ಭಾರತದಲ್ಲಿ ಪತ್ತೆ ಆಯಿತು ಭಗವಾನ ಶಂಕರನ ೨೮ ಸಾವಿರದ ೪೫೦ ವರ್ಷಗಳಷ್ಟು ಪ್ರಾಚೀನ ಮೂರ್ತಿ ಅಂದರೆ ದ್ವಾಪರಯುಗದ್ದಾಗಿದೆ !

ಇದರಿಂದ ‘ಹಿಂದೂ ಧರ್ಮ ಎಷ್ಟು ಪ್ರಾಚೀನವಾಗಿದೆ ಹಾಗೂ ಆಗ ಎಷ್ಟು ಪ್ರಗತಿಹೊಂದಿದ್ದ ಜ್ಞಾನವಿತ್ತು’, ಎಂಬುದು ಗಮನಕ್ಕೆ ಬರುತ್ತದೆ ! ಈಗಲಾದರೂ ಭಾರತದ ತಥಾಕಥಿತ ಪ್ರಗತಿ(ಅಧೋಗತಿ)ಪರರು ಹಿಂದೂ ಧರ್ಮದ ಮೇಲೆ ಶ್ರದ್ಧೆ ಇಡುವರೇ ? ಅಥವಾ ತಮ್ಮ ಬುದ್ಧಿವಂತಿಕೆಯಲ್ಲೇ ಇರುವರೋ ?

ನವ ದೆಹಲಿ – ಭಾರತದಲ್ಲಿ ‘ಕಲ್ಪ ವಿಗ್ರಹ’ ಈ ಹೆಸರಿನಲ್ಲಿ ಗುರುತಿಸಲ್ಪಡುವ ಭಗವಾನ ಶಂಕರನ ಧಾತುವಿನ ಮೂರ್ತಿಯು ಜಗತ್ತಿನಲ್ಲಿ ಇಲ್ಲಿಯವರೆಗೆ ಸಿಕ್ಕಿರುವ ಅನೇಕ ಮೂರ್ತಿಗಳ ಪೈಕಿ ಎಲ್ಲಕ್ಕಿಂತ ಪ್ರಾಚೀನ ಮೂರ್ತಿಯಾಗಿದೆ ಎಂದು ತಿಳಿದುಬಂದಿದೆ. ಈ ಮೂರ್ತಿ ಒಂದು ಮರದ ಪೆಟ್ಟಿಗೆಯಲ್ಲಿ ಇಡಲಾಗಿತ್ತು. ಈ ಪೆಟ್ಟಿಗೆಯ ಮೇಲೆ ಹಾಗೂ ಅದರ ಒಳಗೆ ಇದ್ದ ಸಾವಯವದ ಮೇಲೆ ಅಮೇರಿಕಾದ ಬರ್ಕಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ‘ಕಾರ್ಬನ್ ಡೆಟಿಂಗ್’ ಪ್ರಕ್ರಿಯೆ ಮಾಡಿ ಅದರ ಆಯಸ್ಸನ್ನು ಕಂಡುಹಿಡಿದಾಗ, ಈ ಮೂರ್ತಿ ೨೮ ಸಾವಿರದ ೪೫೦ ವರ್ಷಗಳಷ್ಟು ಪ್ರಾಚೀನವಾಗಿದೆ ಎಂದು ಕಂಡುಬಂದಿತು. ಅಂದರೆ ಈ ಮೂರ್ತಿ ಕಲಿಯುಗದ (ಸದ್ಯ ಕಲಿಯುಗದ ೫ ಸಾವಿರದ ೧೨೨ ನೇ ವರ್ಷ ನಡೆಯುತ್ತಿದೆ)ದ್ದಾಗಿರದೇ ಅದು ದ್ವಾಪರಯುಗದ್ದಾಗಿದೆ ಎಂದು ಗಮನಕ್ಕೆ ಬಂದಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಪ್ರಸಿದ್ಧ ಪುರಾತತ್ವ ತಜ್ಞರಾದ ಕೆ.ಕೆ. ಮಹಮ್ಮದ ಇವರು ಟ್ವೀಟ್ ಮಾಡಿ ಮಾಹಿತಿಯನ್ನು ನೀಡಿದ್ದಾರೆ. ‘೨೮ ಸಾವಿರದ ೪೫೦ ವರ್ಷಗಳ ಹಿಂದೆ ಇಜಿಪ್ತ, ಗ್ರೀಸ್, ಮೆಸೊಪೊಟೆಮಿಯಾ, ಮೊಹೆಂಜೊದರೋ-ಹಡಪ್ಪ ಸಂಸ್ಕೃತಿಯೂ ಅಸ್ತಿತ್ವದಲ್ಲಿ ಇರಲಿಲ್ಲ’, ಎಂದು ಮಹಮ್ಮದ ಇವರು ಹೇಳಿದ್ದಾರೆ.

ಕೆ.ಕೆ. ಮಹಮ್ಮದ ಇವರು ಶ್ರೀರಾಮಜನ್ಮಭೂಮಿ ಉತ್ಖನನ ಮಾಡುವ ತಂಡದಲ್ಲಿ ಸಹಭಾಗಿ ಆಗಿದ್ದರು. ‘ಈ ಭೂಮಿ ಶ್ರೀರಾಮನ ಜನ್ಮಭೂಮಿಯಾಗಿದೆ’, ಎಂದು ಸರ್ವೋಚ್ಚ ನ್ಯಾಯಾಲಯವು ನಿರ್ಧರಿಸಿದಲ್ಲಿ ಕೆ.ಕೆ. ಮಹಮ್ಮದ ಇವರು ನೀಡಿದ ವರದಿಯು ದೊಡ್ಡ ಪಾಲಾಗಿತ್ತು.