ಸಮಾಜವಿರೋಧಿ ಪಿಡುಗುಗಳ ವಿರೋಧ ಮತ್ತು ‘ಸುರಾಜ್ಯ ಅಭಿಯಾನ’ ಈ ವಿಷಯದ ಬಗ್ಗೆ ‘ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಗಣ್ಯರ ಭಾಷಣಗಳು
೨೦೧೩ ರಲ್ಲಿ ಅಂದಿನ ಕಾಂಗ್ರೇಸ್ ಸರಕಾರವು ವಕ್ಫ್ ಬೋರ್ಡ್ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಮುಸಲ್ಮಾನರಿಗೆ ಅಪಾರ ಅಧಿಕಾರವನ್ನು ನೀಡಿತು. ಇದರಿಂದ ಇಂದು ಭಾರತದಲ್ಲಿ ರಕ್ಷಣಾದಳ ಹಾಗೂ ರೇಲ್ವೆ ಇಲಾಖೆಯ ನಂತರ ಎಲ್ಲಕ್ಕಿಂತ ಹೆಚ್ಚು (೬ ಲಕ್ಷ ಎಕರೆ) ಭೂಮಿಯ ಒಡೆತನ ವಕ್ಫ್ ಬೋರ್ಡ್ ಬಳಿ ಇದೆ. ಹಿಂದೂಗಳಿಗೆ ಈ ಕಾನೂನಿನ ಬಗ್ಗೆ ಇರುವ ಅಜ್ಞಾನ ಹಾಗೂ ಉದಾಸೀನತೆಯಿಂದಾಗಿ ವಕ್ಫ್ ಬೋರ್ಡ್ ದೇಶದಾದ್ಯಂತ ಲಕ್ಷಗಟ್ಟಲೆ ಎಕರೆ ಭೂಮಿಯನ್ನು ಅಕ್ಷರಶಃ ಕಬಳಿಸಲು ಪ್ರಯತ್ನಿಸುತ್ತಿದೆ