ್ಯಂತ ಪ್ರಮುಖ ಹೂಡಿಕೆಯಾಗಿದೆ. ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ಭಾರತವು ಕಳೆದ 12 ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಭಾರಿ ಪ್ರಗತಿ ಸಾಧಿಸಿದೆ. ಇಂದು ದೇಶದ ಆರೋಗ್ಯ ರಕ್ಷಣೆಯ ಮೂಲಸೌಕರ್ಯಗಳು ಹಿಂದೆಂದಿಗಿಂತಲೂ ಹೆಚ್ಚು ಸಶಕ್ತವಾಗಿವೆ’ ಎಂದು ಹೇಳಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ