ವೇದಮಂತ್ರೋಚ್ಚಾರದ ಮೂಲಕ ಪ್ರಧಾನಿ ಮೋದಿಯವರ ಹಸ್ತದಿಂದ ರಾಮಜನ್ಮಭೂಮಿಯಲ್ಲಿ ಐತಿಹಾಸಿಕ ರಾಮಮಂದಿರ ಶಿಲಾನ್ಯಾಸ ಸಮಾರಂಭ

ಕೋಟಿಗಟ್ಟಲೆ ಹಿಂದೂಗಳ ಕನಸಾಗಿದ್ದ ಅವಧಪುರಿ(ಅಯೋಧ್ಯೆ)ಯಲ್ಲಿನ ರಾಮಮಂದಿರದ ಭೂಮಿಪೂಜೆಯ ಸಮಾರಂಭವು ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಇದನ್ನು ೫ ಶತಕಗಳ ಹಿಂದೂಗಳ ಸುಧೀರ್ಘ ಸಂರ್ಘಷದ ಫಲ ಎಂದು ಹೇಳಬೇಕಾಗುವುದು.

ರಾಮ ಮಂದಿರದ ಭೂಮಿಪೂಜೆಯ ಮುಹೂರ್ತವನ್ನು ತೆಗೆದ ಬೆಳಗಾವಿಯ ಅರ್ಚಕನಿಗೆ ಬೆದರಿಕೆ

ಆಗಸ್ಟ್ ೫ ರಂದು ರಾಮ ಮಂದಿರದ ಭೂಮಿ ಪೂಜೆಯ ಮುಹೂರ್ತವನ್ನು ತೆಗೆದಿದ್ದ ಅರ್ಚಕನಿಗೆ ಬೆದರಿಕೆಯೊಡ್ಡಲಾಗಿದೆ, ಎಂಬ ವಾರ್ತೆಯು ಪ್ರಸಾರವಾಗಿದೆ. ಮುಹೂರ್ತ ತೆಗೆದಾಗಿನಿಂದ ಈ ಮುಹೂರ್ತಕ್ಕೆ ಕೆಲವು ಜನರು ವಿರೋಧಿಸಿದ್ದಾರೆ. ದ್ವಾರಕಾ ಹಾಗೂ ಜ್ಯೋತಿಷ ಪೀಠಗಳ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರೂ ಇದನ್ನು ವಿರೋಧಿಸಿದ್ದಾರೆ.

ಪ್ರಧಾನಿ ಮೋದಿ ೩ ಗಂಟೆಗಳ ಕಾಲ ಅಯೋಧ್ಯೆಯಲ್ಲಿರುವರು

ಆಗಸ್ಟ್ ೫ ರಂದು ಪ್ರಧಾನಿ ನರೇಂದ್ರ ಮೋದಿಯವರ ಹಸ್ತಗಳಿಂದ ರಾಮ ಮಂದಿರದ ಭೂಮಿ ಪೂಜೆಯು ನೆರವೇರಲಿದೆ. ಇದಕ್ಕಾಗಿ ಬಿಗಿ ಭದ್ರತೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ಸಾಧಾರಣ ಮೂರು ಗಂಟೆಗಳ ಕಾಲ ಇರಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರೋನಾ ಸೋಂಕು

ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಅವರು ಸ್ವತಃ ಈ ಮಾಹಿತಿಯನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ. ‘ನನ್ನ ಕರೋನಾ ಪರೀಕ್ಷೆಯು ಸಕಾರಾತ್ಮಕವಾಗಿದೆ ಆದುದರಿಂದ ವೈದ್ಯರ ಸಲಹೆಯಂತೆ ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿರುವ ಜನರಲ್ಲಿ ಕರೋನಾದ ಯಾವುದೇ ಲಕ್ಷಣಗಳು ಕಂಡುಬಂದರೆ ಅವರು ತಮ್ಮನ್ನು ಪ್ರತ್ಯೇಕೀಕರಣದಲ್ಲಿ ಇರಬೇಕು’,

ಸಂಸ್ಕೃತ ದಿನದ ನಿಮಿತ್ತ ಪ್ರಧಾನ ಮಂತ್ರಿಯವರಿಂದ ಸಂಸ್ಕೃತ ಭಾಷೆಯಲ್ಲಿ ಶುಭಾಶಯಗಳು !

ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ ೩ ರಂದು ನಡೆದ ಸಂಸ್ಕೃತ ದಿನಾಚರಣೆಯ ನಿಮಿತ್ತ ಸಂಸ್ಕೃತ ಭಾಶೆಯಲ್ಲಿ ಶುಭಾಶಯಗಳನ್ನು ನೀಡಿದರು. ಅವರ ಈ ಸಂಸ್ಕೃತ ಭಾಷೆಯಲ್ಲಿನ ಶುಭಾಶಯ ಎಲ್ಲೆಡೆ ಚರ್ಚೆಯ ವಿಷಯವಾಗಿತ್ತು.

ರಾಮ ಮಂದಿರದ ಭೂಮಿಪೂಜೆಯ ಸಮಾರಂಭವನ್ನು ಉತ್ಸಾಹ ಮತ್ತು ಆನಂದದಿಂದ ಆದರೆ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿ ಆಚರಿಸಿ ! – ಸನಾತನ ಸಂಸ್ಥೆ

ರಾಮಜನ್ಮಭೂಮಿಯು ೫೦೦ ವರ್ಷಗಳಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ಕಾಯುತ್ತಿದೆ. ದೈವೀ ಆಯೋಜನೆಯಂತೆ ಆ ಪರಮಾನಂದದ ಕ್ಷಣವು ಸಮೀಪಿಸಿದೆ. ನಮಗೆ ಈ ಭವ್ಯ ಮತ್ತು ಈಶ್ವರಿ ಕಾರ್ಯದಲ್ಲಿ ಪಾಲ್ಗೊಳ್ಳುವ ಸುವರ್ಣಾವಕಾಶ ಸಿಗುತ್ತಿದೆ, ಅದಕ್ಕಾಗಿ ಈ ಐತಿಹಾಸಿಕ ಕ್ಷಣವನ್ನು ಉತ್ಸಾಹದಿಂದ ಮತ್ತು ಆನಂದದಿಂದ ಆದರೆ ಕರೋನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಆಚರಿಸಿರಿ.

ಸದ್ಯದ ಸ್ಥಿತಿಯಲ್ಲಿ ‘ಕೊರೋನಾ ವಿಷಾಣು’ವಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹದ ಅಗ್ನಿಸಂಸ್ಕಾರವನ್ನು ಮಾಡಲು ಸಾಧ್ಯವಾಗದಿದ್ದಾಗ ಧರ್ಮಶಾಸ್ತ್ರಕ್ಕನುಸಾರ ಮಾಡಬೇಕಾದ ‘ಪಾಲಾಶವಿಧಿ’ !

‘ದೇಶದಲ್ಲಿ ಎಲ್ಲ ಕಡೆಗೆ ‘ಕೊರೋನಾ’ ವಿಷಾಣುವಿನ ಸೋಂಕು ಹೆಚ್ಚಾಗುತ್ತಾ ಹೋಗುತ್ತಿದೆ ಮತ್ತು ಅದರಿಂದ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ. ಈ ಸೋಂಕಿನಿಂದಾಗಿ ಯಾರಾದರೂ ಮೃತಪಟ್ಟರೆ ಅವನ ಕುಟುಂಬದವರಿಗೆ ಮೃತದೇಹವನ್ನು ಕೊಡುವುದಿಲ್ಲ. ಸರಕಾರಿ ಸಿಬ್ಬಂದಿಗಳು ಅದನ್ನು ದಹನ ಮಾಡುತ್ತಾರೆ. ಆದುದರಿಂದ ಮೃತ ದೇಹದ ಎಲುಬುಗಳೂ (ಅಸ್ತಿ) ಸಿಗುವುದಿಲ್ಲ. ಇಂತಹ ಪ್ರಸಂಗದಲ್ಲಿ ‘ಅಂತ್ಯವಿಧಿಯನ್ನು ಹೇಗೆ ಮಾಡಬೇಕು ?’, ಎಂಬ ಪ್ರಶ್ನೆಯು ಸಮಾಜದಲ್ಲಿ ನಿರ್ಮಾಣವಾಗಿದೆ.

ಕೇರಳದಲ್ಲಿನ ಚಿನ್ನದ ಕಳ್ಳಸಾಗಣೆಯ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯನ ಬಂಧನ

ಇಲ್ಲಿನ ಚಿನ್ನದ ಕಳ್ಳಸಾಗಣಿಕೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಇಲ್ಲಿಯ ವರೆಗೆ ೧೦ ಜನ ಅಪರಾಧಿಗಳನ್ನು ಬಂಧಿಸಿದೆ. ಇದರಲ್ಲಿ ಒಬ್ಬ ಮೊಹಮ್ಮದ್ ಅಲಿ ಎಂಬವನೂ ಇದ್ದಾನೆ. ಅವನು ೨೦೧೦ ರಲ್ಲಿ ಕೇರಳದಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸಿದನೆಂಬ ತಥಾಕಥಿತ ವಿಷಯದಲ್ಲಿ ಪ್ರಾಧ್ಯಾಪಕ ಟಿ.ಜೆ. ಜೋಸೆಫ್ ಇವರ ಕೈಗಳನ್ನು ಕತ್ತರಿಸಿದ ಆರೋಪಿಯಾಗಿದ್ದನು.

ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ಕಾಂಬೋಡಿಯಾದಲ್ಲಿ ಹೆಣ್ಣುಮಕ್ಕಳು ಶಾರ್ಟ್ ಸ್ಕರ್ಟ್ ಮತ್ತು ಪಾರದರ್ಶಕ ಉಡುಪುಗಳನ್ನು ತೊಡುವುದು ನಿಷೇಧಕ್ಕೊಳಗಾಗಲಿದೆ

ಪೂರ್ವ ಏಷ್ಯಾದಲ್ಲಿನ ಕಾಂಬೋಡಿಯಾ ದೇಶವು ಹೆಣ್ಣುಮಕ್ಕಳು ಶಾರ್ಟ್ ಸ್ಕರ್ಟ್ ಅಥವಾ ಪಾರದರ್ಶಕ ಉಡುಪುಗಳನ್ನು ಧರಿಸುವುದನ್ನು ಮತ್ತು ಹುಡುಗರು ಶರ್ಟ್ ಹಾಕಿಕೊಳ್ಳದೇ ಇರುವುದನ್ನು ನಿಷೇಧಿಸಲಿದೆ. ಇದರ ಬಗ್ಗೆ ಕಾಂಬೋಡಿಯಾದ ಸಂಸತ್ತಿನಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಗಿದೆ.

‘೯ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ‘ಹಿಂದೂ ರಾಷ್ಟ್ರ’ ಕುರಿತಾದ ವಿಚಾರಸಂಕೀರ್ಣದಲ್ಲಿ ಗಣ್ಯರ ಭಾಷಣ !

ಭಾರತೀಯ ಸಂಸತ್ತಿನಿಂದ ಕೇವಲ ೧೦ ಕಿ.ಮೀ ದೂರದಲ್ಲಿ ಹಿಂಸಾತ್ಮಕ ಆದೋಲನ ಮಾಡುತ್ತಾ ಭಾರತದಲ್ಲಿ ‘ಇಸ್ಲಾಮಿ ಆಡಳಿತ’ ಜಾರಿಗೊಳಿಸುವಂತಹ ಪ್ರಚೋದನಕಾರಿ ಭಾಷಣಗಳಾದವು. ವಿದೇಶಿ ಹಣಬಲದಿಂದ ಅನೇಕ ಪೊಲೀಸರನ್ನು ಗುರಿಪಡಿಸಿದರೆ ಅನೇಕ ಹಿಂದೂಗಳ ಹತ್ಯೆ ಮಾಡಲಾಯಿತು, ‘ಸಿಎನ್‌ಜಿ’ಯ ಅನೇಕ ಬಸ್‌ಗಳಿಗೆ ಬೆಂಕಿ ಹಚ್ಚಿ ಸ್ಫೋಟಿಸುವ ದೊಡ್ಡ ಆಯೋಜನೆಯನ್ನು ಮಾಡಲಾಗಿತ್ತು.