ಆಪತ್ಕಾಲೀನ ಪರಿಸ್ಥಿತಿಯಲ್ಲಿ ಉದ್ಭವಿಸುವ ಮಾನಸಿಕ ಸಮಸ್ಯೆಗಳಿಗೆ ಕೆಲವು ಪರಿಹಾರೋಪಾಯಗಳು
ಕೆಲವು ಜನರು ಅತಿಭಾವನಾಶೀಲ ಮತ್ತು ಮನಸ್ಸಿನಿಂದ ಬಹಳ ದುರ್ಬಲರಾಗಿರುತ್ತಾರೆ. ನೆರೆ, ಭೂಕಂಪ, ಮಹಾಯುದ್ಧ ಇತ್ಯಾದಿ ಸಂಕಟಗಳನ್ನು ನೋಡಿ ಅವರು ಭಯಭೀತರಾಗುತ್ತಾರೆ. ಅವರಿಗೆ ಈ ಆಪತ್ಕಾಲದ ಸಂದರ್ಭದಲ್ಲಿನ ಸ್ವಯಂಸೂಚನೆಗಳನ್ನು ತೆಗೆದುಕೊಳ್ಳುವುದು ಬೇಡವೆನಿಸುತ್ತದೆ. ಕೆಲವರ ಮನಸ್ಸು ಅಸ್ವಸ್ಥವಾಗಿರುವುದರಿಂದ ಅವರಿಗೆ ಸ್ವಯಸೂಚನೆಗಳನ್ನು ಕೊಡಲು ನೆನಪು ಆಗುವುದಿಲ್ಲ.