ದೇಶದಾದ್ಯಂತ ಇಲ್ಲಿಯವರೆಗೆ ೯ ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಕೊರೋನಾದ ಸೋಂಕು

ನವ ದೆಹಲಿ – ಇಂದು ದೇಶದಾದ್ಯಂತ ಕೊರೋನಾ ಪೀಡಿತರ ಸಂಖ್ಯೆ ೯ ಲಕ್ಷ ೬ ಸಾವಿರದ ೭೫೨ ತನಕ ತಲುಪಿದೆ. ಈ ಪೈಕಿ ಚಿಕಿತ್ಸೆ ನಡೆಯುತ್ತಿರುವ ರೋಗಿಗಳ ಸಂಖ್ಯೆ ೩ ಲಕ್ಷ ೧೧ ಸಾವಿರದ ೫೬೫ ಇದ್ದು ಇಲ್ಲಿಯವರೆಗೆ ೫ ಲಕ್ಷ ೭೧ ಸಾವಿರದ ೪೬೦ ರೋಗಿಗಳು ಗುಣಮುಖರಾಗಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ೨೮ ಸಾವಿರದ ೪೯೮ ಹೊಸ ರೋಗಿಗಳು ಪತ್ತೆಯಾಗಿದ್ದು ೫೫೩ ಜನರು ಕೊರೋನಾದಿಂದಾಗಿ ಮೃತಪಟ್ಟಿದ್ದಾರೆ. ಆರೋಗ್ಯ ಸಚಿವಾಲಯವು ಈ ಮಾಹಿತಿ ನೀಡಿದೆ.