ಕೊರೊನಾವನ್ನು ನಿಯಂತ್ರಿಸಲು ಕರ್ನಾಟಕದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಒಂದುವಾರ ಧನ್ವಂತರಿ ಹೋಮ !
ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಮತ್ತು ಜನರ ಕಲ್ಯಾಣಕ್ಕಾಗಿ ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆಯನ್ನು ಪ್ರಾರಂಭಿಸಲಾಗಿದೆ. ಮೇ ೫ ರಿಂದ ಮೇ ೧೧ ರವರೆಗೆ ಪೂಜೆ, ಹೋಮ-ಹವನ ನಡೆಯಲಿದೆ. ರೋಗ ನಿಯಂತ್ರಣಕ್ಕಾಗಿ ಧನ್ವಂತರಿ ಹೋಮ ಮತ್ತು ಕ್ರಿಮಿಹರ ಸೂಕ್ತವನ್ನು ಜಪ ಸಹಿತ ಹೋಮ-ಹವನ ನಡೆಸಲಾಗುತ್ತಿದೆ.