ಹಿಂದೂ ದೇವಾಲಯಗಳನ್ನು ಸರಕಾರೀಕರಣಗೊಳಿಸುವ ಮೂಲಕ ಹಗರಣ ಮಾಡುವ ಅಭ್ಯಾಸ ಈ ದೇಶದಲ್ಲಿ ವಿಪರೀತವಾಗಿದೆ, ಇದನ್ನು ತಡೆಗಟ್ಟಲು ಹಿಂದೂಗಳು ಸಂಘಟಿತರಾಗಿ ವಿರೋಧಿಸಬೇಕು !ಬಿಜೆಪಿ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ದೇವಾಲಯಗಳ ಸರಕಾರೀಕರಣವಾಗುವುದು ಹಿಂದೂಗಳಿಗೆ ಅಪೇಕ್ಷಿವತವಲ್ಲ, ಬದಲಾಗಿ ಇಂತಹ ದೇವಾಲಯಗಳು ಭಕ್ತರ ಕೈಯಲ್ಲಿರಬೇಕು ! |
ಕಾಂಗಡಾ (ಹಿಮಾಚಲ ಪ್ರದೇಶ) – ಸ್ಥಳೀಯ ಪ್ರಸಿದ್ಧ ಶ್ರೀ ಬಾಗಲಮುಖಿ ದೇವಾಲಯವನ್ನು ಸರಕಾರೀಕರಣಗೊಳಿಸಲು ಕಾಂಗಡಾ ಜಿಲ್ಲಾಧಿಕಾರಿಯು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ (ಭಾಷೆ, ಕಲೆ ಮತ್ತು ಸಂಸ್ಕೃತಿ ಇಲಾಖೆ) ಶಿಫಾರಸು ಮಾಡಿದ್ದಾರೆ. ಉಪಜಿಲ್ಲಾಧಿಕಾರಿ ದೆಹರಾ ಅವರ ವರದಿಯ ಆಧಾರದ ಮೇಲೆ ಅವರು ಈ ಶಿಫಾರಸು ಮಾಡಿದ್ದಾರೆ. ಅದರಂತೆ ಮುಂದಿನ ಕ್ರಮಕ್ಕೆ ಚಾಲನೆ ನೀಡಲಾಗಿದೆ.
कांगड़ा के बगलामुखी मंदिर का सरकारीकरण करने की तैयारी https://t.co/0lIXSiNqQv
— Amar Ujala Himachal (@AUHimachal) November 4, 2020
೧. ಈ ದೇವಾಲಯದಲ್ಲಿನ ಅಕ್ರಮಗಳ ಬಗ್ಗೆ ದೂರುಗಳು ಬಂದ ನಂತರ, ಜಿಲ್ಲಾಧಿಕಾರಿ ಮೂಲಕ ವಿಚಾರಣೆ ನಡೆಸಲಾಯಿತು. ಅಂತಹ ವಿಚಾರಣೆಯನ್ನು ಈ ಹಿಂದೆಯೂ ನಡೆಸಲಾಗಿತ್ತು ಮತ್ತು ಅಕ್ರಮಗಳೂ ಪತ್ತೆಯಾಗಿದ್ದವು; ಆದರೆ ವರದಿಯ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಎಂದು ಹೇಳಲಾಗುತ್ತಿದೆ.
೨. ದೇವಾಲಯದ ಹೊಸ ನಿರ್ಮಾಣಕ್ಕೆ ಯಾವುದೇ ಅನುಮತಿ ಕೋರಿಲ್ಲ ಎಂದು ವರದಿ ಹೇಳುತ್ತದೆ. ಈ ದೇವಾಲಯದಲ್ಲಿ ನಡೆಯುತ್ತಿರುವ ಧಾರ್ಮಿಕ ಸಮಾರಂಭಗಳಲ್ಲಿ ಮಾಡಿದ ಖರ್ಚುಗಳನ್ನು ದಾಖಲಿಸಲಾಗಿಲ್ಲ. ಇಲ್ಲಿ ಭಕ್ತರು ಅಪಾರವಾದ ಅರ್ಪಣೆ ನೀಡುತ್ತಾರೆ. ಆದ್ದರಿಂದ, ಈ ದೇವಾಲಯವನ್ನು ಸರಕಾರೀಕರಣಗೊಳಿಸುವುದು ಮತ್ತು ಅಲ್ಲಿ ಆಡಳಿತಾಧಿಕಾರಿಯನ್ನು ನೇಮಿಸುವುದು ಅಂದರೆ ನ್ಯಾಸದಲ್ಲಿ ಸಮಾವೇಶಗೊಳಿಸುವುದು ಅಗತ್ಯವಿದೆ ಎಂದು ಹೇಳಿದೆ.