ಮಹಾಯುದ್ಧ, ಭೂಕಂಪಗಳಂತಹ ಆಪತ್ಕಾಲದ ಪರಿಸ್ಥಿತಿಯಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ?

ನೆರೆ, ಭೂಕಂಪ, ಗಲಭೆ, ಮಹಾಯುದ್ಧ ಇತ್ಯಾದಿ ಆಪತ್ತುಗಳ ಸಮಯದಲ್ಲಿ ಅತ್ಯಂತ ಪ್ರತಿಕೂಲ ಪರಿಸ್ಥಿತಿಯು ಉದ್ಭವಿಸುತ್ತದೆ. ಇಂತಹ ಪ್ರಸಂಗಗಳಲ್ಲಿ ಎಲ್ಲೆಡೆ ವಿಧ್ವಂಸಗಳಾಗುವುದು, ಬೆಂಕಿ ತಗಲುವುದು ಮುಂತಾದ ಘಟನೆಗಳು ಘಟಿಸುತ್ತವೆ. ಅಲ್ಲಲ್ಲಿ, ಬೀದಿಬೀದಿಗಳಲ್ಲಿ ಮೃತದೇಹಗಳು ಬಿದ್ದಿರುತ್ತವೆ. ಇಂತಹ ಘಟನೆಗಳನ್ನು ನೋಡಿ ಅಥವಾ ಕೇಳಿ ಅನೇಕರ ಮನಸ್ಸು ಅಸ್ಥಿರವಾಗುವುದು, ಮನಸ್ಸಿಗೆ ಒತ್ತಡವಾಗುವುದು, ಕಾಳಜಿ ಅನಿಸುವುದು, ಭಯವಾಗುವುದು ಇತ್ಯಾದಿ ತೊಂದರೆಗಳಾಗುತ್ತವೆ. ಅನೇಕ ಜನರು ಭಾವನಾತ್ಮಕ ದೃಷ್ಟಿಯಿಂದ ಸಂಬಂಧಿಕರಲ್ಲಿ ಸಿಲುಕುತ್ತಾರೆ. ಹೀಗಾದರೆ ಮಾನಸೋಪಚಾರ ತಜ್ಞರ ಸಹಾಯ ಪಡೆಯಬೇಕಾಗುತ್ತದೆ. ಇದರೊಂದಿಗೆ ಈ ರೀತಿಯ ತೊಂದರೆಗಳಾಗಬಾರದೆಂದು, ಅಂದರೆ ಮನಸ್ಸಿನ ಸ್ಥೀಮಿತವನ್ನು ಕಳೆದುಕೊಳ್ಳದೇ ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗಬೇಕೆಂದು ಮಾಡಬೇಕಾದ ಕೆಲವು ಉಪಾಯಯೋಜನೆಗಳನ್ನು ಮುಂದೆ ಕೊಡಲಾಗಿದೆ.

(ಭಾಗ ೧)

ಆಪತ್ಕಾಲದ ಪರಿಸ್ಥಿತಿಯಲ್ಲಿ ಉದ್ಭವಿಸುವ ಮಾನಸಿಕ ಸಮಸ್ಯೆಗಳ ಮೇಲಿನ ಕೆಲವು ಉಪಾಯಯೋಜನೆಗಳು

೧. ಆಪತ್ಕಾಲದಲ್ಲಿ ಭೀಕರ ಪರಿಸ್ಥಿತಿಯನ್ನು ಎದುರಿಸಲು ಮನೋಬಲ ಸಿಗಲು, ಉಪಯುಕ್ತವಾಗಿರುವ ಸ್ವಯಂಸೂಚನೆ-ಉಪಚಾರ ಪದ್ಧತಿಯ ಬಳಕೆಯನ್ನು ಮಾಡಬೇಕು ! : ಕೆಳಗೆ ನೀಡಿದ ದೃಷ್ಟಿಕೋನಗಳ ಪೈಕಿ ಯಾವುದಾದರೊಂದು ದೃಷ್ಟಿಕೋನವನ್ನು ತೆಗೆದುಕೊಂಡು ಸೂಚನೆಯನ್ನು ಕೊಡಬಹುದು.

೧ ಅ. ಸಕಾರಾತ್ಮಕತೆ

೧. ಮುಂಬರುವ ಆಪತ್ಕಾಲದಲ್ಲಿ ಸಾಧಕರು ಸಾಧನೆಯ ವೇಗವನ್ನು ಹೆಚ್ಚಿಸಲು ‘ಸಕಾರಾತ್ಮಕತೆ’ ಈ ಗುಣವನ್ನು ಮೈಗೂಡಿಸಿಕೊಂಡರೆ ಅವರಲ್ಲಿ ಈಶ್ವರನ ವೇಗವನ್ನು ಹಿಡಿಯುವ ಕ್ಷಮತೆಯು ಉಂಟಾಗುವುದು.

. ಶೇ. ೧೦೦ ರಷ್ಟು ಸಕಾರಾತ್ಮಕರಾಗಿದ್ದು ಮಾಡಿದ ಯಾವುದೇ ಕೃತಿಯ ಫಲನಿಷ್ಪತ್ತಿ ಶೇ. ೧೦೦ ರಷ್ಟಿರುತ್ತದೆ.

. ಸಕಾರಾತ್ಮಕರಾಗಿರುವುದರಿಂದ ಕೃತಜ್ಞತಾಭಾವ ಹೆಚ್ಚಾಗಲೂ ಸಹಾಯವಾಗುತ್ತದೆ; ಏಕೆಂದರೆ ‘ಏನೇ ಘಟಿಸಿದರೂ, ಅದು ನನ್ನ ಸಾಧನೆಗೆ ಆವಶ್ಯಕವಾಗಿದೆ’, ಎಂಬ ಭಾವ ಸಾಧಕರಲ್ಲಿ ಮೂಡಿರುತ್ತದೆ.

೪. ಸಕಾರಾತ್ಮಕವಾಗಿದ್ದರೆ ‘ಭಾವನಾಶೀಲತೆ’ ಈ ಸ್ವಭಾವದೋಷ ಮತ್ತು ಕೆಟ್ಟ ಶಕ್ತಿಗಳ ತೊಂದರೆಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ.’

– (ಪೂ.) ಶ್ರೀ. ಅಶೋಕ ಪಾತ್ರೀಕರ, ಸನಾತನ ಆಶ್ರಮ, ಗೋವಾ. (೧೦.೭.೨೦೧೭)

೧ ಆ. ಮನೋಬಲ ಮಂತ್ರ

ಆತ್ಮಬಲವನ್ನು ಹೆಚ್ಚಿಸಲು

ಜ್ಯಾಕೇ ಪರಿ ಣೋ ನಮಾಶ್ಮಾನಂ ತನ್ವಂ ಕೃಧಿ |

ವೀಡುರ್ವರೀಯೋಽರಾತೀರಪ ದ್ವೇಷಾಂಸ್ಯಾ ಕೃಧಿ ||

– ಅಥರ್ವವೇದ, ಕಾಂಡ ೧, ಸೂಕ್ತ ೨, ಖಂಡ ೨

ಅರ್ಥ : ಹೇ ಇಂದ್ರದೇವನೇ, ನಮ್ಮ ಶರೀರವನ್ನು ಸುದೃಢ ಮತ್ತು ಕಲ್ಲಿನಂತೆ ಬಲಶಾಲಿಯನ್ನಾಗಿ ಮಾಡು ಮತ್ತು ಶತ್ರುಗಳನ್ನು (ದೋಷಗಳನ್ನು) ನಮ್ಮಿಂದ ಸಂಪೂರ್ಣ ದೂರ ಮಾಡು.

ಈ ಮಂತ್ರವನ್ನು ದಿನದಲ್ಲಿ ಒಂದು ಬಾರಿ ೧೦೮ ಸಲ ಹೇಳಬೇಕು.

೧. ಪ್ರಸ್ತುತ ಲೇಖನದಲ್ಲಿ ಉದಾಹರಣೆಗಾಗಿ ನೀಡಿದ ಸ್ವಯಂಸೂಚನೆಗಳನ್ನು ಸನಾತನದ ಸಾಧಕಿ ಮತ್ತು ಗೋವಾದ ಮಾನಸೋಪಚಾರ-ತಜ್ಞರಾದ ಡಾ. (ಸೌ.) ಆಶಾ ಠಕ್ಕರ ಇವರು ತಯಾರಿಸಿದ್ದಾರೆ. ವಾಚಕರು ಈ ಸೂಚನೆಗಳಲ್ಲಿನ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಳ್ಳಬೇಕು ಮತ್ತು ಆವಶ್ಯಕತೆ ಅನಿಸಿದರೆ ಅವುಗಳಲ್ಲಿ ತಮ್ಮ ಮನಸ್ಸು ಸ್ವೀಕರಿಸುವಂತಹ ಬದಲಾವಣೆಯನ್ನು ಮಾಡಿ ಸ್ವಯಂಸೂಚನೆ ಗಳನ್ನು ತಯಾರಿಸಬೇಕು. ಈ ಸ್ವಯಂಸೂಚನೆಗಳ ಮಾದರಿಗನುಸಾರ ವಿವಿಧ ಸಂಕಟಗಳ ಸಂದರ್ಭದಲ್ಲಿಯೂ ಸ್ವಯಂಸೂಚನೆಗಳನ್ನು ತಯಾರಿಸಲು ತಿಳಿಯುತ್ತದೆ.

೨. ಈ ಲೇಖನದಲ್ಲಿ ನೀಡಿದ ಕೆಲವು ಉದಾಹರಣೆಗಳಲ್ಲಿ ಸ್ವಯಸೂಚನೆಗಳ ಪದ್ಧತಿಗಳಿಗನುಸಾರ ಸ್ವಯಂಸೂಚನೆಗಳನ್ನು ನೀಡಲಾಗಿದೆ. ಆ ಪದ್ಧತಿಗಳ ಪೈಕಿ ವಾಚಕರಿಗೆ ಯಾವುದು ಅನುಕೂಲವಾಗುತ್ತದೆಯೋ ಅಥವಾ ಯಾವುದು ಇಷ್ಟವಾಗುತ್ತದೆಯೋ, ಆ ಪದ್ಧತಿಗನುಸಾರ ಸ್ವಯಂಸೂಚನೆಗಳನ್ನು ಕೊಡಬೇಕು.

೩. ಸ್ವಯಂಸೂಚನೆಗಳ ವಿವಿಧ ಪದ್ಧತಿಗಳ ಸವಿಸ್ತಾರ ಮಾಹಿತಿ, ಸ್ವಭಾವದೋಷ ಮತ್ತು ಅಹಂನ ವಿವಿಧ ಲಕ್ಷಣಗಳಿಗೆ ಸ್ವಯಂಸೂಚನೆಗಳನ್ನು ಹೇಗೆ ತಯಾರಿಸಬೇಕು ಇತ್ಯಾದಿಗಳ ಸವಿಸ್ತಾರ ವಿವೇಚನೆಯನ್ನು ಸನಾತನದ ಗ್ರಂಥ ‘ಸ್ವಯಂಸೂಚನೆಗಳ ಮೂಲಕ ಸ್ವಭಾವದೋಷ-ನಿರ್ಮೂಲನೆ’ ಇದರಲ್ಲಿ ಮಾಡಲಾಗಿದೆ. ಒಟ್ಟಾರೆ ‘ಸ್ವಭಾವದೋಷ-ನಿರ್ಮೂಲನಾ ಪ್ರಕ್ರಿಯೆ’ಯನ್ನು ಸವಿಸ್ತಾರವಾಗಿ ತಿಳಿದುಕೊಳ್ಳಲು ಸನಾತನದ ಇದಕ್ಕೆ ಸಂಬಂಧಿಸಿದ ಗ್ರಂಥಮಾಲಿಕೆ ಯನ್ನು ಓದಿರಿ ಅಥವಾ ಸನಾತನ ಸಂಸ್ಥೆಯ ಜಾಲತಾಣದಲ್ಲಿ ಮುಂದಿನ ಸಂಪರ್ಕಕೊಂಡಿಗೆ ಭೇಟಿ ನೀಡಿ – www.sanatan.org/kannada/perosnality-development

೨. ನೆರೆ, ಭೂಕಂಪ, ಗಲಭೆ, ಮಹಾಯುದ್ಧ ಮುಂತಾದ ಆಪತ್ತುಗಳು ನಡೆದಿರುವಾಗ ಅವುಗಳ ಸಂದರ್ಭದಲ್ಲಿ ಬರುವ ಅಯೋಗ್ಯ ವಿಚಾರ ಅಥವಾ ಅಯೋಗ್ಯ ಭಾವನೆಗಳನ್ನು ದೂರಗೊಳಿಸಲು ಕೊಡಬೇಕಾದ ಸ್ವಯಂಸೂಚನೆಗಳ ಉದಾಹರಣೆಗಳು

೨ ಅ. ಅಯೋಗ್ಯ ವಿಚಾರ : ಸದ್ಯದ ಪ್ರತಿಕೂಲ ಪರಿಸ್ಥಿತಿಯನ್ನು ನೋಡಿ ಮನಸ್ಸು ಅಸ್ವಸ್ಥವಾಗಿ ದುಃಖವಾಗುವುದು (ಪರಿಸ್ಥಿತಿಯನ್ನು ಸ್ವೀಕರಿಸಲು ಬರದಿರುವುದು)

೨ ಅ ೧. ಸ್ವಯಂಸೂಚನೆ : ಸದ್ಯ ಆಪತ್ಕಾಲದಿಂದ ನಿರ್ಮಾಣವಾದ ಪ್ರತಿಕೂಲತೆಯನ್ನು ನೋಡಿ ಯಾವಾಗ ನಾನು ದುಃಖಿತಳಾಗುವೆನೋ, ಆಗ ‘ಇದೆಲ್ಲವೂ ಈಶ್ವರೇಚ್ಛೆಯಿಂದಲೇ ನಡೆಯುತ್ತಿದ್ದು ಮುಂದೆ ಬರಬಹುದಾದ ಆಪತ್ಕಾಲವನ್ನು ಎದುರಿಸಲು ಭಗವಂತನು ಎಲ್ಲರ ಮನಸ್ಸಿನ ಸಿದ್ಧತೆಯನ್ನು ಮಾಡಿಸಿಕೊಳ್ಳುತ್ತಿದ್ದಾನೆ’, ಎಂಬುದರ ಅರಿವಾಗಿ ‘ದೇವರು ನನಗೆ ಇದರಿಂದ ಏನು ಕಲಿಸುತ್ತಿದ್ದಾನೆ ?’, ಎಂಬುದರ ಬಗ್ಗೆ ನಾನು ಚಿಂತನೆಯನ್ನು ಮಾಡುವೆನು.

೨ ಆ. ಅಯೋಗ್ಯ ವಿಚಾರ : ಆಪತ್ಕಾಲದ ಸ್ಥಿತಿಯಲ್ಲಿ ಸಾಧನೆಯ ಪ್ರಯತ್ನವನ್ನು ಮಾಡುವುದು ಕಠಿಣವಾಗಿದೆ’, ಎಂದು ಅನಿಸುವುದು

೨ ಆ ೧. ಸ್ವಯಂಸೂಚನೆ : ‘ಆಪತ್ಕಾಲದ ಸ್ಥಿತಿಯಲ್ಲಿ ಯಾವಾಗ ಸಾಧನೆಯ ಪ್ರಯತ್ನವನ್ನು ಮಾಡುವುದು ಕಠಿಣವಾಗಿದೆ’, ಎಂದು ನನಗೆ ಅನಿಸುವುದೋ, ಆಗ ‘ಸದ್ಯದ ಸ್ಥಿತಿಯಲ್ಲಿಯೂ ಮನಸ್ಸಿನ ಸ್ತರದಲ್ಲಿ ಸಾಧನೆಯ ಎಲ್ಲ ಪ್ರಯತ್ನಗಳನ್ನು (ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ, ಭಾವವೃದ್ಧಿಯ ಪ್ರಯತ್ನ ಇತ್ಯಾದಿ) ನಾನು ಸಹಜವಾಗಿ ಮಾಡಬಹುದು’, ಎಂಬುದು ನನಗೆ ಅರಿವಾಗುವುದು ಮತ್ತು ಸಂಪತ್ಕಾಲಕ್ಕಿಂತ ಆಪತ್ಕಾಲದಲ್ಲಿ ಸಮಯದ ಮೌಲ್ಯವು ಅನೇಕ ಪಟ್ಟುಗಳಲ್ಲಿ ಹೆಚ್ಚಾಗಿ ಪ್ರಯತ್ನಗಳ ಫಲವೂ ಅನೇಕ ಪಟ್ಟುಗಳಲ್ಲಿ ಸಿಗುತ್ತದೆ; ಆದುದರಿಂದ ನಾನು ಸಕಾರಾತ್ಮಕವಾಗಿದ್ದು ಪ್ರಯತ್ನವನ್ನು ಮಾಡುವೆನು.

೨ ಇ. ಅಯೋಗ್ಯ ವಿಚಾರ : ‘ಜೀವನದ ಇಷ್ಟು ಮಹತ್ವದ ದಿನಗಳನ್ನು ನಾನು ಮನೆಯಲ್ಲಿದ್ದು ವ್ಯರ್ಥವಾಗಿ ಕಳೆಯುತ್ತಿದ್ದೇನೆ’, ಎಂಬ ವಿಚಾರ ಬರುವುದು

೨ ಇ ೧. ಸ್ವಯಂಸೂಚನೆ : ಯಾವಾಗ ‘ಜೀವನದ ಇಷ್ಟೊಂದು ಮಹತ್ವದ ದಿನಗಳನ್ನು ನಾನು ಮನೆಯಲ್ಲಿದ್ದು ವ್ಯರ್ಥಗೊಳಿಸುತ್ತಿ ದ್ದೇನೆ’, ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಬರುವುದೋ, ಆಗ ‘ಸದ್ಯದ ಆಪತ್ಕಾಲೀನ ಸ್ಥಿತಿಯಲ್ಲಿ ‘ನಾಗರಿಕರು ಮನೆಯಲ್ಲಿರ ಬೇಕು’, ಎಂದು ಸರಕಾರವು ಆದೇಶ ನೀಡಿದುದರಿಂದ ಅದರ ಪಾಲನೆ ಮಾಡುವುದು ನನ್ನ ಸಾಧನೆಯಾಗಿದೆ’, ಎಂದು ನನಗೆ ಅರಿವಾಗುವುದು ಮತ್ತು ‘ನಾನು ಮನೆಯಲ್ಲಿದ್ದು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಯಾವ ಪ್ರಯತ್ನಗಳನ್ನು ಮಾಡಬಹುದು ? ಎಂದು ಜವಾಬ್ದಾರ ಸಾಧಕರನ್ನು ಕೇಳುವೆನು.

೨ ಈ. ಅಯೋಗ್ಯ ವಿಚಾರ : ‘ನನಗೆ ಮನೆಯಲ್ಲಿದ್ದು ಬಹಳ ಬೇಸರವಾಗುತ್ತಿದೆ’, ಎಂಬ ವಿಚಾರ ಬರುವುದು

೨ ಈ ೧. ಸ್ವಯಂಸೂಚನೆ : ಯಾವಾಗ ನನ್ನ ಮನಸ್ಸಿನಲ್ಲಿ ‘ಮನೆಯಲ್ಲಿದ್ದು ನನಗೆ ಬಹಳ ಬೇಸರವಾಗುತ್ತಿದೆ’, ಎಂಬ ವಿಚಾರ ಬರುವುದೋ, ಆಗ ನಾನು ‘ಮನೆಯ ಕೆಲಸಗಳನ್ನು ಸೇವೆ ಎಂದು ಮಾಡಿದರೆ, ನನ್ನ ಸಾಧನೆಯಾಗಲಿದೆ, ಹಾಗೆಯೇ ನಾನು ಮನೆಯಲ್ಲಿದ್ದು ವ್ಯಷ್ಟಿ ಸಾಧನೆ (ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ, ಭಾವವೃದ್ಧಿಯ ಪ್ರಯತ್ನ ಮತ್ತು ನಾಮಜಪಾದಿ ಉಪಾಯ) ಮತ್ತು ಸಾಧ್ಯವಿರುವ ಸಮಷ್ಟಿ ಸೇವೆಯನ್ನು ಮಾಡು ವುದು ಶ್ರೀ ಗುರುಗಳಿಗೆ ಅಪೇಕ್ಷಿತವಿದೆ’, ಎಂಬುದರ ಅರಿವಾಗಿ ನಾನು ಅವುಗಳಿಗಾಗಿ ಪ್ರಯತ್ನಿಸುವೆನು.

೨ ಊ. ಅಯೋಗ್ಯ ವಿಚಾರ : ‘ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಆವಶ್ಯಕವಿರುವ ಮನೋಬಲ ನನ್ನಲ್ಲಿಲ್ಲ’, ಎಂದೆನಿಸಿ ಒತ್ತಡವಾಗುವುದು

೨ ಊ ೧. ಸ್ವಯಂಸೂಚನೆ : ಯಾವಾಗ ‘ಕಠಿಣ ಪರಿಸ್ಥಿತಿಯನ್ನು ಎದುರಿಸಲು ಆವಶ್ಯಕವಿರುವ ಮನೋಬಲ ನನ್ನಲ್ಲಿಲ್ಲ’, ಎಂದೆನಿಸಿ ನನಗೆ ಒತ್ತಡ ಆಗುವುದೋ, ಆಗ ‘ಭಗವಂತನು ಒಳ್ಳೆಯ ಮತ್ತು ಕೆಟ್ಟ ಈ ಎರಡೂ ಪರಿಸ್ಥಿತಿಗಳಲ್ಲಿಯೂ ನನ್ನೊಂದಿಗಿದ್ದಾನೆ ಮತ್ತು ನಾನು ಸಾಧನೆಯನ್ನು ಮಾಡಿದರೆ, ಪ್ರತಿಕೂಲ ಪರಿಸ್ಥಿತಿಯಲ್ಲಿ ನಾನೇನು ಮಾಡುವುದು ಆವಶ್ಯಕವಾಗಿದೆ ?’, ಎಂಬುದನ್ನು ಅವನೇ ಸೂಚಿಸಿ ನನ್ನ ಮನೋಬಲವನ್ನು ಹೆಚ್ಚಿಸಲಿದ್ದಾನೆ’, ಎಂದು ನನಗೆ ಅರಿವಾಗಿ ನಾನು ಭಗವಂತನ ಮೇಲೆ ದೃಢ ಶ್ರದ್ಧೆಯನ್ನಿಡುವೆನು.

೧. ಪ್ರಸಂಗ : ‘ನನಗೆ ಸಾಂಕ್ರಾಮಿಕ ರೋಗಗಳ ಸೋಂಕಾಗುವುದು’, ಈ ವಿಚಾರದಿಂದ ಭಯವಾಗುವುದು

೧ ಅ. ಸ್ವಯಂಸೂಚನೆ : ಯಾವಾಗ ನನ್ನ ಮನಸ್ಸಿನಲ್ಲಿ ‘ನನಗೆ ಸಾಂಕ್ರಾಮಿಕ ರೋಗಗಳು ಬರಬಹುದು’, ಎಂಬ ವಿಚಾರದಿಂದ ಭಯವಾಗುವುದೋ, ಆಗ ‘ನಾನು ಆವಶ್ಯಕವಿರುವ ಎಲ್ಲ ಕಾಳಜಿ ಯನ್ನು ತೆಗೆದುಕೊಳ್ಳುತ್ತಿದ್ದೇನೆ’, ಎಂಬುದನ್ನು ನಾನು ನನ್ನ ಮನಸ್ಸಿಗೆ ನೆನಪು ಮಾಡಿಕೊಡುವೆನು ಮತ್ತು ದಿನವಿಡಿ ಹೆಚ್ಚೆಚ್ಚು ಸಮಯ ಕೊರೊನಾದಿಂದ ಸುರಕ್ಷಿತವಾಗಿರಲು ವಿಶೇಷ/ಉಪಯುಕ್ತ ನಾಮಜಪ ಮತ್ತು ಪ್ರಾರ್ಥನೆಯನ್ನು ಮಾಡಿ ಸತ್‌ನಲ್ಲಿರುವೆನು.

೨. ಪ್ರಸಂಗ : ‘ನನಗೆ ಸಾಂಕ್ರಾಮಿಕ ರೋಗದ ಸೋಂಕಾದರೆ ನನ್ನ ಮೃತ್ಯುವಾಗುವುದು’, ಎಂದು ಭಯವೆನಿಸುವುದು

೨ ಅ. ಸ್ವಯಂಸೂಚನೆ : ಯಾವಾಗ ನನ್ನ ಮನಸ್ಸಿನಲ್ಲಿ ‘ನನಗೆ ಸಾಂಕ್ರಾಮಿಕ ರೋಗದ ಸೋಂಕಾದರೆ ನನ್ನ ಮೃತ್ಯುವಾಗುವುದು’, ಎಂಬ ವಿಚಾರ ಬರುವುದೋ, ಆಗ ‘ಅನೇಕ ಜನರು ಇದರಿಂದ ಗುಣಮುಖರಾಗುತ್ತಿದ್ದಾರೆ ಮತ್ತು ಈಗ ಲಸಿಕೆಯೂ ಲಭ್ಯವಿದೆ, ಎಂದು ನನಗೆ ಅರಿವಾಗಿ ನಾನು ಸಕಾರಾತ್ಮಕವಾಗಿದ್ದು ಮತ್ತು ಕುಟುಂಬದವರು, ಹಿತಚಿಂತಕರು, ಹಾಗೆಯೇ ಸರಕಾರಿ ವ್ಯವಸ್ಥೆಯು ನೀಡಿದ ಸೂಚನೆಗಳ ಪಾಲನೆಯನ್ನು ಮಾಡಿ ಆರೋಗ್ಯದ ಯೋಗ್ಯ ಕಾಳಜಿಯನ್ನು ತೆಗೆದುಕೊಳ್ಳುವೆನು.

(ಮುಂದುವರಿಯುವುದು)