ಬುರ್ಖಾ ಧರಿಸಿ ಹಿಂದೂ ಹುಡುಗಿಯನ್ನು ದುಬೈಗೆ ಕಳುಹಿಸಲು ಯತ್ನಿಸುತ್ತಿದ್ದ ಮತಾಂಧ ಯುವಕನ ಬಂಧನ

ಲವ್ ಜಿಹಾದ್ ಬಲಿಯಾದ ಹಿಂದೂ ಯುವತಿಯರನ್ನು ಅರಬ್ ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹಲವು ಬಾರಿ ಬೆಳಕಿಗೆ ಬಂದಿದೆ. ಈ ಹಿಂದೂ ಹುಡುಗಿಗೂ ಇದೇ ರೀತಿ ಏನಾದರೂ ಮಾಡಲು ಧರ್ಮಾಂಧ ಯುವಕನ ಸಂಚು ಇರಬಹುದಲ್ಲವೇ ?

ಕೋಲಕಾತಾ (ಬಂಗಾಲ) – ಒರಿಸ್ಸಾ ಮತ್ತು ಬಂಗಾಲದ ಗಡಿಯಲ್ಲಿರುವ ಜಜಪುರ ರಸ್ತೆ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಮತ್ತು ಭಜರಂಗದಳದ ಸಹಾಯದಿಂದ ಸಬೀರ್ ಅಲಿ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಒರಿಸ್ಸಾದ ಗಂಜಮ್ ಜಿಲ್ಲೆಯಿಂದ ಹಿಂದೂ ಬಾಲಕಿಯನ್ನು ಬುರಖಾ ಧರಿಸಿ ಕೋಲಕಾತಾಗೆ ಕರೆದುಕೊಂಡು ಹೋಗಿ ಅಲ್ಲಿಂದ ವಿಮಾನದ ಮೂಲಕ ದುಬೈಗೆ ಕರೆದೊಯ್ಯಲು ಪ್ರಯತ್ನಿಸಿದ್ದ. ಸಬೀರ್ ಬಂಗಾಳದ ಮುರ್ಷಿದಾಬಾದ್ ಮೂಲದವನು. ಕರೋನಾದಿಂದ ಆತ ದುಬೈನಿಂದ ಹಿಂದಿರುಗಿದ್ದ. ಆತನಿಂದ ಪಾಸ್‌ಪೋರ್ಟ್‌ಗಳು ಮತ್ತು ವೀಸಾಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.