ಮುಸಲ್ಮಾನರು ಹಿಂದೂ ಕುಟುಂಬಗಳನ್ನು ಮತಾಂಧರ ದಾಳಿಯಿಂದ ರಕ್ಷಿಸಿದರು
ಹಿಂದೂಗಳನ್ನು ಉಳಿಸಿದ ಮುಸ್ಲಿಮರಿಗೆ ಧನ್ಯವಾದಗಳು! ಅಂತಹ ಮುಸ್ಲಿಮರು ಎಲ್ಲೆಡೆ ಇರಬೇಕು !
ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಶೀತಲ್ ದಾಸ್ ಪ್ರದೇಶದಲ್ಲಿ ಹಿಂದೂ ದೇವಾಲಯವನ್ನು ಮತಾಂಧರು ಧ್ವಂಸ ಮಾಡಿದ್ದಾರೆ. ದೇವಾಲಯದ ಸುತ್ತಮುತ್ತ ವಾಸಿಸುತ್ತಿರುವ 300 ಹಿಂದೂ ಕುಟುಂಬಗಳ ಮೇಲೆ ದಾಳಿ ನಡೆಸಲು ಸಹ ಪ್ರಯತ್ನಿಸಲಾಯಿತು; ಆದರೆ, ಹಿಂದೂಗಳ ಪಕ್ಕದಲ್ಲಿ ವಾಸಿಸುವ ಮುಸ್ಲಿಮರು ಅವರನ್ನು ರಕ್ಷಿಸಿದರು. ಅವರು ಮತಾಂಧರಿಂದ ದಾಳಿ ಮಾಡುವುದನ್ನು ತಡೆದರು. ಇಲ್ಲಿ ಕೇವಲ 30 ಮುಸ್ಲಿಂ ಕುಟುಂಬಗಳು ವಾಸಿಸುತ್ತಾರೆ. ಈ ಘಟನೆಯ ನಂತರ 60 ಹಿಂದೂ ಕುಟುಂಬಗಳು ಇಲ್ಲಿಂದ ಪಲಾಯನಗೈದರು.