ಪಿ.ಎಫ್.ಐ.ನ ಮೂವರು ಸದಸ್ಯರಿಗೆ ಜಾಮೀನು ನಿರಾಕರಿಸಿದ ಮುಂಬಯಿ ಉಚ್ಚ ನ್ಯಾಯಾಲಯ

2047 ರೊಳಗೆ ಭಾರತವನ್ನು ಇಸ್ಲಾಮಿಸ್ತಾನ್ ಮಾಡಲು ಸಂಚು

ಮುಂಬಯಿ – ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಸಂಸ್ಥೆಯು 2047 ರೊಳಗೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಪರಿವರ್ತಿಸಲು ಸಂಚು ರೂಪಿಸಿದೆ ಎಂದು ಹೇಳುತ್ತಾ, ಮುಂಬಯಿ ಉಚ್ಚ ನ್ಯಾಯಾಲಯವು ನಿಷೇಧಿತ ಸಂಘಟನೆಯಾದ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಮೂವರು ಸದಸ್ಯರಿಗೆ ಜಾಮೀನು ನಿರಾಕರಿಸಿದೆ. ಇದಕ್ಕೂ ಮುನ್ನ ದೆಹಲಿ ಉಚ್ಚ ನ್ಯಾಯಾಲಯವೂ ಕೂಡ ಒಂದು ಪ್ರಕರಣದಲ್ಲಿ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.

1. 14 ಜೂನ್ 2022 ರಂದು ಮಾಲೆಗಾಂವ್‌ ನಲ್ಲಿ ಈ ಸಂಘಟನೆಯ ಹೊಸ ಕಾರ್ಯಾಲಯದ ಉದ್ಘಾಟನೆಯಾಯಿತು. ತದನಂತರ ಅಲ್ಲಿ ನಡೆದ ರಹಸ್ಯ ಸಭೆಯಲ್ಲಿ ರಝಿ ಅಹ್ಮದ್ ಖಾನ್, ಕಯ್ಯುಮ್ ಅಬ್ದುಲ್ ಶೇಖ್ (ಪುಣೆ) ಮತ್ತು ಉನೈಸ್ ಉಮರ್ ಖಯ್ಯಾಮ್ ಪಟೇಲ್ (ಜಲಗಾಂವ್) ಸೇರಿದಂತೆ ಇತರ 8 ರಿಂದ 10 ಜನರು ಉಪಸ್ಥಿತರಿದ್ದರು.

2. ಭಾರತದಲ್ಲಿನ ಮುಸ್ಲಿಮರ ದೌರ್ಜನ್ಯಗಳು, ಮಾಬ್ ಲಿಂಚಿಂಗ್ (ಸಮೂಹದಿಂದ ನಡೆಯುವ ಹತ್ಯೆ) ಮುಂತಾದ ವಿಷಯಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು. ದೇಶದ ವಿರುದ್ಧ ಯುದ್ಧ ಸಾರಲು ಮುಸ್ಲಿಮರ ಒಗ್ಗಟ್ಟು ಅತ್ಯಗತ್ಯ ಎಂದು ಹೇಳುತ್ತಾ, ಸರಕಾರ ವಿರೋಧಿ ವಾತಾವರಣವನ್ನು ನಿರ್ಮಿಸಲು ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಸಂವಾದ ನಡೆಸುವಂತೆ ಉಪಸ್ಥಿತರಿದ್ದವರಿಗೆ ಸೂಚನೆ ನೀಡಲಾಯಿತು.

3. ಮಾಲೆಗಾಂವ್‌ ನಲ್ಲಿನ ಈ ಸಂಘಟನೆಯ ಮುಖ್ಯಸ್ಥನು ಮುಸ್ಲಿಂ ಧರ್ಮದ ವಿರುದ್ಧ ಮಾತನಾಡುವವರನ್ನು ಕೊಲ್ಲುವಂತೆ ಫತ್ವಾ (ಆದೇಶ) ಹೊರಡಿಸಿದ್ದನು. ನಾಶಿಕ್ ನ ಭಯೋತ್ಪಾದನಾ ನಿಗ್ರಹ ದಳದ ಪೊಲೀಸ್ ಗುರುದೇವ ಕಾಳೆ ಅವರು 22 ಸೆಪ್ಟೆಂಬರ್ 2022 ರಂದು ಈ ಪ್ರಕರಣದಲ್ಲಿ ದೂರು ದಾಖಲಿಸಿದ್ದರು. ತದನಂತರ ಕೆಲವು ವ್ಯಕ್ತಿಗಳನ್ನು ಬಂಧಿಸಲಾಗಿತ್ತು.

4. ನಾಶಕ್ ನ ವಿಶೇಷ ನ್ಯಾಯಾಧೀಶರು ಬಂಧಿತರ ಜಾಮೀನನ್ನು ತಿರಸ್ಕರಿಸಿದ ನಂತರ, ಅವರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಆ ತೀರ್ಪನ್ನು ಪ್ರಶ್ನಿಸಿದ್ದರು; ಆದರೆ ಆರೋಪಿಗಳು ‘ವಿಷನ್ 2047’ರ ಸಕ್ರಿಯ ಕಾರ್ಯಕರ್ತರಾಗಿದ್ದಾರೆಂದು ಹೇಳುತ್ತಾ ನ್ಯಾಯಾಲಯವು ಜಾಮೀನನ್ನು ತಿರಸ್ಕರಿಸಿತು.

5. 2047 ರೊಳಗೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಪರಿವರ್ತಿಸಲು ‘ವಿಷನ್-2047’ ಅನ್ನು ಸಾಧಿಸುವ ಸಂಚು ರೂಪಿಸುವುದು.

ಆರೋಪಿಗಳ ಪಾತ್ರದ ಕುರಿತು ನ್ಯಾಯಾಲಯ ವ್ಯಕ್ತಪಡಿಸಿದ ಅವಲೋಕನ

1. ಅಪರಾಧಿಕ ಬಲಪ್ರಯೋಗದ ಮೂಲಕ ಸರಕಾರವನ್ನು ಹೆದರಿಸಲು ಸಂಚು ರೂಪಿಸುವುದು.
2. ಜನರು ತಮ್ಮೊಂದಿಗೆ ಸೇರಿಕೊಳ್ಳುವಂತೆ ಪ್ರೇರೇಪಿಸುವುದು.
3. ‘ವಾಟ್ಸ್ ಆಪ್’ ಗುಂಪುಗಳನ್ನು ರಚಿಸಿ ರಾಜ್ಯದ ವಿರುದ್ಧ ದ್ವೇಷ ಮತ್ತು ರಾಷ್ಟ್ರವಿರೋಧಿ ನೀತಿಯನ್ನು ಹರಡುವುದು.
4. ರಾಷ್ಟ್ರಹಿತಕ್ಕೆ ಧಕ್ಕೆ ತರುವ ಸಂದೇಶಗಳನ್ನು ಪ್ರಸಾರ ಮಾಡುವುದು.

ಸಂಪಾದಕೀಯ ನಿಲುವು

ಸರಕಾರವು ಇಂತಹ ದೇಶದ್ರೋಹಿ ಜನರಿಗೆ ಗಲ್ಲು ಶಿಕ್ಷೆ ನೀಡುವಂತೆ ಪ್ರಯತ್ನಿಸುವುದು ಅತ್ಯಗತ್ಯ!