ಜಿಲ್ಲಾಧ್ಯಕ್ಷನಿಂದ ಮಹಿಳಾ ಕಾರ್ಯದರ್ಶಿಯನ್ನು ಪಕ್ಷದಿಂದ ಉಚ್ಚಾಟನೆ !
|
कांग्रेस का असली चाल चरित्र और चेहरा… https://t.co/yno2JOJTtQ pic.twitter.com/6ozA6SRzn8
— Amit Malviya (@amitmalviya) November 1, 2020
ಜಾಲೌನ್ (ಉತ್ತರ ಪ್ರದೇಶ) – ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನುಜ್ ಮಿಶ್ರಾ ಅವರನ್ನು ತಮ್ಮದೇ ಪಕ್ಷದ ಮಹಿಳಾ ಕಾರ್ಯದರ್ಶಿ ಮತ್ತು ಇನ್ನೊಬ್ಬ ಯುವತಿ ರಸ್ತೆಯಲ್ಲಿ ಥಳಿಸಿದರು. ಅನುಜ್ ಮಿಶ್ರಾ ಯಾವಾಗಲೂ ನನ್ನನ್ನು ಕಿರುಕುಳ ನೀಡುತ್ತಾರೆ ಎಂದು ಮಹಿಳಾ ಕಾರ್ಯದರ್ಶಿ ಆರೋಪಿಸಿದರು. ಅವನನ್ನು ಚಪ್ಪಲಿಯಿಂದ ಹೊಡೆಯುತ್ತಿದ್ದಂತೆ, ಮಿಶ್ರಾ ಹೇಳುತ್ತಿದ್ದರು, ‘ನಾನು ಮತ್ತೆ ಮಾಡುವುದಿಲ್ಲ. ನನ್ನನ್ನು ಬಿಟ್ಟುಬಿಡಿ’; ಆದರೆ ಅವರನ್ನು ಥಳಿಸಲಾಗುತ್ತಿತ್ತು. ಈ ಸಮಯದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮಿಶ್ರಾರವರನ್ನು ವಶಕ್ಕೆ ತೆಗೆದುಕೊಂಡರು. ಈ ಥಳಿತದ ಘಟನೆಯನ್ನು ಕೆಲವರು ಚಿತ್ರೀಕರಿಸಿ, ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದರು. ಮಿಶ್ರಾ ವಿರುದ್ಧದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ವತಿಯಿಂದ ಒಂದು ತನಿಖಾ ಸಮಿತಿಯನ್ನು ನೇಮಿಸಿದೆ.
೧. ಮಿಶ್ರಾ ವಿರುದ್ಧ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಅವರಲ್ಲಿ ದೂರು ದಾಖಲಿಸಿದ್ದರೂ, ಅವರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳಾ ಕಾರ್ಯದರ್ಶಿ ಆರೋಪಿಸಿದ್ದಾರೆ. (ಪಕ್ಷದ ಪದಾಧಿಕಾರಿಗಳಿಂದ ಮಹಿಳೆಯು ಕಿರುಕುಳಕ್ಕೊಳಗಾಗಿದ್ದರೆ ಮತ್ತು ಪೀಡಿತೆಯ ದೂರಿನ ಹೊರತಾಗಿಯೂ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಇಂತಹ ಪಕ್ಷವು ಅಧಿಕಾರಕ್ಕೆ ಬಂದರೂ ಮಹಿಳೆಯರನ್ನು ರಕ್ಷಿಸಬಹುದೇ ? – ಸಂಪಾದಕ)
೨. ಈ ಥಳಿತದ ನಂತರ ಮಿಶ್ರಾ ಆ ಮಹಿಳಾ ಕಾರ್ಯದರ್ಶಿಯನ್ನು ಪಕ್ಷದಿಂದ ತೆಗೆದುಹಾಕುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. (ಕಾಂಗ್ರೆಸ್ ಪ್ರಜಾಪ್ರಭುತ್ವವಲ್ಲ, ಇದು ಸರ್ವಾಧಿಕಾರ, ಇದು ಈ ಘಟನಡಯಿಂದ ಸ್ಪಷ್ಟವಾಗುತ್ತದೆ ! – ಸಂಪಾದಕ)