ಚೀನಾದ ವಿರುದ್ಧ ನಮ್ಮ ಸೈನ್ಯವು ಭಾರತಕ್ಕೆ ಸಹಾಯ ಮಾಡಲಿದೆ ! – ಅಮೇರಿಕಾ

ನಮ್ಮ ಸೈನಿಕರು ಚೀನಾದ ವಿರುದ್ಧ ದೃಢವಾಗಿ ನಿಂತಿದ್ದು ಭವಿಷ್ಯದಲ್ಲಿಯೂ ಇರಲಿದೆ. ಅದು ಭಾರತ ಹಾಗೂ ಚೀನಾದ ಘರ್ಷಣೆಯಿರಲಿ ಅಥವಾ ಇತರ ದೇಶ ಇರಲಿ, ಎಂದು ಹೇಳುವ ಮೂಲಕ ಅಮೇರಿಕಾದ ವೈಟ್ ಹೌಸ್‌ನ ‘ಚೀಫ್ ಆಫ್ ಸ್ಟಾಫ್’ ಮಾರ್ಕ್ ಮೆಡೊಜ ಇವರು ಚೀನಾದೊಂದಿಗಿನ ಘರ್ಷಣೆಯಲ್ಲಿ ಭಾರತಕ್ಕೆ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.

ಕುವೈತ್‌ನಲ್ಲಿನ ೮ ಲಕ್ಷ ಭಾರತೀಯರಿಗೆ ದೇಶ ಬಿಡಬೇಕಾಗಿ ಬರುವ ಸಾಧ್ಯತೆ

ಕುವೈತ್‌ನ ಸಂಸತ್ತಿನಲ್ಲಿ ವಿದೇಶಿ ಕೆಲಸಗಾರರಿಗೆ ಸಂಬಂಧಪಟ್ಟ ಅಪ್ರವಾಸಿ ಕೋಟಾ ವಿಧೇಯಕ ಮಸೂದೆಗೆ ಸಮ್ಮತಿ ನೀಡಲಾಗಿದೆ. ಒಂದು ವೇಳೆ ಈ ಸಮೂದೆ ಏನಾದರೂ ಕಾಯಿದೆಯಾಗಿ ರೂಪಾಂತರಗೊಂಡರೆ ಕುವೈತ್‌ನಲ್ಲಿರುವ ೮ ಲಕ್ಷ ಭಾರತೀಯ ಕೆಲಸಗಾರರು ಕುವೈತ್ ಅನ್ನು ಬಿಡಬೇಕಾಗಿ ಬರುತ್ತದೆ.

ದೆಹಲಿಯಲ್ಲಿ ನಡೆದ ಗಲಭೆಗೆ ಸಂಯುಕ್ತ ಅರಬ್ ಅಮಿರಾತ್ ಹಾಗೂ ಓಮಾನ್‌ನಿಂದ ಹಣ ಪೂರೈಕೆ ! – ಪೋಲಿಸರ ಸಂದೇಹ

ಫೆಬ್ರುವರಿ ತಿಂಗಳಿನಲ್ಲಿ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಹಾಗೂ ಅನಂತರ ನಡೆದ ಗಲಭೆಗೆ ಸಂಯುಕ್ತ ಅರಬ ಅಮಿರಾತ್ ಹಾಗೂ ಓಮಾನ್ ಅಂದರೆ ಮಧ್ಯಪೂರ್ವ ಇಸ್ಲಾಮೀ ದೇಶಗಳಿಂದ ಹಣ ಪೂರೈಸಲಾಗಿದೆ, ಎಂಬ ಮಾಹಿತಿಯನ್ನು ದೆಹಲಿ ಪೋಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ

ಗಲವಾನ್ ಕಣಿವೆಯಲ್ಲಿ ಚೀನಾದ ೧೦೦ ಸೈನಿಕರ ಮರಣ ಹೊಂದಿದ್ದರು ! ಚೀನಾದ ಮಾಜಿ ಸೈನ್ಯಾಧಿಕಾರಿಗಳ ಹೇಳಿಕೆ

ಗಲವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾದ ಸೈನ್ಯದ ನಡುವೆ ನಡೆದ ಘರ್ಷಣೆಯಲ್ಲಿ ಚೀನಾದ ೧೦೦ ಸೈನಿಕರು ಮರಣ ಹೊಂದಿದ್ದಾರೆ; ಆದರೆ ಚೀನಾ ಸರಕಾರವು ಈ ಸಂಖ್ಯಾವಾರನ್ನು ಮುಚ್ಚಿಡುತ್ತಿದೆ. ಸತ್ಯ ಎದುರಿಗೆ ಬಂದರೆ ಚೀನಾದ ರಾಷ್ಟ್ರಾಧ್ಯಕ್ಷರಾದ ಶೀ ಜಿನಪಿಂಗ್‌ರವರ ವೈಫಲ್ಯ ತಿಳಿದುಬರುವುದು

ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ಭಾರತ ಜಗತ್ತಿನ ೩ ನೇ ಸ್ಥಾನದಲ್ಲಿ !

ದೇಶದಲ್ಲಿ ಸಂಚಾರ ನಿಷೇಧವನ್ನು ಸಡಿಲಗೊಳಿಸಿದಾಗ ರೋಗಿಗಳ ಸಂಖ್ಯೆಯಲ್ಲಿ ದೊಡ್ಡಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇಂದು ಭಾರತವು ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ರಶಿಯಾಗೆ ಹಿಂದಿಕ್ಕಿ ಜಗತ್ತಿನ ೩ ನೇ ಸ್ಥಾನಕ್ಕೆ ತಲುಪಿದೆ. ಜುಲೈ ೫ ರಂದು ಭಾರತದಲ್ಲಿ ರೋಗಿಗಳ ಸಂಖ್ಯೆ ೬ ಲಕ್ಷ ೯೦ ಸಾವಿರದ ೩೯೬ ರಷ್ಟಾಗಿದ್ದರೆ

ಚೀನಾನಾದಲ್ಲಿ ಕೊರೋನಾದ ಬಳಿಕ ಈಗ ‘ಬ್ಯೂಬ್ಯಾನಿಕ್ ಪ್ಲೇಗ್ ಹಾಗೂ ‘ಪಿಗ್ ಇನ್ಫ್ಲೂಎನ್ಝಾ ರೋಗಗಳ ಅಪಾಯವಿದೆ

ಜಗತ್ತಿನಲ್ಲಿ ಕೊರೋನಾದ ಸಾಂಕ್ರಾಮಿಕ ಹೆಚ್ಚಾಗುತ್ತಿರುವಾಗ ಈಗ ಉತ್ತರ ಚೀನಾದಲ್ಲಿನ ಒಂದು ನಗರದಲ್ಲಿ ‘ಬ್ಲೂಬಾನಿಕ್ ಪ್ಲೇಗ್ ೨ರ ಹೊಸ ಸಂಶಯಿತ ರೋಗಿಗಳು ಸಿಕ್ಕಿದ್ದಾರೆ. ಈ ರೋಗವು ಸಹಜವಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದು. ಆದ್ದರಿಂದ ಭವಿಷ್ಯದಲ್ಲಿ ಈ ರೀತಿಯಲ್ಲಿ ಕೆಲವು ರೋಗಿಗಳು ಸಿಗುವ ಸಾಧ್ಯತೆಗಳಿರುವುದರಿಂದ ಆರೋಗ್ಯ ಇಲಾಖೆಯು ಎಚ್ಚರಿಕೆಯ ಮುನ್ಸೂಚನೆ ನೀಡಿದೆ.

ಕೊರೋನಾ ಸಾಂಕ್ರಾಮಿಕದಿಂದ ‘ಇಸ್ಕಾನ್ನ ಪ್ರಮುಖ ಸ್ವಾಮಿ ಭಕ್ತಿಚಾರೂ ಮಹಾರಾಜರ ಅಮೇರಿಕಾದಲ್ಲಿ ನಿಧನ

‘ಇಸ್ಕಾನ್ನ ಪ್ರಮುಖ ಸ್ವಾಮೀ ಭಕ್ತೀಚಾರು ಮಹಾರಾಜರ ಕೊರೋನಾದ ಸಾಂಕ್ರಾಮಿಕದಿಂದ ನಿಧನರಾದರು. ಅವರು ಜೂನ್ ೩ರಂದು ಉಜ್ಜೈನಿಯಿಂದ ಅಮೇರಿಕಾಗೆ ಬಂದಿದ್ದರು. ಜೂನ್ ೧೮ರಂದು ತಪಾಸಣೆ ಮಾಡಿದಾಗ ಅವರಿಗೆ ಕೊರೋನಾ ಸೋಂಕು ತಗಲಿರುವುದು ಬೆಳಕಿಗೆ ಬಂದಿತು. ಕಳೆದ ಕೆಲವು ದಿನಗಳಿಂದ ಅವರನ್ನು ವೆಂಟಿಲೇಟರ್‌ನಲ್ಲಿ (ಕೃತಕ ಉಸಿರಾಟದ) ದಲ್ಲಿ ಇಡಲಾಗಿತ್ತು.

ರಾಷ್ಟ್ರಪತಿ ರಾಮನಾಥ ಕೋವಿಂದ ಇವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

ಚೀನಾದೊಂದಿಗೆ ನಡೆಯುತ್ತಿರುವ ಘರ್ಷಣೆಯ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು ಜುಲೈ ೫ ರಂದು ಬೆಳಿಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಇವರನ್ನು ಭೇಟಿಯಾದರು. ಸುಮಾರು ಅರ್ಧಗಂಟೆ ಭೇಟಿ ಮಾಡಿದ ಸಮಯದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಷಯದ ಬಗ್ಗೆ ಮಹತ್ವದ ಅಂಶಗಳ ಬಗ್ಗೆ ಚರ್ಚೆಯನ್ನು ಮಾಡಿದ್ದಾರೆ.

ಕಂಧಮಾಲ್(ಒಡಿಶಾ)ದಲ್ಲಿ ೪ ನಕ್ಸಲರ ಹತ್ಯೆ

ಇಲ್ಲಿಯ ತುಮುದಿ ಆಣೆಕಟ್ಟು ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ರಕ್ಷಣಾಪಡೆಗಳು ೪ ನಕ್ಸಲರ ಹತ್ಯೆ ಮಾಡಿದ್ದಾರೆ. ಇಲ್ಲಿ ನಕ್ಸಲರು ಅಡಗಿರುವ ಮಾಹಿತಿ ಸಿಕ್ಕಿದ ಮೇರೆಗೆ ರಕಣಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದಾಗ ಚಕಮಕಿ ಆರಂಭವಾಯಿತು. ಈ ನಕ್ಸಲರಿಂದ ೧೫ ಕೆಜಿ ಸ್ಪೋಟಕಗಳು ಹಾಗೂ ೨೮ ಡಿಟೊನೆಟರ್ಸ ಪತ್ತೆಯಾಗಿವೆ.

ಕಾಶ್ಮೀರ ಗಡಿಯಲ್ಲಿ ತನ್ನ ಸೈನ್ಯವನ್ನು ಹೆಚ್ಚಿಸಿದ ಪಾಕ್

ಭಾರತ ಹಾಗೂ ಚೀನಾದ ನಡುವೆ ಪೂರ್ವ ಲಡಾಖ್‌ನಲ್ಲಿನ ಗಡಿಯಲ್ಲಿ ನಡೆಯುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಪುಂಛಟಗತ್‌ನ ಪಾಕ್‌ಆಕ್ರಮಿತ ಕಾಶ್ಮೀರದಲ್ಲಿನ ಕೊತಲೀ, ರಾವಲಕೋಟ್, ವಿಂಭರ್, ಬಾಗ್, ಮುಝಫ್ಫರಾಬಾದ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ಹೆಚ್ಚುವರಿ ಬಟಾಲಿಯನ್‌ಗಳನ್ನು ನೇಮಿಸಿದೆ.