ಕಾಶ್ಮೀರ ಗಡಿಯಲ್ಲಿ ತನ್ನ ಸೈನ್ಯವನ್ನು ಹೆಚ್ಚಿಸಿದ ಪಾಕ್

ಪಾಕ್ ಹಾಗೂ ಚೀನಾದಿಂದ ಷಡ್ಯಂತ್ರದ ಸಾಧ್ಯತೆ

ಭಾರತವು ಚೀನಾದೊಂದಿಗೆ ಚರ್ಚೆ ನಡೆಸುತ್ತಿರುವಾಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೈನ್ಯದ ಕಾರ್ಯಾಚರಣೆ ನಡೆಸಿ ಅದನ್ನು ಪುನಃ ಭಾರತದೊಂದಿಗೆ ಸೇರಿಸುವಂತಹ ಧೈರ್ಯದ ಕೃತಿ ಮಾಡಬೇಕು ! ಇದರಿಂದ ಚೀನಾ ಹಾಗೂ ಪಾಕ್‌ಗೆ ತಕ್ಕ ಸಂದೇಶ ಹೋಗುವುದು ! ಒಂದು ವೇಳೆ ಚೀನಾವು ಇದರಲ್ಲಿ ಕೈ ಹಾಕಿದರೆ, ಭಾರತವು ಜಾಗತಿಕ ಮಟ್ಟದಲ್ಲಿ ಅದರ ಮೇಲೆ ಒತ್ತಡ ಉಂಟು ಮಾಡುವ ಪ್ರಯತ್ನವನ್ನು ಮಾಡಬೇಕು !

ನವ ದೆಹಲಿ – ಭಾರತ ಹಾಗೂ ಚೀನಾದ ನಡುವೆ ಪೂರ್ವ ಲಡಾಖ್‌ನಲ್ಲಿನ ಗಡಿಯಲ್ಲಿ ನಡೆಯುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಪುಂಛಟಗತ್‌ನ ಪಾಕ್‌ಆಕ್ರಮಿತ ಕಾಶ್ಮೀರದಲ್ಲಿನ ಕೊತಲೀ, ರಾವಲಕೋಟ್, ವಿಂಭರ್, ಬಾಗ್, ಮುಝಫ್ಫರಾಬಾದ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ಹೆಚ್ಚುವರಿ ಬಟಾಲಿಯನ್‌ಗಳನ್ನು ನೇಮಿಸಿದೆ. ಪಾಕಿಸ್ತಾನ ತನ್ನ ಸೈನ್ಯಶಕ್ತಿಯನ್ನು ಹೆಚ್ಚುಕಡಿಮೆ ದುಪ್ಪಟ್ಟು ಹೆಚ್ಚಿಸಿದೆ. ಭಾರತ-ಚೀನಾ ಒತ್ತಡದ ಲಾಭ ಪಡೆದುಕೊಂಡು ಗಡಿಯಲ್ಲಿ ಉದ್ವಿಗ್ನತೆ ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಅಂದಾಜಿಸಲಾಗುತ್ತಿದೆ. ಇದರಿಂದ ಪಾಕ್ ಹಾಗೂ ಚೀನಾ ಷಡ್ಯಂತ್ರವನ್ನು ರೂಪಿಸುತ್ತಿದೆ ಎನ್ನಲಾಗುತ್ತಿದೆ.