ಮಧ್ಯಪ್ರದೇಶ ಸರಕಾರದಿಂದ ಚಿನೀ ಮತ್ತು ಇತರ ವಿದೇಶಿ ಪಟಾಕಿಗಳ ಮೇಲೆ ನಿಷೇಧ

ಒಂದೊಂದೇ ರಾಜ್ಯಗಳು ಇಂತಹ ನಿಷೇಧ ಹೇರುವ ಬದಲು ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ನಿಷೇಧ ಹೇರಲಿ !

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್

ಭೋಪಾಲ್ (ಮಧ್ಯಪ್ರದೇಶ) – ರಾಜ್ಯದ ಭಾಜಪಾ ಸರಕಾರವು ದೀಪಾವಳಿಯ ಮೊದಲು ಚೀನಾದ ಮತ್ತು ವಿದೇಶಿ ಪಟಾಕಿಗಳನ್ನು ಸಂಗ್ರಹಿಸುವುದು, ಸಾಗಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲು ನಿರ್ಧರಿಸಿದೆ. ಈ ಪಟಾಕಿಗಳ ಆಮದನ್ನು ಪರವಾನಗಿ ಇಲ್ಲದೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

1. ಮಧ್ಯಪ್ರದೇಶ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಡಾ. ರಾಜೇಶ ರಾಜೌರ ಇವರು, ‘ಡೈರೆಕ್ಟ್ ಜನರಲ್ ಫಾರಿನ್ ಟ್ರೇಡ್’ ಮೂಲಕ ಚೀನೀ ಮತ್ತು ಇತರ ವಿದೇಶಿ ಪಟಾಕಿಗಳನ್ನು ಆಮದು ಮಾಡಿಕೊಳ್ಳಲು ಯಾವುದೇ ಪರವಾನಗಿ ನೀಡಿಲ್ಲ ಎಂದು ಹೇಳಿದ್ದಾರೆ. ಈ ಕಾನೂನಿನ ಉಲ್ಲಂಘನೆಗೆ 2 ವರ್ಷಗಳವರೆಗೆ ಶಿಕ್ಷೆಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶವನ್ನು ನೀಡಲಾಗಿದೆ.

2. ಈ ಹಿಂದೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು ಉನ್ನತ ಮಟ್ಟದ ಸಭೆ ನಡೆಸಿ ಚೀನಾದ ಪಟಾಕಿಗಳ ಬಳಕೆಯನ್ನು ನಿಷೇಧಿಸಲು ನಿರ್ಧರಿಸಿದ್ದರು. ‘ಆತ್ಮನಿರ್ಭರ ಭಾರತ’ ಅಭಿಯಾನದಡಿಯಲ್ಲಿ ಸ್ಥಳೀಯ ವಸ್ತುಗಳು ಮತ್ತು ದೀಪಾವಳಿಯಲ್ಲಿ ಮಣ್ಣಿನ ಹಣತೆಗಳನ್ನು ಖರೀದಿಸಬೇಕು ಇದರಿಂದ ಸ್ಥಳಿಯರಿಗೂ ಉದ್ಯೋಗ ಸಿಗುತ್ತದೆ, ಎಂಬ ಕರೆಯನ್ನೂ ಅವರು ನೀಡಿದ್ದಾರೆ.