ಕೊರೋನಾ ಸಾಂಕ್ರಾಮಿಕದಿಂದ ‘ಇಸ್ಕಾನ್ನ ಪ್ರಮುಖ ಸ್ವಾಮಿ ಭಕ್ತಿಚಾರೂ ಮಹಾರಾಜರ ಅಮೇರಿಕಾದಲ್ಲಿ ನಿಧನ

ಸ್ವಾಮಿ ಭಕ್ತಿಚಾರೂ ಮಹಾರಾಜ

ಫ್ಲೋರಿಡಾ (ಅಮೇರಿಕಾ) – ‘ಇಸ್ಕಾನ್ನ ಪ್ರಮುಖ ಸ್ವಾಮೀ ಭಕ್ತೀಚಾರು ಮಹಾರಾಜರ ಕೊರೋನಾದ ಸಾಂಕ್ರಾಮಿಕದಿಂದ ನಿಧನರಾದರು. ಅವರು ಜೂನ್ ೩ರಂದು ಉಜ್ಜೈನಿಯಿಂದ ಅಮೇರಿಕಾಗೆ ಬಂದಿದ್ದರು. ಜೂನ್ ೧೮ರಂದು ತಪಾಸಣೆ ಮಾಡಿದಾಗ ಅವರಿಗೆ ಕೊರೋನಾ ಸೋಂಕು ತಗಲಿರುವುದು ಬೆಳಕಿಗೆ ಬಂದಿತು. ಕಳೆದ ಕೆಲವು ದಿನಗಳಿಂದ ಅವರನ್ನು ವೆಂಟಿಲೇಟರ್‌ನಲ್ಲಿ (ಕೃತಕ ಉಸಿರಾಟದ) ದಲ್ಲಿ ಇಡಲಾಗಿತ್ತು.
ಸ್ವಾಮೀ ಭಕ್ತಿಚಾರು ಮಹಾರಾಜರು ‘ಇಸ್ಕಾನ್ನ ಸಂಸ್ಥಾಪಕರಾದ ಭಕ್ತಿವೇದಾಂತ ಸ್ವಾಮೀ ಪ್ರಭುಪಾದರವರ ಪರಮಪ್ರಿಯ ಶಿಷ್ಯರಪೈಕಿ ಒಬ್ಬರಾಗಿದ್ದರು. ಅವರಿಗೆ ಸ್ವಾಮೀ ಪ್ರಭುಪಾದರ ಸೇವೆ ಮಾಡಲು ಅವಕಾಶ ಸಿಕ್ಕಿತ್ತು. ಅವರು ಸ್ವಾಮೀ ಪ್ರಭುಪಾದರ ಗ್ರಂಥವನ್ನು ಬಂಗಾಲಿ ಭಾಷೆಗೆ ಭಾಷಾಂತರ ಕೂಡ ಮಾಡಿದ್ದರು.