ಅಯೋಧ್ಯೆ – ಆಗಸ್ಟ್ ೫ ರಂದು ಪ್ರಧಾನಿ ನರೇಂದ್ರ ಮೋದಿಯವರ ಹಸ್ತಗಳಿಂದ ರಾಮ ಮಂದಿರದ ಭೂಮಿ ಪೂಜೆಯು ನೆರವೇರಲಿದೆ. ಇದಕ್ಕಾಗಿ ಬಿಗಿ ಭದ್ರತೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ಸಾಧಾರಣ ಮೂರು ಗಂಟೆಗಳ ಕಾಲ ಇರಲಿದ್ದಾರೆ. ಇವುಗಳಲ್ಲಿ ದೇವಸ್ಥಾನದ ದರ್ಶನ ಮತ್ತು ಪೂಜೆ ಈ ಕಾರ್ಯಕ್ರಮಗಳು ಸೇರಿವೆ. ಬೆಳಗ್ಗೆ ಅವರು ಮೊದಲು ಹನುಮನ್‌ಗಢಿಗೆ ಹೋಗಿ ಶ್ರೀ ಹನುಮಂತನ ದರ್ಶನವನ್ನು ಪಡೆದು ಪೂಜೆಯನ್ನು ಮಾಡುವವರಿದ್ದಾರೆ. ಅದರ ನಂತರ ಅವರು ರಾಮ ಜನ್ಮಭೂಮಿಗೆ ಹೋಗಿ ಪಾರಿಜಾತ ವೃಕ್ಷದ ಸಸಿಯನ್ನು ನೆಡುವವರಿದ್ದಾರೆ. ಮಧ್ಯಾಹ್ನ ೧೨.೩೦ ಕ್ಕೆ ಮೋದಿಯವರ ಹಸ್ತದಿಂದ ಭೂಮಿಪೂಜೆ ಮತ್ತು ಶಿಲಾನ್ಯಾಸ ಸಮಾರಂಭ ನೆರವೇರಲಿದೆ.
ಕೊರೋನಾದಿಂದಾಗಿ ಅಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ್ ಜೋಶಿ ಮುಂತಾದ ನೇತಾರರು ಉಪಸ್ಥಿತರಿರುವುದಿಲ್ಲ
ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ರಾಮಮಂದಿರದ ಆಂದೋಲನದ ಮುಖ್ಯ ನಾಯಕರು ಹಾಗೂ ಬಿಜೆಪಿಯ ಹಿರಿಯ ಮುಖಂಡರಾದ ಲಾಲಕೃಷ್ಣ ಅಡ್ವಾಣಿ, ಕಲ್ಯಾಣ್ ಸಿಂಹ, ಉಮಾ ಭಾರತಿ, ಮುರಳಿ ಮನೋಹರ್ ಜೋಶಿ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ, ಎಂದು ಹೇಳಲಾಗುತ್ತಿದೆ. ಭದ್ರತೆಯ ಕಾರಣದಿಂದಾಗಿ ಅಯೋಧ್ಯೆಯನ್ನು ‘ಸೀಲ್’ ಮಾಡಲಾಗಿದೆ. ರಾಮಮಂದಿರ ಟ್ರಸ್ಟ್‌ನ ವತಿಯಿಂದ ಭೂಮಿಪೂಜೆಗೆ ಒಟ್ಟು ೧೭೫ ಜನರಿಗೆ ಆಮಂತ್ರಣವನ್ನು ಕಳುಹಿಸಲಾಗಿದೆ. ಇವರಲ್ಲಿ ದೇಶದ ವಿವಿಧ ಭಾಗಗಳಲ್ಲಿನ ಸಂತರ ಸಮಾವೇಶವಿದೆ. ಆಮಂತ್ರಣವನ್ನು ನೀಡಲಾದ ಪ್ರತಿ ಆಮಂತ್ರಣ ಪತ್ರಿಕೆಯ ಮೇಲೆ ಒಂದು ಕೋಡ್‌ನ್ನು ಮುದ್ರಿಸಲಾಗಿದೆ. ಭದ್ರತೆಯ ಕಾರಣದಿಂದಾಗಿ ಈ ಕೋಡ್‌ನ್ನು ನೀಡಲಾಗಿದೆ.