ಸಂಸ್ಕೃತ ದಿನದ ನಿಮಿತ್ತ ಪ್ರಧಾನ ಮಂತ್ರಿಯವರಿಂದ ಸಂಸ್ಕೃತ ಭಾಷೆಯಲ್ಲಿ ಶುಭಾಶಯಗಳು !

ನವ ದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ ೩ ರಂದು ನಡೆದ ಸಂಸ್ಕೃತ ದಿನಾಚರಣೆಯ ನಿಮಿತ್ತ ಸಂಸ್ಕೃತ ಭಾಶೆಯಲ್ಲಿ ಶುಭಾಶಯಗಳನ್ನು ನೀಡಿದರು. ಅವರ ಈ ಸಂಸ್ಕೃತ ಭಾಷೆಯಲ್ಲಿನ ಶುಭಾಶಯ ಎಲ್ಲೆಡೆ ಚರ್ಚೆಯ ವಿಷಯವಾಗಿತ್ತು. ಅವರು ಟ್ವೀಟ್ ಮಾಡಿ “ಅದ್ಯ ಸಂಸ್ಕೃತದಿವಸೇ ಯೇ ಸಂಸ್ಕೃತಭಾಷಾಂ ಪಠನ್ತಿ ತಥಾ ಚ ಜನೇಷು ತಸ್ಯಾಃ ಪ್ರಚಾರಾರ್ಥಂ ಪ್ರಯಾಸಂ ಕುರ್ವನ್ತಿ ತಾನ್ ಸರ್ವಾನ್ ಪ್ರಣಮಾಮಿ| ಸಂಸ್ಕೃತಭಾಷಾ ಸುಂದರೀ ಭಾಷಾ ಅಸ್ತಿ ಕಿಞ್‌ಚ ಸಹಸ್ರಶಃ ವರ್ಷೇಭ್ಯಃ ಅಸ್ಮಾಕಂ ಶ್ರೇಷ್ಠಾಯಾಃ ಸಂಸ್ಕೃತ್ಯಾಃ ಭಾಗಭೂತಾ ಅಸ್ತಿ | ಆಗಾಮಿಷು ವರ್ಷೇಷು ಸಂಸ್ಕೃತಭಾಷಾಯಾಃ ಲೋಕಪ್ರಿಯತಾ ನಿತರಾಮ್ ಅಭಿವರ್ಧತಾಮ್|’ ಇದರ ಅರ್ಥ: ‘ಸಂಸ್ಕೃತ ದಿನದ ನಿಮಿತ್ತ ಎಲ್ಲರಿಗೂ ನಮಸ್ಕಾರಗಳು. ಸಂಸ್ಕೃತವು ಒಂದು ಸುಂದರ ಭಾಷೆಯಾಗಿದ್ದು, ಅದು ಭಾರತವನ್ನು ಜ್ಞಾನದ ಭಂಡಾರವನ್ನಾಗಿ ಮಾಡಿದೆ. ಸಂಸ್ಕೃತವನ್ನು ಜನಪ್ರಿಯಗೊಳಿಸಲು ನಾವೆಲ್ಲರೂ ಪ್ರಯತ್ನಿಸೋಣ.’

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರೂ ಸಂಸ್ಕೃತದಲ್ಲಿ ಶುಭಾಶಯ ನೀಡಿದರು


ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರೂ ‘ಸಂಸ್ಕೃತಂ ಭಾರತಸ್ಯ ಆತ್ಮಾ | ಏಷಾ ಭಾಷಾ ನ ಕೇವಲಂ ಭಾರತೀಯ-ಭಾಷಾಣಾಂ ಪೋಷಿಕಾ ಅಪಿತು ಅಸ್ಮಾಕಂ ಸಂಸ್ಕೃತೇಃ ಸಭ್ಯತಾಯಾಃ ಮಾರ್ಗ-ದರ್ಶಿಕಾ ಮಾನವೀಯ-ಮೂಲ್ಯಾನಾಮ್ ಆದರ್ಶಾಣಾಮ್ ಸುಸಂಸ್ಕಾರಾಣಾಂ ಸಂದರ್ಶಿಕಾ ಅಥ ಚ ಅಪೂರ್ವಸ್ಯ ಜ್ಞಾನ-ವಿಜ್ಞಾನಸ್ಯ ಸಂಧಾನಿಕಾ ವರ್ತತೇ| ಶುಭಸ್ಯ ಸಂಸ್ಕೃತ-ದಿವಸಸ್ಯ ಶುಭಾಶಯಾಃ | ‘ಸಂಸ್ಕೃತ ದಿನದ ನಿಮಿತ್ತ ಜಯತು ಸಂಸ್ಕೃತಂ ಜಯತು ಭಾರತಮ್!’, ಇಂತಹ ಶಬ್ದಗಳಲ್ಲಿ ಶುಭಾಶಯಗಳನ್ನು ನೀಡಿದರು.