ಸಾಧು-ಸಂತ, ಮಹಂತ, ಧರ್ಮಾಚಾರ್ಯರ ಉಪಸ್ಥಿತಿ
ಅವಧಪುರಿ(ಅಯೋಧ್ಯೆ) – ಕೋಟಿಗಟ್ಟಲೆ ಹಿಂದೂಗಳ ಕನಸಾಗಿದ್ದ ಅವಧಪುರಿ(ಅಯೋಧ್ಯೆ)ಯಲ್ಲಿನ ರಾಮಮಂದಿರದ ಭೂಮಿಪೂಜೆಯ ಸಮಾರಂಭವು ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಇದನ್ನು ೫ ಶತಕಗಳ ಹಿಂದೂಗಳ ಸುಧೀರ್ಘ ಸಂರ್ಘಷದ ಫಲ ಎಂದು ಹೇಳಬೇಕಾಗುವುದು. ರಾಮಜನ್ಮಭೂಮಿಯಲ್ಲಿ ಪ್ರಧಾನಿ ಮೋದಿಯವರ ಹಸ್ತದಿಂದ ಆಗಸ್ಟ್ ೫ ರಂದು ಮಧ್ಯಾಹ್ನ ೧೨ ಗಂಟೆ ೪೪ ನಿಮಿಷದ ಅಭಿಜಿತ ಮುಹೂರ್ತದಲ್ಲಿ ವೇದಮಂತ್ರೋಚ್ಚಾರಗಳ ಭಾವಪೂರ್ಣ ವಾತಾವರಣದಲ್ಲಿ ರಾಮಮಂದಿರದ ಭೂಮಿಪೂಜೆ ಮಾಡಲಾಯಿತು.
ಈ ಸಂದರ್ಭದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು, ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಅಧ್ಯಕ್ಷರಾದ ಮಹಂತ ನೃತ್ಯಗೋಪಾಲದಾಸ ಮಹಾರಾಜರು, ‘ಟ್ರಸ್ಟ್‌ನ ಕೋಷಾಧ್ಯಕ್ಷರಾದ ಪ.ಪೂ. ಗೋವಿಂದದೇವ ಗಿರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಚಾಲಕರಾದ ಮೋಹನ ಭಾಗವತ, ಯೋಗಋಷಿ ರಾಮದೇವಬಾಬಾ, ಆಚಾರ್ಯ ಧಮೇಂದ್ರ, ಉಮಾ ಭಾರತಿ, ಸಾಧ್ವಿ ಋತಂಬರಾ, ಉತ್ತರಪ್ರದೇಶದ ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ರಾಮಮಂದಿರ ಭೂಮಿಪೂಜೆಯ ಸಮಾರಂಭದ ಘಟನಾವಳಿ
ಮೊದಲು ಪ್ರಧಾನಿ ಮೋದಿಯವರಿಂದ ಹನುಮಾನಗಢಿಯ ದರ್ಶನ, ಪ್ರಧಾನಿ ಮೋದಿಯಿಂದ ರಾಮಲಲಾನಿಗೆ ಸಾಷ್ಟಾಂಗ ನಮಸ್ಕಾರ
ರಾಮಲಲಾ ವಿರಾಜಮಾನರಾಗುವ ಕೂರ್ಮ ಶಿಲೆಯ ಪೂಜೆ !
ಭೂಮಿ ಪೂಜೆಯನ್ನು ಮಾಡುತ್ತಿರುವಾಗ ಪ್ರಧಾನಿ ಮೋದಿಯವರು ಒಟ್ಟು ೯ ಶಿಲೆಗಳ ಪೂಜೆಯನ್ನು ಮಾಡಿದರು. ಈ ಸಮಯದಲ್ಲಿ ಕೂರ್ಮ ಶಿಲೆಯನ್ನು ಮಧ್ಯಭಾಗದಲ್ಲಿ ಇಡಲಾಗಿತ್ತು. ಇದೇ ಶಿಲೆಯ ಮೇಲೆ ರಾಮಲಲಾ ವಿರಾಜಮಾನನಾಗುವನು. ಭೂಮಿಪೂಜೆಯು ನಡೆಯುತ್ತಿರುವಾಗ ಈ ಶಿಲೆಗಳ ಮಹತ್ವವನ್ನು ಹೇಳಿದ ಅರ್ಚಕರು, ‘೧೯೮೯ ರಲ್ಲಿ ಜಗತ್ತಿನಾದ್ಯಂತದ ಭಕ್ತರು ರಾಮಮಂದಿರಕ್ಕಾಗಿ ಇಟ್ಟಿಗೆಗಳನ್ನು ಕಳುಹಿಸಿದ್ದರು. ಇಂತಹ ೨ ಲಕ್ಷ ೭೫ ಸಾವಿರ ಇಟ್ಟಿಗೆಗಳು ಅಯೋಧ್ಯೆಯಲ್ಲಿವೆ. ಅದರಲ್ಲಿನ ೧೦೦ ಇಟ್ಟಿಗೆಗಳ ಮೇಲೆ ‘ಜಯ ಶ್ರೀರಾಮ’ ಎಂದು ಬರೆಯಲಾಗಿದೆ. ಅದರಲ್ಲಿನ ೯ ಇಟ್ಟಿಗೆಗಳನ್ನು ಇಲ್ಲಿ ತರಲಾಗಿದೆ”, ಎಂದರು
ಪ್ರಧಾನಿ ಮೋದಿ ೨೮ ವರ್ಷಗಳ ನಂತರ ಅಯಧ್ಯೆಗೆ ಆಗಮನ !
ಪ್ರಧಾನಿ ನರೇಂದ್ರ ಮೋದಿ ಸುಮಾರು ೨೮ ವರ್ಷಗಳ ನಂತರ ಅಯೋಧ್ಯೆಗೆ ಬಂದಿದ್ದಾರೆ. ಈ ಹಿಂದೆ ಅವರು ರಾಮಜನ್ಮಭೂಮಿಯ ಆಂದೋಲನದ ಸಮಯದಲ್ಲಿ ಅಯೋಧ್ಯೆಗೆ ಬಂದಿದ್ದರು. ಅವರು ಶ್ರೀರಾಮಜನ್ಮಭೂಮಿಯ ದರ್ಶನವನ್ನು ಪಡೆದ ದೇಶದ ಮೊದಲನೇಯ ಪ್ರಧಾನಿಯಾಗಿದ್ದಾರೆ.