ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರೋನಾ ಸೋಂಕು

ಬೆಂಗಳೂರು – ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಅವರು ಸ್ವತಃ ಈ ಮಾಹಿತಿಯನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ. ‘ನನ್ನ ಕರೋನಾ ಪರೀಕ್ಷೆಯು ಸಕಾರಾತ್ಮಕವಾಗಿದೆ ಆದುದರಿಂದ ವೈದ್ಯರ ಸಲಹೆಯಂತೆ ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿರುವ ಜನರಲ್ಲಿ ಕರೋನಾದ ಯಾವುದೇ ಲಕ್ಷಣಗಳು ಕಂಡುಬಂದರೆ ಅವರು ತಮ್ಮನ್ನು ಪ್ರತ್ಯೇಕೀಕರಣದಲ್ಲಿ ಇರಬೇಕು’, ಎಂದೂ ಅವರು ಹೇಳಿದ್ದಾರೆ.