ಬಾಗಪತ (ಉತ್ತರಪ್ರದೇಶ) ಎಂಬಲ್ಲಿರುವ ಮಸೀದಿಯಲ್ಲಿ ಭಾಜಪಾದ ಕಾರ್ಯಕರ್ತರಿಂದ ಹನುಮಾನ ಚಾಲಿಸಾದ ಪಠಣ

  • ಹನುಮಾನ ಚಾಲಿಸಾದ ಪಠಣಕ್ಕೆ ಅವಕಾಶ ನೀಡಿದ್ದಕ್ಕಾಗಿ ಮೌಲಾನಾನನ್ನು ಮಸೀದಿಯಿಂದ ಹೊರಹಾಕಲಾಯಿತು

  • ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲು ಮೌಲಾನಾದಿಂದ ವಿರೋಧ

ಹನುಮಾನ್ ಚಾಲೀಸಾ ಪಠಣ ಮಾಡಲು ಮೌಲಾನಾ ನೀಡಿದ ಅನುಮತಿ ಮತ್ತು ನಂತರ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲು ವಿರೋಧಿಸುತ್ತಿರುವುದು ನೋಡಿದರೆ, ದೇಶಕ್ಕೆ ಇಂದು ಅಂತಹ ಮೌಲಾನಾಗಳ ಅಗತ್ಯವಿದೆ. ತಥಾಕಥಿತ ಪ್ರಗತಿ(ಅಧೋಗತಿ)ಪರರು ಮತ್ತು ಜಾತ್ಯತೀತವಾದಿಗಳು ಎಂದು ಕರೆಯಲ್ಪಡುವವರು ಈಗ ಈ ಮೌಲಾನಾ ಪರವಾಗಿ ನಿಲ್ಲುತ್ತಾರೆಯೇ? ಮತ್ತು ಅವರ ಉಚ್ಚಾಟನೆಯನ್ನು ಅವರು ವಿರೋಧಿಸುತ್ತಾರೆಯೇ ?

ಬಾಗಪತ್ (ಉತ್ತರ ಪ್ರದೇಶ) – ಬಿಜೆಪಿ ಕಾರ್ಯಕರ್ತ ಮನುಪಾಲ್ ಬನ್ಸಾಲ್ ಅವರು ವಿನಯ್‌ಪುರದ ಮಸೀದಿಯಲ್ಲಿ ಹನುಮಾನ್ ಚಾಲಿಸಾ ಪಠಿಸಿದರು. ಮೌಲಾನಾ ಅಲಿ ಹಸನ್ ಅವರ ಅನುಮತಿಯೊಂದಿಗೆ ಈ ಪಠಣವನ್ನು ಮಾಡಲಾಯಿತು. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ. ಇದರ ನಂತರ ಮೌಲಾನಾ ಅಲಿ ಹಸನ್ ಅವರನ್ನು ಮಸೀದಿಯಿಂದ ತೆಗೆದುಹಾಕಲಾಗಿದೆ. ಇದರಿಂದಾಗಿ ಅವರು ಗಾಜಿಯಾಬಾದ್‌ನ ಲೋನಿಗೆ ತೆರಳಿದರು.

1. ಬನ್ಸಾಲ್ ಇವರ ಪ್ರಕಾರ, ಮೌಲಾನಾ ಅವರನ್ನು ಮಸೀದಿಯಿಂದ ತೆಗೆದುಹಾಕುವ ನಿರ್ಧಾರವು ಅತ್ಯಂತ ಅಯೋಗ್ಯವಾಗಿದೆ. ಅವರು ಸಹೋದರತ್ವದ ಸಂದೇಶವನ್ನು ನೀಡಿದ್ದರು.

2. ಮೌಲಾನಾ ಅಲಿ ಹಸನ್ ಕೂಡ ಬನ್ಸಾಲ್ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸಿದ್ದಾರೆ. ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಅವರು, ಬನ್ಸಾಲ್ ಈ ಗ್ರಾಮದಲ್ಲಿ ವಾಸಿಸುತ್ತಿದ್ದು ನಮಗೆ ಪರಿಚಯವಿದೆ ಎಂದು ಹೇಳಿದರು. ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.

3. ಈ ಹಿಂದೆ 2 ಮುಸ್ಲಿಮರು ಮಥುರಾದ ನಂದ್ ಮಹಲ್ ದೇವಸ್ಥಾನದಲ್ಲಿ ನಮಾಜ್ ಪಠಿಸಿದರೆ, 4 ಹಿಂದೂಗಳು ಮಥುರಾದ ಗೋವರ್ಧನದಲ್ಲಿರುವ ಮಸೀದಿಯಲ್ಲಿ ಹನುಮಾನ್ ಚಾಲಿಸಾ ಪಠಿಸಿದ್ದಾರೆ.