ನೇಪಾಳದ ಹೊಸ ನಕಾಶೆಗೆ ಭಾರತದ ಆಕ್ಷೇಪ

ಲಿಪುಲೆಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ಇವೆಲ್ಲವೂ ತಮ್ಮದೆಂದು ಹೇಳಿಕೊಳ್ಳುತ್ತ ಈ ಮೂರೂ ಪ್ರದೇಶಗಳನ್ನು ನೇಪಾಳವು ಪ್ರಕಟಿಸಿದ ನಕಾಶೆಯಲ್ಲಿ ನೇಪಾಳದಲ್ಲಿರುವಂತೆ ತೋರಿಸಿದೆ. ಇದನ್ನು ಭಾರತವು ಆಕ್ಷೇಪಿಸಿದೆ. ಈ ಹೊಸ ನಕಾಶೆಯಲ್ಲಿ, ನೇಪಾಳವು ಭಾರತದ ಒಟ್ಟು ೩೯೫ ಚದರ ಕಿ.ಮೀ.ದಷ್ಟು ಭೂಮಿಯನ್ನು ತನ್ನ ಗಡಿಯಲ್ಲಿ ತೋರಿಸಿದೆ.

ಚೀನಾದ ಕಂಪನಿಯು ಪಾಕಿಸ್ತಾನದಲ್ಲಿ ೬,೨೦೦ ಕೋಟಿ ರೂ. ಹೂಡಿಕೆ ಮಾಡಿ ೪ ಲಕ್ಷ ಕೋಟಿ ರೂಪಾಯಿಯ ಲಾಭಗಳಿಸಿತು !

ಚೀನಾದ ಕಂಪನಿಗಳು ಪಾಕಿಸ್ತಾನದಲ್ಲಿ ೬ ಸಾವಿರದ ೨೦೦ ಕೋಟಿ ರೂ. ಹೂಡಿಕೆ ಮಾಡಿ ೪ ಲಕ್ಷ ಕೋಟಿ ರೂಪಾಯಿಯ ಲಾಭವನ್ನು ಗಳಿಸಿರುವ ಅಂಶವು ಬೆಳಕಿಗೆ ಬಂದಿದೆ. ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ದೇಶದಲ್ಲಿ ಹೆಚ್ಚುತ್ತಿರುವ ವಿದ್ಯುತ್ ದರಗಳ ಬಗ್ಗೆ ಪರಿಶೀಲನೆ ನಡೆಸಲು ಒಂದು ಸಮಿತಿಯನ್ನು ನೇಮಿಸಿದ್ದರು.

ಮುಸಲ್ಮಾನರ ಹಣವನ್ನು ಮುಸಲ್ಮಾನರಿಗಾಗಿಯೇ ಖರ್ಚು ಮಾಡಬೇಕು ! – ಕಾಂಗ್ರೆಸ್ ಶಾಸಕ ಜಮೀರ ಅಹಮದ್‌ರಿಂದ ವಕ್ಫ ಬೋರ್ಡ್‌ಗೆ ವಿರೋಧ

ಕರ್ನಾಟಕದ ವಕ್ಫ್ ಬೋರ್ಡ್ ಕೊರೋನಾದ ವಿರುದ್ಧ ಹೋರಾಡಲು ರಾಜ್ಯ ಹಾಗೂ ಕೇಂದ್ರ ಸರಕಾರದ ಸಹಾಯ ನಿಧಿಗೆ ಹಣವನ್ನು ನೀಡುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ. ಅದೇರೀತಿ ಅವರು ಇತರರಿಗೂ ಹಣವನ್ನು ನೀಡುವಂತೆ ಕರೆ ನೀಡಿದ್ದಾರೆ. ಅದಕ್ಕೆ ರಾಜ್ಯದ ಕಾಂಗ್ರೆಸ್ ಶಾಸಕ ಜಮೀರ ಅಹಮದ್ ವಿರೋಧಿಸಿದ್ದಾರೆ.

ಮುಜಿಬುರ್ ರಹಮಾನ್ ಮತ್ತು ಅವರ ಸಹಚರರಿಂದ ‘ಟಿಕ್-ಟಾಕ್’ ‘ಆಪ್’ನಲ್ಲಿ ‘ಅತ್ಯಾಚಾರ’ಕ್ಕೆ ಪ್ರೊತ್ಸಾಹ ನೀಡುವ ‘ವೀಡಿಯೊ’ ಪ್ರಸಾರ

ಮುಜಿಬುರ್ ರಹಮಾನ್ ಮತ್ತು ಅವರ ಸಹಚರರಿಂದ ‘ಟಿಕ್-ಟಾಕ್’ ಆಪ್ ಮೂಲಕ ‘ಅತ್ಯಾಚಾರ’ಕ್ಕೆ ಪ್ರೊತ್ಸಾಹ ನೀಡುವ ವಿಡಿಯೋವನ್ನು ತಯಾರಿಸಿದ್ದಾರೆ. ‘ವೀಡಿಯೋದಲಿ’ ‘ಇಬ್ಬರು ಯುವಕರು ಪ್ಯಾಂಟ್ ಹಾಕಿಕೊಳ್ಳುತ್ತಿದ್ದಾರೆ ಮತ್ತು ಅವರ ಮುಂದೆ ಓರ್ವ ಯುವತಿಯು ಅವಳ ಬಟ್ಟೆಯನ್ನು ಸರಿಪಡಿಸುತ್ತ ಅಳುತ್ತಿದ್ದಾಳೆ’, ಈ ರೀತಿಯಲ್ಲಿ ತೋರಿಸಲಾಗಿದೆ. ಈ ‘ವಿಡಿಯೋ’ಗೆ ತೀವ್ರ ವಿರೋಧವಾಗುತ್ತಿದೆ.

ಪಾಲಕರೇ, ನಿಮ್ಮ ಮಗುವನ್ನು ಅರಿತುಕೊಳ್ಳಿ !

ಇಂತಹ ಮಕ್ಕಳ ಬುಧ್ಯಾಂಕವು ೭೦ ರಿಂದ ೯೦ ರ ನಡುವೆ ಇರುವ ಸಾಧ್ಯತೆಯಿದೆ. ಶಾಲೆಯಲ್ಲಿ ಕಲಿಯುವ ಸಂದರ್ಭದಲ್ಲಿ ಈ ಮಕ್ಕಳು ಇತರ ಮಕ್ಕಳ ತುಲನೆಯಲ್ಲಿ ನಿಧಾನ ಗತಿಯಲ್ಲಿ ಕಲಿಯುತ್ತಾರೆ. ಇವರಿಗೂ ತರಗತಿಯಲ್ಲಿ ಗಮನವಿಡಲು ಹಾಗೂ ಏಕಾಗ್ರತೆ ಬರಲು ಅಡಚಣೆಯಾಗುತ್ತದೆ. ನೀಡಿದ ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತಗಲುತ್ತದೆ.

ಕರೋನಾದಿಂದ ಅಮೇರಿಕಾದಲ್ಲಿ ಸೈಕಲ್ ಖರೀದಿಯಲ್ಲಿ ಭಾರಿ ಹೆಚ್ಚಳ

ಕರೋನಾ ಹರಡುವುದನ್ನು ತಡೆಯಲು ಸಂಚಾರ ನಿಷೇಧ ಹೇರಿರುವುದರಿಂದ ಅಮೇರಿಕಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೈಕಲ್ ಖರೀದಿಸುತ್ತಿದ್ದಾರೆ. ತನ್ನನ್ನು ಆರೋಗ್ಯವಾಗಿರಿಸಿಕೊಳ್ಳುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಇದರ ಹಿಂದಿನ ಉದ್ದೇಶ ಎಂದು ಹೇಳಲಾಗುತ್ತದೆ.

ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಅಮುಲ್ಯ ಲಿಯೋನಾ ಅವರ ಜಾಮೀನು ಅರ್ಜಿಗೆ ಪೊಲೀಸರಿಂದ ವಿರೋಧ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ರ್ಯಾಲಿಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ 19 ವರ್ಷದ ವಿದ್ಯಾರ್ಥಿನಿ ಅಮುಲ್ಯ ಲಿಯೋನಾ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಪೊಲೀಸರು ವಿರೋಧಿಸಿದ್ದಾರೆ. ಅಮುಲ್ಯ ಪ್ರಭಾವಿ ವ್ಯಕ್ತಿಯಾಗಿದ್ದಾರೆ.

ನೇಪಾಳ ಮತ್ತು ಭಾರತದ ನಡುವಿನ ಗಡಿವಿವಾದ ಅವರ ಆಂತರಿಕ ಪ್ರಶ್ನೆ! – ಚೀನಾ

ಕಲಾಪಾನಿ ವಿಷಯವು ಭಾರತ ಮತ್ತು ನೇಪಾಳ ನಡುವಿನ ಆಂತರಿಕ ವಿವಾದವಾಗಿದೆ. ಸ್ನೇಹಪರ ಮಾತುಕತೆಯ ಮೂಲಕ ಉಭಯ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತವೆ ಎಂದು ನಾವು ಭಾವಿಸುತ್ತೇವೆ. ಪರಿಸ್ಥಿತಿ ಹದಗೆಡದಂತೆ ಅವರು ಯಾವುದೇ ರೀತಿಯ ಏಕಪಕ್ಷೀಯ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ.

‘ಅಶ್ವಗಂಧ’ದಿಂದ ನಿರ್ಮಿಸಿದ ಔಷಧಿಯು ಕೊರೋನಾ ಪೀಡಿತ ರೋಗಿಗಳನ್ನು ಗುಣಮುಖ ಮಾಡಬಹುದು ! – ಐಐಟಿ ದೆಹಲಿಯ ತೀರ್ಮಾನ

ಐಐಟಿ ದೆಹಲಿಯ ‘ಬಯೋಕೆಮಿಕಲ್’ ಇಂಜಿನಿಯರಿಂಗ್‌ನ ಪ್ರಾ. ಡಿ. ಸುಂದರ ಇವರು ಮಾಡಿದಂತಹ ಶೋಧನೆಗನುಸಾರ ‘ಅಶ್ವಗಂಧ’ದಿಂದ ತಯಾರಿಸಿದ ನೈಸರ್ಗಿಕ ಔಷಧಿಯು ಕೊರೋನಾ ಪೀಡಿತ ರೋಗಿಗಳನ್ನು ಗುಣಮುಖ ಮಾಡಬಹುದು. ಅಶ್ವಗಂಧದ ಒಂದು ರಾಸಾಯನಿಕ ಪದಾರ್ಥವು ಕೊರೋನಾದ ಜೀವಕೋಶವನ್ನು ಹೆಚ್ಚಾಗಿಸುವುದನ್ನು ತಡೆಗಟ್ಟಲು ಪರಿಣಾಮಕಾರಿಯಾಗಬಹುದು.

ಹೊಸೂರು (ಬೆಳಗಾವಿ) ಗ್ರಾಮದ ಮೂರು ಸಾವಿರ ಮಠದ ಗಂಗಾಧರ ಸ್ವಾಮೀಜಿಯವರ ಕೊಲೆಗೆ ಯತ್ನ

ಹೊಸೂರಿನ (ತಾಲ್ಲೂಕು ಬೈಲಹೋಂಗಲ) ಗ್ರಾಮದ ಮೂರು ಸಾವಿರ ಮಠದ ಗಂಗಾಧರ ಸ್ವಾಮೀಜಿಯವರ ಮೇಲೆ ಮೇ 20 ರಂದು ತಡರಾತ್ರಿ ಮಾರಣಾಂತಿಕ ಹಲ್ಲೆಯಾಗಿದೆ. ಅಜ್ಞಾತ ವ್ಯಕ್ತಿಯೊಬ್ಬ ತಡರಾತ್ರಿ ಕಳ್ಳತನ ಮಾಡುವ ಉದ್ದೇಶದಿಂದ ಮಠಕ್ಕೆ ಪ್ರವೇಶಿಸಿ ಸ್ವಾಮೀಜಿಯ ಮೇಲೆ ಹಲ್ಲೆ ನಡೆಸಿದ್ದಾನೆ.