ಲಂಡನ್‌ನಲ್ಲಿ ಪಾಕಿಸ್ತಾನಿ ನಾಗರಿಕರಿಂದ ವಿಸ್ತಾರವಾದಿ ಚೀನಾಗೆ ಖಂಡನೆ : ಭಾರತವನ್ನು ಬೆಂಬಲಿಸಿ ‘ವಂದೇ ಮಾತರಮ್’ ಗಾಯನ

ಲಂಡನ್‌ನಲ್ಲಿರುವ ಚೀನಾದ ರಾಯಭಾರಿ ಕಛೇರಿಯ ಹೊರಗೆ ನಡೆದ ಘಟನೆ

ಲಂಡನ್ – ಇಲ್ಲಿ ಪಾಕಿಸ್ತಾನಿ ನಾಗರಿಕರು ಚೀನಾದ ರಾಯಭಾರಿ ಕಛೇರಿಯ ಮುಂದೆ ಪ್ರತಿಭಟನೆ ಮಾಡುತ್ತ ವಿಸ್ತಾರವಾದಿ ಚೀನಾವನ್ನು ಖಂಡಿಸಿದರು. ಅಲ್ಲದೇ ಭಾರತದ ರಾಷ್ಟ್ರಗೀತೆ ‘ವಂದೇ ಮಾತರಮ್’ಅನ್ನು ಹಾಡುವ ಮೂಲಕ ಭಾರತಕ್ಕೆ ಬೆಂಬಲಿಸಿದ ಘಟನೆ ನಡೆದಿದೆ. ಈ ಸಮಯದಲ್ಲಿ ಉಪಸ್ಥಿತರು ಚೀನಾದ ರಾಷ್ಟ್ರಾಧ್ಯಕ್ಷ ಶಿ ಜಿನಪಿಂಗ್‌ನ ವಿರುದ್ಧ ಫಲಕವನ್ನು ತೋರಿಸುತ್ತ ಅವರ ವಿಸ್ತಾರವಾದಿ ಮೇಲೆ ಅಂಕುಶ ಹಾಕಬೇಕು ಎಂದು ಆಗ್ರಹಿಸಿದರು.

ಚೀನಾದ ವಿಸ್ತಾರವಾದಿಯ ನಿಲುವಿನ ವಿರುದ್ಧ ಕೆಲವು ಸಂಘಟನೆಗಳು ಲಂಡನಿನ ಚೀನಾದ ರಾಯಭಾರಿ ಕಛೇರಿಯ ಮುಂದೆ ಪ್ರತಿಭಟನೆಯನ್ನು ಮಾಡಿದವು. ಇದರಲ್ಲಿ ಪಾಕಿಸ್ತಾನ ಮಾನವಹಕ್ಕುಗಳ ಆಯೋಗದ ಕಾರ್ಯಕರ್ತ ಆರಿಫ್ ಆಜಕಿಯಾ, ಪಾಕ್ ಆಕ್ರಮಿತ ಕಾಶ್ಮೀರದ ಪೀಡಿತ ಜನರಿಗಾಗಿ ಧ್ವನಿ ಎತ್ತುವ ನಾಯಕ ಅಯುಬ ಮಿರ್ಝಾ, ಅದೇರೀತಿ ಕರಾಚಿಯ ಕೆಲವು ನಾಗರಿಕರು ಉಪಸ್ಥಿತರಿದ್ದರು. ‘ನಾನು ನನ್ನ ಜೀವನದಲ್ಲಿ ಇದೇ ಮೊದಲನೇ ಬಾರಿ ‘ವಂದೇ ಮಾತರಮ್’ ಹಾಡಿದ್ದೇನೆ’, ಎಂದು ಆರಿಫ ಆಜಕಿಯಾ ಇವರು ಪ್ರತಿಕ್ರಿಯೆ ನೀಡಿದರು. ಈ ಸಮಯದಲ್ಲಿ ‘ಚೀನಾವನ್ನು ಬಹಿಷ್ಕರಿಸಿ’, ‘ಚೀನಾ ಮುರ್ದಾಬಾದ’ನಂತಹ ಘೋಷಣೆಯನ್ನು ಕೂಗಿದರು. ಮಿರ್ಝಾ ಇವರು ಚೀನಾದಿಂದ ಪಾಕಿಸ್ತಾನದಲ್ಲಿ ಕಟ್ಟಲಾಗುತ್ತಿರುವ ‘ಚೀನಾ ಪಾಕಿಸ್ತಾನ ಆರ್ಥಿಕ ಹೆದ್ದಾರಿ’ಯನ್ನು ಆಕ್ಷೇಪಿಸುತ್ತ ಈ ಹೆದ್ದಾರಿಗೆ ಗಿಲಗಿಟ ಹಾಗೂ ಬಾಲ್ಟಿಸ್ತಾನದಲ್ಲಿಯೂ ತೀವ್ರ ವಿರೋಧವಿದೆ ಎಂದು ಹೇಳಿದ್ದಾರೆ. ಇವೆಲ್ಲವು ಪಾಕಿಸ್ತಾನ ಸರಕಾರದ ಒಪ್ಪಿಗೆಯಿಂದ ಆಗುತ್ತಿದೆ ಎಂದೂ ಅವರು ಹೇಳಿದರು.

 

ಸೌಜನ್ಯ : ಎ ಎನ್ ಐ

ಜುಲೈ ೧೧ ರಂದು ಇಲ್ಲಿಯ ಚೀನಾದ ರಾಯಭಾರಿ ಕಛೇರಿಯ ಕಟ್ಟಡದ ಮೇಲೆ ‘ಟಿಬೆಟ್ ಮುಕ್ತಗೊಳಿಸಿ’, ‘ಹಾಂಗ್‌ಕಾಂಗ್ ಮುಕ್ತಗೊಳಿಸಿ’, ‘ಉಯಿಗರ ಮುಸಲ್ಮಾನರನ್ನು ಮುಕ್ತಮಾಡಿ’, ಎಂದು ಬರೆದಿದ್ದ ದೊಡ್ಡ ಫಲಕಗಳನ್ನು ಪ್ರದರ್ಶಿಸಿದ್ದರು. ಚೀನಾ ಸರಕಾರ ತನ್ನ ದೇಶದಲ್ಲಿಯ ಉಯಿಗರ ಮುಸಲ್ಮಾನರ ಮೇಲೆ ದೌರ್ಜನ್ಯ ಮಾಡುತ್ತಿದ್ದು ಅದರ ವಿರುದ್ಧ ಅಮೇರಿಕಾವು ಚೀನಾದ ಮೇಲೆ ಕೆಲವು ನಿರ್ಬಂಧವನ್ನೂ ಹೇರಿದೆ.