ಹುಂಡಿಯ ಹಣ ಕದ್ದ ಆರೋಪದ ಪ್ರಕರಣ
ಮತ್ತೊಬ್ಬ ಸಿಬ್ಬಂದಿಯ ತನಿಖೆಯೂ ನಡೆಯುತ್ತಿದೆ

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದ ಹುಂಡಿಯ ಹಣ ಕಳುವಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡವು ಮಂದಿರದ ಸಿಬ್ಬಂದಿ ಲವಕುಶ ಮಿಶ್ರಾ ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈ ಸಮಯದಲ್ಲಿ ತನಿಖಾ ಸಂಸ್ಥೆಗೆ ಮಿಶ್ರಾ ಅವನ ಮನೆಯಲ್ಲಿ 10 ಲಕ್ಷ ರೂಪಾಯಿ ಸಿಕ್ಕಿದೆ. ಆತ ಸ್ವಲ್ಪ ಹಣವನ್ನು ಕಪಾಟಿನಲ್ಲಿ, ಇನ್ನು ಸ್ವಲ್ಪ ಹಣವನ್ನು ಸಗಣಿಯ ರಾಶಿಯ ಕೆಳಗೆ ಬಚ್ಚಿಟ್ಟಿದ್ದನು. ಮಿಶ್ರಾ ಮಂದಿರಕ್ಕೆ ಬಂದ ದೇಣಿಗೆಯನ್ನು ಎಣಿಸುವ ಕೆಲಸ ಮಾಡುತ್ತಾನೆ. ಅವನು ಮೀನಾಪುರದ ಫಗೌಲಿ ಗ್ರಾಮದ ನಿವಾಸಿಯಾಗಿದ್ದಾನೆ.
ವಿರೋಧ ಪಕ್ಷಗಳು ಹುಂಡಿಯ ಹಣ ಕಳುವಾಗಿದೆ ಎಂದು ಆರೋಪಿಸಿದ ನಂತರ, ಈ ಪ್ರಕರಣವನ್ನು ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುವಂತೆ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿತು. ಮುಖ್ಯಮಂತ್ರಿಗಳು ಕೆಲವೇ ಗಂಟೆಗಳಲ್ಲಿ ತಂಡವನ್ನು ರಚಿಸಿದರು ಮತ್ತು ಅದೇ ದಿನ ಮಿಶ್ರಾ ನನ್ನು ವಶಕ್ಕೆ ಪಡೆಯಲಾಯಿತು. ಈ ಪ್ರಕರಣದಲ್ಲಿ ಮತ್ತೊಬ್ಬ ಸಿಬ್ಬಂದಿಯ ತನಿಖೆಯೂ ನಡೆಯುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಆತನಿಗೂ ಮಿಶ್ರಾನಂತೆಯೇ ದೇಣಿಗೆ ಮೊತ್ತವನ್ನು ಎಣಿಸುವ ಕೆಲಸವಿತ್ತು.
18 ಸಾವಿರ ರೂಪಾಯಿ ಸಂಬಳದಲ್ಲಿ ಒಂದೂವರೆ ಕೋಟಿ ರೂಪಾಯಿ ಬೆಲೆಯ ಜಮೀನು ಖರೀದಿ !
ಶಂಕಿತರಿಬ್ಬರೂ ಸಿಬ್ಬಂದಿಗೆ ತಿಂಗಳಿಗೆ 18 ರಿಂದ 20 ಸಾವಿರ ರೂಪಾಯಿ ಸಂಬಳ ನೀಡಲಾಗುತ್ತದೆ; ಆದರೆ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಅವರ ಸಂಪತ್ತಿನಲ್ಲಿ ಹಠಾತ್ ಹೆಚ್ಚಳವಾಗಿರುವುದರಿಂದ ತನಿಖಾ ತಂಡವು ಈ ಆದಾಯದ ಮೂಲವನ್ನು ಹುಡುಕುತ್ತಿದೆ. ಒಬ್ಬ ಸಿಬ್ಬಂದಿ ಸುಮಾರು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಜಮೀನು ಖರೀದಿಸಿದ್ದರೆ, ಮತ್ತೊಬ್ಬ 40 ಲಕ್ಷ ರೂಪಾಯಿ ಮೌಲ್ಯದ ಹೊಸ ಫ್ಲಾಟ್ ಖರೀದಿಸಿರುವುದು ಬಹಿರಂಗವಾಗಿದೆ.
ಮಿಶ್ರಾನ ತಂದೆ ಬಚ್ಚೂಲಾಲ್ ತಮ್ಮ ಮಗ ನಿರಪರಾಧಿ ಎಂದು ಹೇಳಿದ್ದು, ಮನೆ ನಿರ್ಮಾಣಕ್ಕಾಗಿ ಪಿತ್ರಾರ್ಜಿತ ಜಮೀನನ್ನು ಅಡವಿಟ್ಟು ಈ ಹಣವನ್ನು ತಂದಿರುವುದಾಗಿ ತಿಳಿಸಿದ್ದಾರೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
ಚುಡಾಯಿಸುವುದನ್ನು ವಿರೋಧಿಸಿದ ಅಪ್ರಾಪ್ತ ಹಿಂದೂ ಹುಡುಗಿಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ಶಹನವಾಜ: ಹುಡುಗಿಯ ಸಾವು : Gaziyabaad Shahnawaz Murders
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !
ಶ್ರೀರಾಮನ ಮೇಲಿನ ಆಘಾತ !
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena