ರಾಮ ಮಂದಿರದ ಭೂಮಿಪೂಜೆಯ ಮುಹೂರ್ತವನ್ನು ತೆಗೆದ ಬೆಳಗಾವಿಯ ಅರ್ಚಕನಿಗೆ ಬೆದರಿಕೆ

ಪಂಡಿತ ವಿಜಯೇಂದ್ರ ಶರ್ಮಾ

ಬೆಳಗಾವಿ – ಆಗಸ್ಟ್ ೫ ರಂದು ರಾಮ ಮಂದಿರದ ಭೂಮಿ ಪೂಜೆಯ ಮುಹೂರ್ತವನ್ನು ತೆಗೆದಿದ್ದ ಅರ್ಚಕನಿಗೆ ಬೆದರಿಕೆಯೊಡ್ಡಲಾಗಿದೆ, ಎಂಬ ವಾರ್ತೆಯು ಪ್ರಸಾರವಾಗಿದೆ. ಮುಹೂರ್ತ ತೆಗೆದಾಗಿನಿಂದ ಈ ಮುಹೂರ್ತಕ್ಕೆ ಕೆಲವು ಜನರು ವಿರೋಧಿಸಿದ್ದಾರೆ. ದ್ವಾರಕಾ ಹಾಗೂ ಜ್ಯೋತಿಷ ಪೀಠಗಳ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರೂ ಇದನ್ನು ವಿರೋಧಿಸಿದ್ದಾರೆ.
ಬೆಳಗಾವಿಯಲ್ಲಿ ವಾಸಿಸುವ ಅರ್ಚಕರಿಗೆ ಹಲವಾರು ದೂರವಾಣಿ ಕರೆಗಳು ಮತ್ತು ಅದರೊಂದಿಗೆ ಬೆದರಿಕೆಗಳು ಬಂದವು. ‘ಈ ದೂರವಾಣಿ ಕರೆಗಳು ದೇಶದ ವಿವಿಧ ಭಾಗಗಳಿಂದ ಬಂದಿವೆ’ ಎಂದು ಅರ್ಚಕರು ಹೇಳಿದ್ದಾರೆ. ಇದಾದನಂತರ ಅವರ ಭದ್ರತೆಗಾಗಿ ಸ್ಥಳೀಯ ಪೊಲೀಸರು ಓರ್ವ ಪೊಲೀಸ ಪೇದೆಯನ್ನು ನೇಮಿಸಿದ್ದಾರೆ. ಬೆಳಗಾವಿಯ ಪೊಲೀಸ್ ಆಯುಕ್ತರು ಇದರ ಬಗ್ಗೆ ಹೇಳುತ್ತಾ, ‘ಇದರ ಬಗ್ಗೆ ಅಧಿಕೃತವಾಗಿ ದೂರನ್ನು ದಾಖಲಿಸಿದ್ದೇವೆ; ಆದರೆ ಅವರ ಸುರಕ್ಷತೆಗೆ ಅಪಾಯವಿರುವುದರಿಂದ ಅವರಿಗೆ ಭದ್ರತೆಯನ್ನು ನೀಡಲಾಗಿದೆ’ ಎಂದು ಹೇಳಿದ್ದಾರೆ.