ಬಾಬರಿ ನಿರ್ನಾಮವಾಯಿತು, ಈಗ ರಾಮ ಮಂದಿರದ ಭೂಮಿಪೂಜೆಯಿಂದಾಗಿ, ಅಯೋಧ್ಯೆಯ ಸೂತಕ ಹೋಗಿದೆ !

ಸಂಸದ ಅಸದುದ್ದೀನ್ ಒವೈಸಿಯವರ ಪ್ರಚೋದನಾಕಾರಿ ಹೇಳಿಕೆಗೆ ದೈನಿಕ ‘ಸಾಮನಾ’ದ ಸಂಪಾದಕೀಯದಲ್ಲಿ ಪ್ರತ್ಯುತ್ತರ

ಮುಂಬೈ – ಯಾರಾತ ಬಾಬರ್ ? ಮತ್ತು ನಿಮಗೆ ಅವನೇಗಾಬೇಕು ? ಬಾಬರ್ ಈ ದೇಶದಲ್ಲಿ ಎರಡು ಬಾರಿ ನಿಧನನಾದ. ಒಮ್ಮೆ ೪೫೦ ವರ್ಷಗಳ ಹಿಂದೆ ಮತ್ತು ಇನ್ನೊಮ್ಮೆ ಅಯೋಧ್ಯೆಯಲ್ಲಿ ರಾಮಭಕ್ತರು ಬಾಬರಿ ಗುಮ್ಮಟಗಳನ್ನು ಧ್ವಂಸಗೊಳಿಸಿದಾಗ ! ಅಯೋಧ್ಯೆಯಲ್ಲಿ ತೋಫುಗಳಿಂದಾದ ಪಾಪಗಳನ್ನು ಶಿವ ಸೈನಿಕರು ಸುತ್ತಿಗೆಯಿಂದ ನಾಶಪಡಿಸಿದರು. ಇದು ಜನರ ಭಾವನೆಯ ವಿಜಯವಾಗಿದೆ. ಈಗ ಬಾಬರಿ ನಾಮಾವಶೇಷವಾಗಿದೆ. ರಾಮ ಮಂದಿರ ಭೂಮಿಪೂಜೆಯ ಸಮಾರಂಭದಿಂದಾಗಿ ಅಯೋಧ್ಯೆಯ ಸೂತಕ ಹೋಗಿದೆ ಎಂದು ಆಗಸ್ಟ್ ೭ ರ ದೈನಿಕ ‘ಸಾಮನಾ’ದ ಸಂಪಾದಕೀಯದಿಂದ ಸಂಸದ ಅಸದುದ್ದೀನ್ ಓವೈಸಿಗೆ ಪ್ರತ್ಯುತ್ತರ ನೀಡಲಾಗಿದೆ.

ರಾಮಮಂದಿರ ಭೂಮಿಪೂಜೆಯ ಬಗ್ಗೆ ಓವೈಸಿಯವರು ಟ್ವೀಟ್ ಮಾಡಿ, ‘ಬಾಬ್ರಿ ಇತ್ತು, ಇದೆ ಮತ್ತು ಮುಂದೆಯೂ ಇರುವುದು’ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ಅವರ ಈ ಪ್ರಚೋದನಕಾರಿ ಹೇಳಿಕೆಗೆ ಈ ಸಂಪಾದಕೀಯ ತಕ್ಕ ಪ್ರತ್ಯುತ್ತರ ನೀಡಿದೆ.

ಸಂಪಾದಕೀಯದಲ್ಲಿ ಮುಂದಿನಂತೆ ಹೇಳಲಾಗಿದೆ

೧. ಬಾಬರ್ ಈಗ ಭಾರತ ಮಾತ್ರವಲ್ಲದೇ ವಿಶ್ವದ ಬೇರೆಲ್ಲಿಯೂ ಜೀವಂತವಾಗಿಲ್ಲ. ‘ಉಜ್ಬೇಕಿಸ್ತಾನ್’ ದೇಶದಿಂದ ಆತ ಬಂದಿದ್ದ. ಆತ ಆ ದೇಶದಲ್ಲಿಯಾದರೂ ಎಷ್ಟು ದಿನ ಜೀವಂತ ಇದ್ದ ? ಒವೈಸಿಯಂತಹ ಉನ್ನತ ವಿದ್ಯಾವಂತ ಮುಸಲ್ಮಾನ ಮುಖಂಡರು ಇದನ್ನು ನೆನಪಿನಲ್ಲಿಡಬೇಕು.

೨. ಓವೈಸಿ ಹಿಂದೂತ್ವದ ವಿಜಯದ ಬಗ್ಗೆ ಮಾತನಾಡಿದ್ದಾರೆ. ಇದು ನ್ಯಾಯ ಮತ್ತು ಸತ್ಯದ ವಿಜಯವಾಗಿದೆ. ಇದನ್ನು ಸಂವಿಧಾನದ ಚೌಕಟ್ಟಿನೊಳಗೆ ಕಾನೂನಿನ ಮೂಲಕ ಪಡೆಯಲಾಗಿದೆ. ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನು ಗೌರವಿಸುವುದು ಪ್ರಜಾಪ್ರಭುತ್ವವಾಗಿದೆ.

೩. ಒವೈಸಿ ಯಾವ ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ? ದೇಶದ ಸರ್ವೋಚ್ಚ ನ್ಯಾಯಾಲಯ ರಾಮ ಮಂದಿರದ ಬಗ್ಗೆ ನೀಡಿದ ತೀರ್ಪು ಅಂದರೆ ಸಂವಿಧಾನಕ್ಕೆ ಗೌರವ ಸಲ್ಲಿಸಿಯೇ ಪ್ರಧಾನಿ ಅಯೋಧ್ಯೆಯ ಭೂಮಿಗೆ ಗೌರವ ಸಲ್ಲಿಸಿದ್ದಾರೆ.

೪. ಹಿಂದೂತ್ವವು ಅತ್ಯಂತ ಹೆಚ್ಚು ಜಾತ್ಯತೀತವಾಗಿದೆ; ಏಕೆಂದರೆ ಅದು ದೇಶದ ಸಂವಿಧಾನ ಮತ್ತು ನ್ಯಾಯಾಲಯಗಳನ್ನು ಗೌರವಿಸುತ್ತದೆ. ಹಿಂದೂ ಧರ್ಮಕ್ಕೆ ತನ್ನದೇ ಆದ ಷರಿಯತ್ ಇಲ್ಲ ಮತ್ತು ಇತರ ಧರ್ಮದವರನ್ನು ’ಕಾಫಿರ್’ ಎಂದು ಪರಿಗಣಿಸುವುದಿಲ್ಲ. ರಾಮ ಮಂದಿರವು ಸಂವಿಧಾನದ ರಾಷ್ಟ್ರೀಯ ಸಂಕೇತವಾಗಿದೆ.

೫. ಜಾಮಾ ಮಸೀದಿಯಲ್ಲಿ ಇಮಾಮ್‌ಗಳ ಮುಂದೆ ಕುಳಿತು ರಾಜಕೀಯ ಲಾಭ ಮತ್ತು ನಷ್ಟಗಳ ಬಗ್ಗೆ ಮಾತನಾಡುವವ ಎಲ್ಲರೂ ಜಾತ್ಯತೀತವಾದಿಗಳು, ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವವರು ಜಾತ್ಯತೀತವಾದಿಗಳಲ್ಲ, ಎಂದು ಭಾವಿಸುವುದೇ ಜಾತ್ಯತೀತತೆಯ ಢೋಂಗಿತನವಾಗಿದೆ. ಈ ಢೋಂಗಿತನವನ್ನು ೬ ಡಿಸೆಂಬರ್ ೧೯೯೨ ರಂದೇ ಹುಗಿದಿಡಲಾಯಿತು.