ಖಾರ್ತುಮ (ಸುಡಾನ್) – ಆಫ್ರಿಕಾ ಖಂಡದ ಇಸ್ಲಾಮೀ ರಾಷ್ಟ್ರವಾಗಿರುವ ಸುಡಾನ್‌ನಲ್ಲಿ ಇಸ್ಲಾಮ್ ತ್ಯಜಿಸುವುದನ್ನು ಇನ್ನು ಮುಂದೆ ಅಪರಾಧವೆಂದು ಪರಿಗಣಿಸುವುದಿಲ್ಲ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಹಿಂದೆ ಧರ್ಮವನ್ನು ತ್ಯಜಿಸುವವರಿಗೆ ಮರಣದಂಡಣೆಯ ಶಿಕ್ಷೆ ಇತ್ತು. ಜೊತೆಗೆ ಮುಸಲ್ಮಾನರೇತರ ಜನರನ್ನು ವೈಯಕ್ತಿಕವಾಗಿ ಸರಾಯಿಯನ್ನು ಕುಡಿಯಲು ಅನುಮತಿಯನ್ನು ನೀಡಿದೆ; ಆದರೆ ಮುಸಲ್ಮಾನರಿಗೆ ಇದರ ಮೇಲೆ ನಿರ್ಬಂಧ ಮುಂದುವರೆದಿದೆ. ಹುಡುಗಿಯರ ಖತನಾ ಮಾಡುವುದನ್ನು ನಿಷೇಧಿಸಲಾಗಿದೆ. ಇಸ್ಲಾಮ್‌ನಲ್ಲಿ ಹುಡುಗರ ಸುಂತಾ ಮಾಡುವುದರ ಜೊತೆಗೆ ಹುಡುಗಿಯರ ಖತನಾ ಮಾಡುವ ಪರಂಪರೆ ಇದೆ. ಸುಡಾನ್‌ನಲ್ಲಿ ಖತನಾ ಮಾಡುವ ಸಂಖ್ಯೆ ಹೆಚ್ಚಿದೆ.
ಸುಡಾನನ ನ್ಯಾಯಮಂತ್ರಿ ನಸರೆಡಿನ ಅಬ್ದುಲಬಾರಿ ಇವರು ಹೇಳಿರುವ ಪ್ರಕಾರ, ‘ಮಾನವಹಕ್ಕುಗಳ ಉಲ್ಲಂಘನೆ ಮಾಡುವಂತಹ ಈ ರೀತಿಯ ಕಾನೂನುಗಳನ್ನು ರದ್ದು ಪಡಿಸಲು ಸರಕಾರದ ಗಮನಹರಿಸುತ್ತಿದೆ. ಆದ್ದರಿಂದಲೇ ಖತನಾದ ಮೇಲೆ ನಿಷೇಧ ಹೇರಲಾಗಿದೆ’ ಎಂದು ಹೇಳಿದ್ದಾರೆ.