ನೇಪಾಳ ಚೀನಾದ ಕಪಿಮುಷ್ಟಿಯಲ್ಲಿ !

ಒಂದು ವೇಳೆ ನೇಪಾಳ ಚೀನಾದ ವಶಕ್ಕೆ ಹೋದರೆ ನಾಳೆ ಲಡಾಖ್, ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ, ಭೂತಾನ, ಸಿಕ್ಕಿಮ್, ಅರುಣಾಚಲ ಪ್ರದೇಶ ಇಷ್ಟು ಮಾತ್ರವಲ್ಲ, ಸಂಪೂರ್ಣ ಈಶಾನ್ಯ ಭಾರತಕ್ಕೆ ದೊಡ್ಡ ಆಘಾತ ನಿರ್ಮಾಣ ವಾಗಬಹುದು. ಇದನ್ನು ತಪ್ಪಿಸಲು ಈಗ ಭಾರತ ಕೃತಿಶೀಲವಾಗಬೇಕು.

ಭಾರತದಲ್ಲಿರುವ ಅಯೋಧ್ಯೆ ಸುಳ್ಳಾಗಿದ್ದು, ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ(ಯಂತೆ) !

ಭಾರತದಲ್ಲಿರುವ ಅಯೋಧ್ಯೆ ನಕಲಿ ಇದೆ. ಪ್ರಭು ಶ್ರೀರಾಮಚಂದ್ರ ಇವರು ಭಾರತೀಯರಲ್ಲ, ನೇಪಾಳಿಯಾಗಿದ್ದರು. ಭಾರತವು ಸಾಂಸ್ಕೃತಿಕ ದಾಳಿಯನ್ನು ಮಾಡಿ ನಕಲಿ ಅಯೋಧ್ಯೆಯನ್ನು ನಿರ್ಮಿಸಿದ್ದಾರೆ. ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ, ಎಂಬ ‘ಚೀನಾಶೋಧ’ವನ್ನು ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿಯವರು ಕಂಡುಹಿಡಿದ್ದಾರೆ.

ಭಾರತದಲ್ಲಿ ಪತ್ತೆ ಆಯಿತು ಭಗವಾನ ಶಂಕರನ ೨೮ ಸಾವಿರದ ೪೫೦ ವರ್ಷಗಳಷ್ಟು ಪ್ರಾಚೀನ ಮೂರ್ತಿ ಅಂದರೆ ದ್ವಾಪರಯುಗದ್ದಾಗಿದೆ !

ಭಾರತದಲ್ಲಿ ‘ಕಲ್ಪ ವಿಗ್ರಹ’ ಈ ಹೆಸರಿನಲ್ಲಿ ಗುರುತಿಸಲ್ಪಡುವ ಭಗವಾನ ಶಂಕರನ ಧಾತುವಿನ ಮೂರ್ತಿಯು ಜಗತ್ತಿನಲ್ಲಿ ಇಲ್ಲಿಯವರೆಗೆ ಸಿಕ್ಕಿರುವ ಅನೇಕ ಮೂರ್ತಿಗಳ ಪೈಕಿ ಎಲ್ಲಕ್ಕಿಂತ ಪ್ರಾಚೀನ ಮೂರ್ತಿಯಾಗಿದೆ ಎಂದು ತಿಳಿದುಬಂದಿದೆ. ಈ ಮೂರ್ತಿ ಒಂದು ಮರದ ಪೆಟ್ಟಿಗೆಯಲ್ಲಿ ಇಡಲಾಗಿತ್ತು.

ದೇಶದಾದ್ಯಂತ ಇಲ್ಲಿಯವರೆಗೆ ೯ ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಕೊರೋನಾದ ಸೋಂಕು

ಇಂದು ದೇಶದಾದ್ಯಂತ ಕೊರೋನಾ ಪೀಡಿತರ ಸಂಖ್ಯೆ ೯ ಲಕ್ಷ ೬ ಸಾವಿರದ ೭೫೨ ತನಕ ತಲುಪಿದೆ. ಈ ಪೈಕಿ ಚಿಕಿತ್ಸೆ ನಡೆಯುತ್ತಿರುವ ರೋಗಿಗಳ ಸಂಖ್ಯೆ ೩ ಲಕ್ಷ ೧೧ ಸಾವಿರದ ೫೬೫ ಇದ್ದು ಇಲ್ಲಿಯವರೆಗೆ ೫ ಲಕ್ಷ ೭೧ ಸಾವಿರದ ೪೬೦ ರೋಗಿಗಳು ಗುಣಮುಖರಾಗಿದ್ದಾರೆ.

ಮೂಲಭೂತ ನಿಯಮಗಳನ್ನು ಪಾಲಿಸದಿದ್ದರೆ ಕೊರೋನಾವು ಗಂಭೀರ ಮತ್ತು ಅತೀಗಂಭೀರ ರೂಪ ತಾಳುವುದು ! – ವಿಶ್ವ ಆರೋಗ್ಯ ಸಂಸ್ಥೆ

ಕೊರೋನಾ ಸೋಂಕು ಇಂದಿಗೂ ಜನರ ಮೊದಲನೇ ಸ್ಥಾನದ ಶತ್ರು ಆಗಿದೆ. ದೇಶಗಳು ಇನ್ನೂ ಆರೋಗ್ಯಕ್ಕೆ ಸಂಬಂಧಪಟ್ಟ ಮೂಲಭೂತ ನಿಯಮಗಳನ್ನು ಪಾಲಿಸದಿದ್ದರೆ ಕೊರೋನಾ ಮಹಾಮಾರಿ ಗಂಭೀರ ಮತ್ತು ಅತೀ ಗಂಭೀರ ರೂಪವನ್ನು ತಾಳುವುದು, ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಎಡಹಾನೊಮ್ ಗೆಬ್ರೆಯೆಸಸ್ ಇವರು ಎಚ್ಚರಿಕೆ ನೀಡಿದ್ದಾರೆ.

ಲಂಡನ್‌ನಲ್ಲಿ ಪಾಕಿಸ್ತಾನಿ ನಾಗರಿಕರಿಂದ ವಿಸ್ತಾರವಾದಿ ಚೀನಾಗೆ ಖಂಡನೆ : ಭಾರತವನ್ನು ಬೆಂಬಲಿಸಿ ‘ವಂದೇ ಮಾತರಮ್’ ಗಾಯನ

ಪಾಕಿಸ್ತಾನಿ ನಾಗರಿಕರು ಚೀನಾದ ರಾಯಭಾರಿ ಕಛೇರಿಯ ಮುಂದೆ ಪ್ರತಿಭಟನೆ ಮಾಡುತ್ತ ವಿಸ್ತಾರವಾದಿ ಚೀನಾವನ್ನು ಖಂಡಿಸಿದರು. ಅಲ್ಲದೇ ಭಾರತದ ರಾಷ್ಟ್ರಗೀತೆ ‘ವಂದೇ ಮಾತರಮ್’ಅನ್ನು ಹಾಡುವ ಮೂಲಕ ಭಾರತಕ್ಕೆ ಬೆಂಬಲಿಸಿದ ಘಟನೆ ನಡೆದಿದೆ. ಈ ಸಮಯದಲ್ಲಿ ಉಪಸ್ಥಿತರು ಚೀನಾದ ರಾಷ್ಟ್ರಾಧ್ಯಕ್ಷ ಶಿ ಜಿನಪಿಂಗ್‌ನ ವಿರುದ್ಧ ಫಲಕವನ್ನು ತೋರಿಸುತ್ತ ಅವರ ವಿಸ್ತಾರವಾದಿ ಮೇಲೆ ಅಂಕುಶ ಹಾಕಬೇಕು ಎಂದು ಆಗ್ರಹಿಸಿದರು.

‘ಕೊರೋನಾ ಹಬ್ಬಿಸಿದ ಬಗ್ಗೆ ಒಂದೇ ಧರ್ಮದ ಮೇಲೆ ಆರೋಪಿಸಲಾಯಿತು !’(ಅಂತೆ) – ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ

ಕೊರೋನಾವನ್ನು ಹಬ್ಬಿಸಿದ ತಬಲಿಗೀ ಜಮಾತ್‌ನ ಮೇಲೆ ಟೀಕೆಗಳಾದವು. ಇದರ ಬಗ್ಗೆ ಅವರು ಮಾತನಾಡುತ್ತಿದ್ದರು. ಕೊರೋನಾ ಮುಕ್ತಿಗಾಗಿ ಪ್ರಾರ್ಥಿಸಲು ಶಿವಕುಮಾರ ಇವರು ಇಲ್ಲಿಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಮುಫ್ತಿಯವರು ಕೊರೋನಾದಿಂದ ಮುಕ್ತಿ ಸಿಗಲು ಪ್ರಾರ್ಥನೆ ಮಾಡಿದರು.

ಇಸ್ಲಾಮಿ ದೇಶ ಸುಡಾನ್‌ನಲ್ಲಿ ಇನ್ನು ಇಸ್ಲಾಮ್ ತ್ಯಜಿಸುವುದು ಅಪರಾಧವಲ್ಲ ! – ಸುಡಾನ್ ಸರಕಾರದ ನಿರ್ಧಾರ

ಆಫ್ರಿಕಾ ಖಂಡದ ಇಸ್ಲಾಮೀ ರಾಷ್ಟ್ರವಾಗಿರುವ ಸುಡಾನ್‌ನಲ್ಲಿ ಇಸ್ಲಾಮ್ ತ್ಯಜಿಸುವುದನ್ನು ಇನ್ನು ಮುಂದೆ ಅಪರಾಧವೆಂದು ಪರಿಗಣಿಸುವುದಿಲ್ಲ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಹಿಂದೆ ಧರ್ಮವನ್ನು ತ್ಯಜಿಸುವವರಿಗೆ ಮರಣದಂಡಣೆಯ ಶಿಕ್ಷೆ ಇತ್ತು. ಜೊತೆಗೆ ಮುಸಲ್ಮಾನರೇತರ ಜನರನ್ನು ವೈಯಕ್ತಿಕವಾಗಿ ಸರಾಯಿಯನ್ನು ಕುಡಿಯಲು ಅನುಮತಿಯನ್ನು ನೀಡಿದೆ

ಅನಂತನಾಗನಲ್ಲಿ ಒಬ್ಬ ಭಯೋತ್ಪಾದಕನ ಹತ್ಯೆ

ಅನಂತನಾಗ(ಜಮ್ಮು-ಕಾಶ್ಮೀರ) – ಇಲ್ಲಿಯ ಶ್ರೀಗುಫವಾಡಾದಲ್ಲಿ ಬೆಳಗಿನ ಜಾವ ನಡೆದ ಚಕಮಕಿಯಲ್ಲಿ ಓರ್ವ ಭಯೋತ್ಪಾದಕನನ್ನು ಕೊಲ್ಲಲಾಯಿತು. ರಕ್ಷಣಾಪಡೆಗೆ ಸಿಕ್ಕಿದ ಮಾಹಿತಿಯ ಮೇರೆಗೆ ಇಲ್ಲಿ ಶೋಧ ಕಾರ್ಯಾಚರಣೆಯನ್ನು ಮಾಡುತ್ತಿರುವಾಗ ಈ ಚಕಮಕಿ ನಡೆಯಿತು.

ಬಂಗಾಲದಲ್ಲಿ ಮಾರುಕಟ್ಟೆಯಲ್ಲೇ ಭಾಜಪದ ಶಾಸಕನ ಮೃತದೇಹ ನೇತಾಡುತ್ತಿದ್ದ ಸ್ಥಿತಿಯಲ್ಲಿ ಸಿಕ್ಕಿತು !

ಭಾಜಪದ ಶಾಸಕ ದೇವೇಂದ್ರ ನಾಥ ರೇ ಇವರ ಮೃತದೇಹವು ಇಲ್ಲಿಯ ಮಾರುಕಟ್ಟೆಯ ಒಂದು ಅಂಗಡಿಯ ಮುಂದೆ ನೇತಾಡುತ್ತಿರುವ ಸ್ಥಿತಿಯಲ್ಲಿ ಸಿಕ್ಕಿರುವ ಆಘಾತಕಾರಿ ಘಟನೆ ನಡೆದಿದೆ. ರೇ ಇವರ ಮನೆಯಿಂದ ೧ ಕಿ.ಮೀ ದೂರದಲ್ಲಿ ಈ ಮೃತದೇಹ ಸಿಕ್ಕಿದೆ.