
ಪಾಟಲಿಪುತ್ರ (ಬಿಹಾರ) – ಬಕ್ಸರ್ ಜಿಲ್ಲೆಯ ಡುಮರಾವ್ ನಗರದಿಂದ ಕಳ್ಳರು 40 ಮೀಟರ್ ಎತ್ತರದ ‘ಮೊಬೈಲ್ ಟವರ್’ ಅನ್ನೇ ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. ಈ ‘ಟವರ್’ ನಲ್ಲಿದ್ದ ಉಪಕರಣಗಳು ಮತ್ತು ಡೀಸೆಲ್ ಜನರೇಟರ್ ಎರಡನ್ನೂ ಕಳ್ಳರು ದೋಚಿದ್ದಾರೆ.
ದೂರಸಂಪರ್ಕ ಕ್ಷೇತ್ರದ ಮೂಲಸೌಕರ್ಯ ನಿರ್ಮಿಸುವ ಸಂಸ್ಥೆಯ ಅಧಿಕಾರಿಗಳು ನಿಯಮಿತ ಪರಿಶೀಲನೆಯ ವೇಳೆ ಸಂಬಂಧಪಟ್ಟ ಸ್ಥಳಕ್ಕೆ ಭೇಟಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಹಲವು ವರ್ಷಗಳಿಂದ ಬಳಕೆಯಲ್ಲಿಲ್ಲದ ಟವರ್ ಸ್ಥಳದಿಂದ ಸಂಪೂರ್ಣವಾಗಿ ನಾಪತ್ತೆಯಾಗಿರುವುದು ಅವರ ಗಮನಕ್ಕೆ ಬಂದಿದೆ. ಇದನ್ನು ನೋಡಿ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಬಳಿಕ ಅವರು ಡುಮರಾವ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಟವರ್ ಅನ್ನು ಖಾಸಗಿ ಜಾಗದಲ್ಲಿ ನಿರ್ಮಿಸಲಾಗಿತ್ತು. ಕಂಪನಿಯೊಂದಿಗಿನ ಗುತ್ತಿಗೆ ಒಪ್ಪಂದವು ಕೆಲವು ವರ್ಷಗಳ ಹಿಂದೆಯೇ ಮುಕ್ತಾಯಗೊಂಡಿದೆ ಎಂದು ಸಂಬಂಧಪಟ್ಟ ಜಮೀನು ಮಾಲೀಕರು ಹೇಳಿಕೊಂಡಿದ್ದು, ಕಳ್ಳತನಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Unbelievable: Entire 40-Metre Mobile Tower Stolen in Bihar!
In a shocking display of lawlessness, thieves in Dumraon (Buxar district) have dismantled and stolen a 40-metre-tall mobile tower, along with its equipment and a diesel generator.
This brazen crime follows the infamous… pic.twitter.com/O89VsZFPKt
— Sanatan Prabhat (@SanatanPrabhat) June 14, 2026
ಗ್ಯಾಂಗ್ ಕೈವಾಡವಿರುವ ಬಗ್ಗೆ ಪೊಲೀಸರ ಶಂಕೆ
ತನಿಖಾಧಿಕಾರಿಗಳ ಪ್ರಕಾರ, 40 ಮೀಟರ್ ಎತ್ತರದ ಉಕ್ಕಿನ ಟವರ್ ಅನ್ನು ಕಿತ್ತು ಬೇರೆಡೆಗೆ ಸಾಗಿಸಲು ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲ, ಭಾರಿ ಯಂತ್ರೋಪಕರಣಗಳು ಮತ್ತು ತಾಂತ್ರಿಕ ಕೌಶಲ್ಯ ಬೇಕಾಗುತ್ತದೆ. ಹೀಗಾಗಿ ಸಂಘಟಿತ ಗ್ಯಾಂಗ್ ವೊಂದು ಈ ಕಳ್ಳತನವನ್ನು ಯೋಜಿತವಾಗಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕಳ್ಳತನ ಮಾಡಲು ಹಲವು ದಿನಗಳೇ ಬೇಕಾಗಿರಬಹುದು ಎಂಬುದು ಪ್ರಾಥಮಿಕ ಅಂದಾಜು ಇದೆ. ಇಷ್ಟೊಂದು ದೊಡ್ಡ ಟವರ್ ಅನ್ನು ಯಾರ ಗಮನಕ್ಕೂ ಬಾರದಂತೆ ಕದ್ದಿದ್ದು ಹೇಗೆ ಎಂಬ ಪ್ರಶ್ನೆ ಸ್ಥಳೀಯ ನಾಗರಿಕರು ಹಾಗೂ ಪೊಲೀಸರನ್ನು ಕಾಡುತ್ತಿದೆ.
4 ವರ್ಷಗಳ ಹಿಂದೆ 40 ಅಡಿ ಉದ್ದದ ಕಬ್ಬಿಣದ ಸೇತುವೆ ಕಳುವಾಗಿತ್ತು !
ಈ ಹಿಂದೆ 2022ನೇ ಇಸವಿಯಲ್ಲಿ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ 40 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನು ಕಿತ್ತು ಕದ್ದೊಯ್ದ ಘಟನೆ ನಡೆದಿತ್ತು. ಆಗಲೂ ಇದೇ ರೀತಿಯ ಅಚ್ಚರಿ ವ್ಯಕ್ತವಾಗಿತ್ತು.
ಮದುವೆಯಾದ ಮೇಲೂ ಮುಸ್ಲಿಂ ಪ್ರಿಯಕರನ ಸಂಪರ್ಕದಲ್ಲಿದ್ದ ಹಿಂದು ಯುವತಿಯನ್ನು ಆಕೆಯ ಸಹೋದರನೇ ಕೊಲೆ ಮಾಡಿದ !
ಶ್ರೀರಾಮ ಮಂದಿರದ ಸಿಬ್ಬಂದಿಯ ಮನೆಯಲ್ಲಿ ಸಿಕ್ಕಿತು 10 ಲಕ್ಷ ರೂಪಾಯಿ : ಸಗಣಿಯ ರಾಶಿಯ ಕೆಳಗೆ ಬಚ್ಚಿಡಲಾಗಿದ್ದ ನಗದು
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ