‘ಕೊರೋನಾ ಹಬ್ಬಿಸಿದ ಬಗ್ಗೆ ಒಂದೇ ಧರ್ಮದ ಮೇಲೆ ಆರೋಪಿಸಲಾಯಿತು !’(ಅಂತೆ) – ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ

ಕೇಂದ್ರ ಸರಕಾರವು ನೀಡಿದ ಅಂಕಿಅಂಶಗಳಿಗನುಸಾರ ಮಾರ್ಚ್-ಎಪ್ರಿಲ್‌ನಲ್ಲಿ ಪತ್ತೆಯಾಗಿರುವ ಕೊರೋನಾ ಪೀಡಿತರ ಪೈಕಿ ಶೇ. ೩೦ ರಷ್ಟು ತಬಲಿಗೀ ಜಮಾತ್‌ನಿಂದಾಗಿ ತೊಂದರೆಗೀಡಾಗಿದ್ದವರು ಇದ್ದರು. ಇದು ವಸ್ತುಸ್ಥಿತಿ ಆಗಿತ್ತು, ಎಂದು ಶಿವಕುಮಾರ ಇವರು ಏಕೆ ಹೇಳುತ್ತಿಲ್ಲ ?

ಬೆಂಗಳೂರು – ಕೊರೋನಾ ಸೋಂಕು ಹಬ್ಬಿಸಿದ ಬಗ್ಗೆ ರಾಜಕೀಯ ಉದ್ದೇಶದಿಂದ ಒಂದು ಧರ್ಮದ ಮೇಲೆ ಆರೋಪಿಸಲಾಗಿತ್ತು. ಅದಕ್ಕೆ ನಾವು ಬೆಲೆ ಕೊಡುವುದಿಲ್ಲ. ಒಬ್ಬ ಮಾಡಿದ ತಪ್ಪಿಗಾಗಿ ಸಂಪೂರ್ಣ ಸಮಾಜಕ್ಕೆ ದೂಷಿಸಬಾರದು. ತಪ್ಪು ಮಾಡಿದವರ ವಿರುದ್ದ ಕಾನೂನು ಅದರ ಕಾರ್ಯ ಮಾಡುತ್ತದೆ, ಎಂದು ಕರ್ನಾಟಕದ ಕಾಂಗ್ರೇಸ್‌ನ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಇವರು ಇಲ್ಲಿಯ ಅರೆಬಿಕ ಮಹಾವಿದ್ಯಾಲಯದಲ್ಲಿ ಮುಖ್ಯ ಧರ್ಮಗುರು ಮುಫ್ತಿ ಸಗೀರ ಅಹಮದ ಇವರನ್ನು ಭೇಟಿಯಾಗಿ ಅವರ ಆಶಿರ್ವಾದವನ್ನು ತೆಗೆದುಕೊಂಡರು. (ಹೀಗಿದ್ದರೆ, ಅಮಾಯಕ ಹಿಂದೂಗಳನ್ನು ಭಯೋತ್ಪಾದಕರೆಂದು ಹೇಳಿ ಇಡೀ ಹಿಂದೂಗಳನ್ನು ‘ಕೇಸರಿ ಭಯೋತ್ಪಾದನೆ’ ಎಂದು ನಿರ್ಧರಿಸುವವರು ಕಾಂಗ್ರೆಸ್‌ನವರೇ ಆಗಿದ್ದರು, ಇದರ ಬಗ್ಗೆ ಶಿವಕುಮಾರ ಇವರು ಏಕೆ ಮಾತನಾಡುತ್ತಿಲ್ಲ ? ಅನುಕೂಲಕ್ಕೆ ಹಾಗೂ ರಾಜಕೀಯ ಲಾಭಕ್ಕಾಗಿ ತಮ್ಮ ಅಭಿಪ್ರಾಯವನ್ನು ನೀಡುವ ಕಾಂಗ್ರೆಸ್‌ಗೆ ಜನರು ಗುರುತಿಸಿದ್ದರಿಂದ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅಧಿಕಾರದಿಂದ ಒದ್ದೋಡಿಸಲಾಯಿತು, ಎಂಬುದು ಶಿವಕುಮಾರ ಇವರು ಗಮನದಲ್ಲಿಟ್ಟುಕೊಳ್ಳಬೇಕು ! – ಸಂಪಾದಕರು) ಕೊರೋನಾವನ್ನು ಹಬ್ಬಿಸಿದ ತಬಲಿಗೀ ಜಮಾತ್‌ನ ಮೇಲೆ ಟೀಕೆಗಳಾದವು. ಇದರ ಬಗ್ಗೆ ಅವರು ಮಾತನಾಡುತ್ತಿದ್ದರು. ಕೊರೋನಾ ಮುಕ್ತಿಗಾಗಿ ಪ್ರಾರ್ಥಿಸಲು ಶಿವಕುಮಾರ ಇವರು ಇಲ್ಲಿಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಮುಫ್ತಿಯವರು ಕೊರೋನಾದಿಂದ ಮುಕ್ತಿ ಸಿಗಲು ಪ್ರಾರ್ಥನೆ ಮಾಡಿದರು. (ಕೊರೋನಾದಿಂದ ಮುಕ್ತಿ ಸಿಗಲು ಶಿವಕುಮಾರ ಇವರು ಎಷ್ಟು ಹಿಂದೂ ಸಂತರ ದರ್ಶನ ಪಡೆದು ಪ್ರಾರ್ಥನೆಯನ್ನು ಮಾಡಿದ್ದಾರೆ, ಎಂಬುದು ಕೂಡ ಅವರು ಹೇಳಬೇಕು ! – ಸಂಪಾದಕರು)