ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!

ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತರವರ ಪಾಕಿಸ್ತಾನದ ಕುರಿತಾದ ನಿಲುವು

ನವ ದೆಹಲಿ – ಭವಿಷ್ಯದಲ್ಲಿ ಒಂದು ವೇಳೆ ಭಾರತವು ಪಾಕಿಸ್ತಾನವನ್ನು ಸಂಪೂರ್ಣವಾಗಿ ಸೋಲಿಸಿದರೆ, ಅಲ್ಲಿನ ಜನರನ್ನು ಭಾರತದ ಪ್ರವಾಹಕ್ಕೆ ತರಬೇಕಾಗುತ್ತದೆ ಅಥವಾ ಅವರು ಅದೇ ದೇಶದಲ್ಲಿ ಶಾಂತಿಯಿಂದ ಬದುಕಲು ಸಾಧ್ಯವಾಗಬೇಕು. ಇದಕ್ಕಾಗಿ ಸಂವಾದದ ಬಾಗಿಲುಗಳನ್ನು ಮುಕ್ತವಾಗಿಡುವುದು ಅತ್ಯಗತ್ಯವಾಗಿದೆ. ನಾವು ಹಿಟ್ಲರನಂತಲ್ಲ. ಅದು ನಮ್ಮ ಸ್ವಭಾವ ಅಥವಾ ಕಾರ್ಯಪದ್ಧತಿಯಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತರವರು ಒಂದು ಸಂವಾದ ಕಾರ್ಯಕ್ರಮದಲ್ಲಿ ಪ್ರತಿಪಾದಿಸಿದರು. ಇದರ ಮೂಲಕ ಅವರು ಸಂಘದ ಸಹಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರು ಪಾಕಿಸ್ತಾನದ ಕುರಿತು ಕಳೆದ ತಿಂಗಳು ತಳೆದಿದ್ದ ನಿಲುವನ್ನು ಸಮರ್ಥಿಸಿದರು. ಅವರು ಮುಂದುವರಿದು, ಅನ್ಯಾಯ ಮತ್ತು ದೌರ್ಜನ್ಯಗಳನ್ನು ನಿರ್ಮೂಲನೆ ಮಾಡಬೇಕು; ಆದರೆ ಯಾವುದು ಒಳ್ಳೆಯದಾಗಿದೆಯೋ, ಅದನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ಸಂಘವು ಯಾವುದೇ ದೇಶದ ವಿಷಯದ ಬಗ್ಗೆ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿಲ್ಲ ಮತ್ತು ಸಂಘವು ಕೇಂದ್ರ ಸರಕಾರದ ನಿಲುವನ್ನೇ ಪಾಲಿಸುತ್ತದೆ ಎಂಬುದರ ಮೇಲೆಯೂ ಪ.ಪೂ. ಭಾಗವತ್ ಅವರು ಒತ್ತು ನೀಡಿದರು.

ಹೊಸಬಾಳೆ ಅವರು ಏನು ಹೇಳಿದ್ದರು?

ಒಂದು ಸಂದರ್ಶನದಲ್ಲಿ ಸಹಕಾರ್ಯದರ್ಶಿ ಹೊಸಬಾಳೆಯವರಿಗೆ ‘ಭಾರತವು ಪಾಕಿಸ್ತಾನ ಮತ್ತು ಅದು ಪ್ರಾಯೋಜಿಸುತ್ತಿರುವ ಭಯೋತ್ಪಾದನೆಯನ್ನು ಹೇಗೆ ಎದುರಿಸಬೇಕು?’, ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು, ದೇಶದ ಭದ್ರತೆ ಮತ್ತು ಸ್ವಾಭಿಮಾನದ ರಕ್ಷಣೆಯಾಗಬೇಕು. ಅಧಿಕಾರದಲ್ಲಿರುವ ಸರಕಾರವು ಅದರ ಕಾಳಜಿ ವಹಿಸಬೇಕು; ಆದರೆ ಅದೇ ಸಮಯದಲ್ಲಿ ನಾವು ಬಾಗಿಲುಗಳನ್ನು ಮುಚ್ಚಬಾರದು. ಅವರೊಂದಿಗೆ (ಪಾಕಿಸ್ತಾನದೊಂದಿಗೆ) ಸಂವಾದ ನಡೆಸಲು ನಾವು ಯಾವಾಗಲೂ ಸಿದ್ಧರಿರಬೇಕು ಎಂದು ಹೇಳಿದ್ದರು.