
ದೇಹೂಗಾಂವ್ (ಪುಣೆ ಜಿಲ್ಲೆ) – ಆಷಾಢಿ ವಾರಿ ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಶ್ರೀಕ್ಷೇತ್ರ ದೇಹೂನ ಪವಿತ್ರ ಇಂದ್ರಾಯಣಿ ನದಿಯಲ್ಲಿ ನೂರಾರು ಮೀನುಗಳು ಸತ್ತ ಸ್ಥಿತಿಯಲ್ಲಿ ತೇಲುತ್ತಿರುವುದು ಕಂಡುಬಂದಿದೆ. ನದಿಯ ಕಲುಷಿತ ನೀರಿನಿಂದಾಗಿ ಭಾರಿ ಪ್ರಮಾಣದಲ್ಲಿ ಮೀನುಗಳು ಸಾವನ್ನಪ್ಪಿದ್ದು, ಈ ಸತ್ತ ಮೀನುಗಳು ನದಿಯ ತೀರಕ್ಕೆ ತೇಲಿ ಬಂದಿರುವುದರಿಂದ ಸುತ್ತ ಮುತ್ತಲಿನ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಹರಡಿದೆ. ವಾರಿಗಾಗಿ ದೇಹೂಗೆ ಲಕ್ಷಾಂತರ ವಾರಕರಿಗಳು (ಯಾತ್ರಿಕರು) ಬರುತ್ತಿದ್ದು, ಅವರು ಇದೇ ನದಿಯಲ್ಲಿ ಸ್ನಾನ ಮತ್ತು ಆಚಮನ ಮಾಡುತ್ತಾರೆ. ಇಂತಹ ಪವಿತ್ರ ಸಮಯದಲ್ಲಿ ನದಿಗೆ ಬಂದೊದಗಿದ ಈ ದುಸ್ಥಿತಿಯು ಭಕ್ತರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ.
ಈ ಕಾರಣದಿಂದಾಗಿ, ‘ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯ ಕಾರ್ಯಕರ್ತರು ಮತ್ತು ಸ್ಥಳೀಯ ನಾಗರಿಕರು ತಕ್ಷಣವೇ ನದಿತೀರಕ್ಕೆ ಇಳಿದು ಸತ್ತ ಮೀನುಗಳನ್ನು ಹೊರತೆಗೆದು ಪರಿಸರವನ್ನು ಸ್ವಚ್ಛಗೊಳಿಸಿದರು. (ಈ ಕೆಲಸವನ್ನು ‘ಆರ್ಟ್ ಆಫ್ ಲಿವಿಂಗ್’ ಕಾರ್ಯಕರ್ತರು ಮತ್ತು ಸ್ಥಳೀಯ ನಾಗರಿಕರು ಮಾಡಬೇಕಾಗಿದ್ದರೆ, ಆಡಳಿತ ಅವಶ್ಯಕತೆ ಏತಕ್ಕಾಗಿ ಬೇಕು ? – ಸಂಪಾದಕರು)
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !