ಬಂಗಾಲದಲ್ಲಿ ಮಾರುಕಟ್ಟೆಯಲ್ಲೇ ಭಾಜಪದ ಶಾಸಕನ ಮೃತದೇಹ ನೇತಾಡುತ್ತಿದ್ದ ಸ್ಥಿತಿಯಲ್ಲಿ ಸಿಕ್ಕಿತು !

  • ಶಾಸಕನ ಹತ್ಯೆಯಾಗಿದೆ ಎಂದು ಭಾಜಪದಿಂದ ಆರೋಪ

  • ಕುಟುಂಬದವರಿಂದ ತನಿಖೆಗೆ ಆಗ್ರಹ

ದೇವೇಂದ್ರ ನಾಥ ರೇ ಇವರ ಮೃತದೇಹ

ಬಂಗಾಲದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ಈ ಹಿಂದೆಯೇ ಹಾಳಾಗಿತ್ತು. ಇಲ್ಲಿಯವರೆಗೆ ಭಾಜಪದ ಅನೇಕ ಕಾರ್ಯಕರ್ತರ ಸಂದೇಹಾಸ್ಪದರೀತಿಯಲ್ಲಿ ಹತ್ಯೆಗಳಾಗಿವೆ ಹಾಗೂ ಈಗ ಶಾಸಕನ ಮೃತದೇಹವು ಸಂದೇಹಾಸ್ಪದ ರೀತಿಯಲ್ಲಿ ಸಿಕ್ಕಿತು. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರವು ಇನ್ನೂ ಹತ್ಯೆಗಳಾಗುವ ತನಕ ಕಾಯದೇ ಬಂಗಾಲದಲ್ಲಿಯ ತೃಣಮೂಲ ಕಾಂಗ್ರೆಸ್ಸಿನ ಸರಕಾರವನ್ನು ವಜಾ ಮಾಡಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಬೇಕು !

ಉತ್ತರ ದಿನಾಜಪುರ (ಬಂಗಾಲ) – ಭಾಜಪದ ಶಾಸಕ ದೇವೇಂದ್ರ ನಾಥ ರೇ ಇವರ ಮೃತದೇಹವು ಇಲ್ಲಿಯ ಮಾರುಕಟ್ಟೆಯ ಒಂದು ಅಂಗಡಿಯ ಮುಂದೆ ನೇತಾಡುತ್ತಿರುವ ಸ್ಥಿತಿಯಲ್ಲಿ ಸಿಕ್ಕಿರುವ ಆಘಾತಕಾರಿ ಘಟನೆ ನಡೆದಿದೆ. ರೇ ಇವರ ಮನೆಯಿಂದ ೧ ಕಿ.ಮೀ ದೂರದಲ್ಲಿ ಈ ಮೃತದೇಹ ಸಿಕ್ಕಿದೆ. ರೇ ಇವರ ಕುಟುಂಬದ ಓರ್ವ ಸದಸ್ಯನ ಹೇಳಿಕೆಗನುಸಾರ ಕೆಲವು ಜನರು ಮಧ್ಯರಾತ್ರಿ ಸರಿಸುಮಾರು ೧ ಗಂಟೆಗೆ ರೇ ಇವರ ಮನೆಗೆ ಬಂದಿದ್ದರು ಹಾಗೂ ರೇ ಇವರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. ರೇ ಇವರ ಕುಟುಂಬದವರು ಇದರ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದರೆ, ಭಾಜಪ ಇದು ಹತ್ಯೆಯಾಗಿದೆ ಎಂದು ಆರೋಪಿಸಿದೆ. ಸದ್ಯ ಪೊಲೀಸರು ಈ ಘಟನೆಯ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ.

೧. ಭಾಜಪದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಇವರು ಟ್ವೀಟ್ ಮಾಡಿ, ‘ಅತ್ಯಂತ ಕ್ರೂರವಾಗಿ ದೇವೇಂದ್ರ ನಾಥ ರೇ ಯವರ ಹತ್ಯೆ ಮಾಡಿದ್ದು ಆಘಾತಕಾರಿಯಾಗಿದೆ. ಇದರಿಂದ ಮಮತಾ ಬ್ಯಾನರ್ಜಿಯವರ ಬಂಗಾಲದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಸ್ಪಷ್ಟವಾಗುತ್ತದೆ’ ಎಂದು ಹೇಳಿದ್ದಾರೆ. (ಇಲ್ಲಿಯವರೆಗೆ ಭಾಜಪವು ತನ್ನ ಅನೇಕ ಕಾರ್ಯಕರ್ತ ಹಾಗೂ ಜನಪ್ರತಿನಿದಿಗಳ ರಕ್ಷಣೆಗಾಗಿ ಕೃತಿ ಮಾಡುವುದು ಅಪೇಕ್ಷಿತವಿತ್ತು, ಎಂದು ಜನರಿಗೆ ಅನಿಸುತ್ತಿದೆ ! – ಸಂಪಾದಕರು)

೨. ೨೦೧೬ ರಲ್ಲಿ ದೇವೇಂದ್ರ ನಾಥ ರೇ ಇವರು ಪರಿಶಿಷ್ಟಜಾತಿಗಾಗಿ ಕಾಯ್ದಿರಿಸಿದ ಸ್ಥಾನದಿಂದ ಮಾಕಪದ ಟಿಕೇಟಿನಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಗ ಅವರಿಗೆ ಕಾಂಗ್ರೆಸ್ ಬೆಂಬಲಿಸಿತ್ತು. ಕಳೆದ ವರ್ಷ ಲೋಕಸಭೆಯ ಚುನಾವಣೆಯಲ್ಲಿ ಅವರು ಭಾಜಪದಲ್ಲಿ ಸೇರ್ಪಡೆಗೊಂಡಿದ್ದರು.