ಅಮೇರಿಕಾದ ಒತ್ತಡವನ್ನು ಬದಿಗೊತ್ತಿ ರಷ್ಯಾದಿಂದ ಇಂಧನ ಖರೀದಿ

ನವ ದೆಹಲಿ – ಜಾಗತಿಕ ನಿರ್ಬಂಧಗಳು ಮತ್ತು ಭೂ-ರಾಜಕೀಯ ಒತ್ತಡಗಳಿದ್ದಾಗ್ಯೂ ಭಾರತೀಯ ತೈಲ ಸಂಸ್ಕರಣಾ ಸಂಸ್ಥೆಗಳು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲದ ಖರೀದಿಯನ್ನು ಇನ್ನಷ್ಟು ಹೆಚ್ಚಿಸಿವೆ. ‘ಯುರೋಪಿಯನ್ ಥಿಂಕ್ ಟ್ಯಾಂಕ್’ ಮತ್ತು ‘ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಆಂಡ್ ಕ್ಲೀನ್ ಏರ್’ (ಸಿ.ಆರ್.ಇ.ಎ.) ಸಂಸ್ಥೆಗಳ ವರದಿಯ ಪ್ರಕಾರ, ಭಾರತವು ಮೇ ತಿಂಗಳಿನಲ್ಲಿ ರಷ್ಯಾದಿಂದ ಅಂದಾಜು 5.8 ಶತಕೋಟಿ ಯುರೋ (63 ಸಾವಿರದ 817 ಕೋಟಿ ರೂಪಾಯಿ) ಮೌಲ್ಯದ ಇಂಧನವನ್ನು ಆಮದು ಮಾಡಿಕೊಂಡಿದೆ. ಇದರಿಂದಾಗಿ ಚೀನಾದ ನಂತರ ರಷ್ಯಾದಿಂದ ಇಂಧನ ಖರೀದಿಸುವ ವಿಶ್ವದ ಎರಡನೇ ಅತಿ ದೊಡ್ಡ ದೇಶವಾಗಿ ಭಾರತ ಹೊರಹೊಮ್ಮಿದೆ. ರಷ್ಯಾದಿಂದ ತೈಲ ಖರೀದಿ ಮಾಡದಂತೆ ಸಲಹೆ ನೀಡಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡಕ್ಕೆ ಮಣಿಯದ ಭಾರತದ ಒಟ್ಟು ಕಚ್ಚಾ ತೈಲದ ಆಮದು, ಮೇ ತಿಂಗಳಿನಲ್ಲಿ ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇಕಡಾ 8% ರಷ್ಟು ಹೆಚ್ಚಾಗಿದೆ.
1. ಗುಜರಾತಿನ ಜಾಮ್ ನಗರ್ ಮತ್ತು ವಾಡಿನಾರ್ ನಂತಹ ಪ್ರಮುಖ ತೈಲ ಸಂಸ್ಕರಣಾ ಕೇಂದ್ರಗಳು, ಹಾಗೂ ಸರಕಾರಿ ತೈಲ ಸಂಸ್ಥೆಗಳು ಈ ಅವಧಿಯಲ್ಲಿ ರಷ್ಯಾದ ಕಚ್ಚಾ ತೈಲದ ಆಮದನ್ನು ಗಣನೀಯವಾಗಿ ಹೆಚ್ಚಿಸಿವೆ.
2. ಮೇ ತಿಂಗಳಿನಲ್ಲಿ ಭಾರತ ರಷ್ಯಾದಿಂದ ಮಾಡಿದ ಒಟ್ಟು ಆಮದಿನಲ್ಲಿ ಅಂದಾಜು ಶೇಕಡಾ 83% ರಷ್ಟು ಕಚ್ಚಾ ತೈಲವಾಗಿತ್ತು, ಇದರ ಮೌಲ್ಯ 4.8 ಶತಕೋಟಿ ಯುರೋ (52 ಸಾವಿರದ 814 ಕೋಟಿ ರೂಪಾಯಿ) ಆಗಿತ್ತು. ಇನ್ನು ತೈಲ ಉತ್ಪನ್ನಗಳು ಮತ್ತು ಕಲ್ಲಿದ್ದಲಿನ ಆಮದು ಕ್ರಮವಾಗಿ 550 ದಶಲಕ್ಷ ಯುರೋ (6 ಸಾವಿರದ 52 ಕೋಟಿ ರೂಪಾಯಿ) ಮತ್ತು 429 ದಶಲಕ್ಷ ಯುರೋ (4 ಸಾವಿರದ 721 ಕೋಟಿ ರೂಪಾಯಿ) ಆಗಿತ್ತು.
3. ಸಿ.ಆರ್.ಇ.ಎ. ಪ್ರಕಾರ, ಈ ವರ್ಷದ ಆರಂಭದಲ್ಲಿ ಆಮದನ್ನು ಪುನಃ ಆರಂಭಿಸಿದ ನಂತರ ಸರಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಸಂಸ್ಥೆಗಳೂ ಸಹ ಖರೀದಿಯನ್ನು ಹೆಚ್ಚಿಸಿವೆ. ‘ನ್ಯೂ ಮಂಗಳೂರು ರಿಫೈನರಿ’ ಮತ್ತು ‘ವಿಶಾಖಪಟ್ಟಣಂ ರಿಫೈನರಿ’ ಸಂಸ್ಥೆಗಳು ನವೆಂಬರ್ 2025 ರ ಕೊನೆಯಲ್ಲಿ ರಷ್ಯಾದಿಂದ ಕಚ್ಚಾ ತೈಲದ ಆಮದನ್ನು ಸ್ಥಗಿತಗೊಳಿಸಿದ್ದವು. ಇದೇ ಸಂಸ್ಥೆಗಳು ಮಾರ್ಚ್ ತಿಂಗಳಿನಲ್ಲಿ ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರಿಸಿದವು.
4. ಯುಕ್ರೇನ್ ಮೇಲೆ ರಷ್ಯಾ ಮಾಡಿದ ಆಕ್ರಮಣದ ನಂತರ ಪಾಶ್ಚಾತ್ಯ ದೇಶಗಳು ಹೇರಿದ ನಿರ್ಬಂಧಗಳು ಮತ್ತು ವ್ಯಾಪಾರ ನಿಷೇಧಗಳಿಂದಾಗಿ, ಜಾಗತಿಕ ಇಂಧನ ಹರಿವಿನಲ್ಲಿ ಬದಲಾವಣೆಯಾದಾಗಿನಿಂದ ಭಾರತವು ರಷ್ಯಾದಿಂದ ತೈಲ ಖರೀದಿಸುವ ಅತಿ ದೊಡ್ಡ ದೇಶಗಳಲ್ಲಿ ಒಂದಾಗಿದೆ. ಭಾರತೀಯ ತೈಲ ಸಂಸ್ಕರಣಾ ಸಂಸ್ಥೆಗಳು ರಿಯಾಯಿತಿ ದರದಲ್ಲಿ ಸಿಗುತ್ತಿರುವ ರಷ್ಯಾದ ಕಚ್ಚಾ ತೈಲದ ಖರೀದಿಯನ್ನು ನಿರಂತರವಾಗಿ ಹೆಚ್ಚಿಸುತ್ತಾ ಬಂದಿವೆ, ಇದರಿಂದಾಗಿ ಹೆಚ್ಚುತ್ತಿರುವ ಇಂಧನ ವೆಚ್ಚವನ್ನು ಸರಿದೂಗಿಸಲು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡಲು ಸಹಾಯವಾಗಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು