ಮೂಲಭೂತ ನಿಯಮಗಳನ್ನು ಪಾಲಿಸದಿದ್ದರೆ ಕೊರೋನಾವು ಗಂಭೀರ ಮತ್ತು ಅತೀಗಂಭೀರ ರೂಪ ತಾಳುವುದು ! – ವಿಶ್ವ ಆರೋಗ್ಯ ಸಂಸ್ಥೆ

ಜಿನೆವಾ – ಕೊರೋನಾ ಸೋಂಕು ಇಂದಿಗೂ ಜನರ ಮೊದಲನೇ ಸ್ಥಾನದ ಶತ್ರು ಆಗಿದೆ. ದೇಶಗಳು ಇನ್ನೂ ಆರೋಗ್ಯಕ್ಕೆ ಸಂಬಂಧಪಟ್ಟ ಮೂಲಭೂತ ನಿಯಮಗಳನ್ನು ಪಾಲಿಸದಿದ್ದರೆ ಕೊರೋನಾ ಮಹಾಮಾರಿ ಗಂಭೀರ ಮತ್ತು ಅತೀ ಗಂಭೀರ ರೂಪವನ್ನು ತಾಳುವುದು, ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಎಡಹಾನೊಮ್ ಗೆಬ್ರೆಯೆಸಸ್ ಇವರು ಎಚ್ಚರಿಕೆ ನೀಡಿದ್ದಾರೆ.

ಶಾಲೆಗಳನ್ನು ಆರಂಭಿಸಲು ಆತುರ ಮಾಡದಂತೆ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆ

ಶಾಲೆಗಳನ್ನು ಆರಂಭಿಸಲು ಆತುರ ಮಾಡಬಾರದು, ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಪತ್ಕಾಲಿನ ವಿಭಾಗದ ಮುಖ್ಯಸ್ಥ ಮೈಕ್ ರಾಯನ್ ಇವರು ಎಲ್ಲ ದೇಶಗಳಿಗೆ ಸಲಹೆ ನೀಡಿದ್ದಾರೆ. ಒಂದುಸಲ ಕೊರೋನಾ ಮಹಾಮಾರಿಯ ಪ್ರಭಾವ ಕಡಿಮೆಯಾದಾಗ, ಸುರಕ್ಷಿತವಾಗಿ ಶಾಲೆಗಳನ್ನು ಆರಂಭಿಸಬೇಕು. ಅಲ್ಲಿಯವರೆಗೆ ಶಾಲೆ ಆರಂಭಿಸುವ ಬಗ್ಗೆ ರಾಜಕೀಯ ಮಾಡದಿರಿ, ಎಂದೂ ಅಪೇಕ್ಷೆಯನ್ನೂ ವ್ಯಕ್ತಪಡಿಸಿದರು.

ಕೆಲವು ದೇಶಗಳು ಕೊರೋನಾದಿಂದಾಗಿ ಮುಚ್ಚಿದ್ದ ಶಾಲೆ ಹಾಗೂ ಮಹಾವಿದ್ಯಾಲಯಗಳನ್ನು ಪುನಃ ಆರಂಭಿಸಲು ಪ್ರಯತ್ನಿಸುತ್ತಿವೆ. ಈ ಹಿನ್ನಲೆಯಲ್ಲಿ ರಾಯನ್ ಇವರು ಈ ಸಲಹೆಯನ್ನು ನೀಡಿದ್ದಾರೆ.