ಭಾರತ ಫ್ರಾನ್ಸ್‌ನಿಂದ ಏನಾದರೂ ಕಲಿಯಬಹುದೇ ?
ಪ್ಯಾರಿಸ್ (ಫ್ರಾನ್ಸ್) – ಫ್ರಾನ್ಸ್ ಪಾಕಿಸ್ತಾನದ ಗೂಢಚಾರ ಇಲಾಖೆ ಐ.ಎಸ್.ಐ.ನ ಮಾಜಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶುಜಾ ಪಾಷಾ, ಅವರ ಸಂಬಂಧಿಕರೂ ಸೇರಿದಂತೆ ೧೮೩ ಪಾಕಿಸ್ತಾನಿಗಳ ವಿಜಿಟರ್ ವೀಸಾಗಳನ್ನು ರದ್ದುಪಡಿಸಿದೆ ಮತ್ತು ೧೧೮ ಪಾಕಿಸ್ತಾನಿಗಳನ್ನು ಬಲವಂತವಾಗಿ ವಾಪಸ್ ಕಳುಹಿಸಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಫ್ರಾನ್ಸ್ ವಿರುದ್ಧ, ಹಾಗೆಯೇ ರಾಷ್ಟ್ರಪತಿ ಎಮ್ಯಾನುಯೆಲ್ ಮ್ಯಾಕ್ರನ್ ವಿರುದ್ಧ ಮಾತನಾಡಿದ್ದರು. ಅದಕ್ಕಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ದಾಖಲೆಗಳನ್ನು ಹೊಂದಿದ್ದರೂ ತನ್ನ ೧೧೮ ನಾಗರಿಕರನ್ನು ಅಯೋಗ್ಯ ರೀತಿಯಲ್ಲಿ ಗಡೀಪಾರು ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಈ ನಿಟ್ಟಿನಲ್ಲಿ ನಾವು ಫ್ರಾನ್ಸ್‌ನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದೆ.