ಭಾರತದಲ್ಲಿರುವ ಅಯೋಧ್ಯೆ ಸುಳ್ಳಾಗಿದ್ದು, ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ(ಯಂತೆ) !

  • ಚೀನಾದ ಕೈಗೊಂಬೆಯಾಗಿರುವ ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿಯವರ ‘ಚೀನಾಶೋಧ !’

  • ಪ್ರಭು ಶ್ರೀರಾಮ ನೇಪಾಳಿಯಾಗಿದ್ದಾರೆಂಬ ಹಾಸ್ಯಾಸ್ಪದ ಹೇಳಿಕೆ !

ಚೀನಾದ ಹಿಂದೆ ಬಿದ್ದು ಪ್ರತಿದಿನ ಭಾರತಕ್ಕೆ ಕೆಣಕುತ್ತಿರುವ ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಪ್ರಧಾನಿ ಕೆ.ಪಿ. ಶರ್ಮಾ ಓಲಿಯವರನ್ನು ಅಧಿಕಾರದಿಂದ ಕೆಳಗಿಳಿಸಲು ಹಾಗೂ ಅಲ್ಲಿ ಭಾರತವನ್ನು ಬೆಂಬಲಿಸುವ ರಾಜಕಾರಣಿಗಳನ್ನು ಕೂರಿಸಲು ಭಾರತವು ನೇತೃತ್ವವನ್ನು ವಹಿಸಬೇಕು !

ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ

ಕಾಠಮಾಂಡು (ನೇಪಾಳ) – ಭಾರತದಲ್ಲಿರುವ ಅಯೋಧ್ಯೆ ನಕಲಿ ಇದೆ. ಪ್ರಭು ಶ್ರೀರಾಮಚಂದ್ರ ಇವರು ಭಾರತೀಯರಲ್ಲ, ನೇಪಾಳಿಯಾಗಿದ್ದರು. ಭಾರತವು ಸಾಂಸ್ಕೃತಿಕ ದಾಳಿಯನ್ನು ಮಾಡಿ ನಕಲಿ ಅಯೋಧ್ಯೆಯನ್ನು ನಿರ್ಮಿಸಿದ್ದಾರೆ. ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ, ಎಂಬ ‘ಚೀನಾಶೋಧ’ವನ್ನು ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿಯವರು ಕಂಡುಹಿಡಿದ್ದಾರೆ. ಅವರು ಜುಲೈ ೧೩ ರಂದು ಅಲ್ಲಿಯ ಕವಿ ಭಾನುಭಕ್ತ ಆಚಾರ್ಯ ಇವರ ಜಯಂತಿಯ ನಿಮಿತ್ತ ತಮ್ಮ ನಿವಾಸದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕೆಲವು ದಿನಗಳ ಹಿಂದೆ ‘ಭಾರತವು ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಸಂಚು ರೂಪಿಸುತ್ತಿದೆ’, ಎಂದು ಅವರು ಆರೋಪಿಸಿದ್ದರು. ಅದೇರೀತಿ ‘ಭಾರತದಿಂದ ಬರುವಂತಹ ಕೊರೋನಾದ ರೋಗಾವಿಷಾಣುವಿನ ಸೋಂಕು ಇದು ಚೀನಾ ಹಾಗೂ ಇಟಲಿಯ ಸೋಂಕಿಗಿಂತ ಹೆಚ್ಚು ಅಪಾಯಕಾರಿ ಇದೆ’, ಎಂದೂ ಕೂಡ ಭಾರತದ್ವೇಷದ ಹೇಳಿಕೆಯನ್ನು ನೀಡಿದ್ದರು.

ಓಲಿ ತಮ್ಮ ಮಾತನ್ನು ಮುಂದುವರೆಸುತ್ತ, ‘ಭಾರತವು ಐತಿಹಾಸಿಕ ಸತ್ಯವನ್ನು ತಿರುಚಿದೆ. ರಾಜಕುಮಾರ ರಾಮನಿಗೆ ಸೀತೆಯನ್ನು ನಾವು ಕೊಟ್ಟಿದ್ದೆವು ಎಂಬುದು ನಾವು ಒಪ್ಪಿಕೊಳ್ಳುತ್ತೇವೆ; ಆದರೆ ನಾವು ಭಾರತದಲ್ಲಿರುವ ಅಯೋಧ್ಯೆಯ ರಾಜಕುಮಾರನಿಗೆ ಸೀತೆಯನ್ನು ನೀಡಿರಲಿಲ್ಲ, ನೇಪಾಳದ ರಾಜಕುಮಾರನಿಗೆ ಸೀತೆಯನ್ನು ನೀಡಿದ್ದೆವು. ಅಯೋಧ್ಯೆ ಗ್ರಾಮವು ನೇಪಾಳದ ಬಿರಗಂಜನಿಂದ ಪಶ್ಚಿಮದಿಕ್ಕಿನಲ್ಲಿದೆ. ಒಂದು ವೇಳೆ ಭಾರತದ ಅಯೋಧ್ಯೆ ನಿಜವಾಗಿದ್ದರೆ, ಅಲ್ಲಿಯ ರಾಜಕುಮಾರ ವಿವಾಹಕ್ಕಾಗಿ ಜನಕಪುರಕ್ಕೆ ಹೇಗೆ ಬಂದರು ? ಜ್ಞಾನ ಮತ್ತು ವಿಜ್ಞಾನದ ಉತ್ಪತ್ತಿ ಹಾಗೂ ಅಭಿವೃದ್ಧಿ ನೇಪಾಳದಲ್ಲೇ ಆಗಿದೆ’ ಎಂದು ಹೇಳಿದರು.

ಕೆ.ಪಿ. ಓಲಿಯವರ ಕಿವಿಹಿಂಡಿದ ವಿಪಕ್ಷದ ನಾಯಕರು

ಪ್ರಧಾನಿ ಕೆ.ಪಿ. ಶರ್ಮಾ ಓಲಿಯವರು ಅಯೋಧ್ಯೆಯ ಬಗ್ಗೆ ನೀಡಿದ ಹೇಳಿಕೆಯಿಂದ ಅವರಿಗೆ ಅವರ ದೇಶದಲ್ಲೇ ವಿಪಕ್ಷದಿಂದ ವಿರೋಧವಾಗುತ್ತಿದೆ. ‘ಸದ್ಯ ಭಾರತ ಹಾಗೂ ನೇಪಾಳದ ಮಧ್ಯೆ ಬಿಗುವಿನ ವಾತಾವರಣ ಇದೆ. ಇಂತಹ ಪರಿಸ್ಥಿತಿಯಲ್ಲಿ ಓಲಿಯವರು ಈ ರೀತಿಯ ಹೇಳಿಕೆಯನ್ನು ನೀಡಬಾರದು’, ಎಂದು ಹೇಳುತ್ತಾ ಅನೇಕ ನಾಯಕರು ಓಲಿಯವರ ಕಿವಿ ಹಿಂಡಿದ್ದಾರೆ. ‘ಪ್ರಧಾನಿ ಓಲಿಯವರು ಭಾರತ ಹಾಗೂ ನೇಪಾಳದ ಉದ್ವಿಗ್ನತೆಯನ್ನು ಶಮನ ಮಾಡುವ ಬದಲು ಹೆಚ್ಚು ಮಾಡಲು ಪ್ರಯತ್ನಿಸುತ್ತಿದ್ದಾರೆ’, ಎಂದು ರಾಷ್ಟ್ರೀಯ ಪ್ರಜಾತಾಂತ್ರಿ ಪಕ್ಷದ ಸಹ ಅಧ್ಯಕ್ಷರಾದ ಕಮಲ ಥಾಪಾ ಇವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.