ಚಾಮರಾಜನಗರದಲ್ಲಿ ಆಮ್ಲಜನಕದ ವಿತರಣೆಯ ವಿಳಂಬದಿಂದಾಗಿ ಆಸ್ಪತ್ರೆಯಲ್ಲಿ ೨೪ ಕೊರೋನಾ ಪೀಡಿತ ರೋಗಿಗಳ ಸಾವು !

ಇದರ ಹಿಂದೆ ಮಾನವರಿಂದ ತಪ್ಪಾಗಿದ್ದಲ್ಲಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !

ಮೈಸೂರು – ರಾಜ್ಯದ ಚಾಮರಾಜನಗರದ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ೨೪ ಕೊರೋನಾ ಪೀಡಿತ ರೋಗಿಗಳು ಸಾವನ್ನಪ್ಪಿದ್ದಾರೆ. ಈ ಘಟನೆಯ ನಂತರ ೨೫೦ ಆಕ್ಸಿಜನ್ ಸಿಲಿಂಡರ್‌ಗಳನ್ನು ಮೈಸೂರಿನಿಂದ ಚಾಮರಾಜನಗರಕ್ಕೆ ಕಳುಹಿಸಲಾಗಿದೆ. ಚಾಮರಾಜನಗರ ಆಸ್ಪತ್ರೆಗೆ ಬಳ್ಳಾರಿಯಿಂದ ಆಮ್ಲಜನಕ ಬರುವುದಿತ್ತು; ಆದರೆ ಆಮ್ಲಜನಕ ಬರಲು ತಡವಾಗಿತ್ತು. ಆದ್ದರಿಂದ ಈ ಅಪಘಾತಕ್ಕೆ ಕಾರಣವಾಯಿತು. ಸಾವನ್ನಪ್ಪಿದ ಹೆಚ್ಚಿನ ರೋಗಿಗಳು ವೆಂಟಿಲೇಟರ್‌ಗಳಲ್ಲಿದ್ದರು. ಆಮ್ಲಜನಕದ ಪೂರೈಕೆ ಮುಗಿದನಂತರ ಅವರು ಒದ್ದಾಡಲು ಆರಂಭಿಸಿದರು ಮತ್ತು ಸಾವನ್ನಪ್ಪಿದರು. ಈ ಮೊದಲು ಕಲ್ಬುರ್ಗಿಯಲ್ಲಿ ಕೆ.ಬಿ.ಎನ್. ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ೪ ರೋಗಿಗಳು ಸಾವನ್ನಪ್ಪಿದ್ದಾರೆ. ಅಲ್ಲದೆ, ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದಾಗಿ ವೆಂಟಿಲೇಟರ್‌ನಲ್ಲಿದ್ದ ರೋಗಿಯೊಬ್ಬರು ಮೃತಪಟ್ಟಿದ್ದಾರೆ.

ಆರೋಗ್ಯ ಸಚಿವ ಡಾ. ಕೆ. ಸುಧಾಕರ ಇವರು, ಚಾಮರಾಜನಗರದಲ್ಲಿ ನಡೆದ ಘಟನೆ ಅತ್ಯಂತ ದುರದೃಷ್ಟಕರವಾಗಿದೆ. ನಾನು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದೇನೆ. ನಾನು ಮೈಸೂರು, ಮಂಡ್ಯ ಮತ್ತು ಚಾಮರಾಜನಗರಕ್ಕೆ ಹೋಗುತ್ತಿದ್ದೇನೆ. ನಾನು ಅಲ್ಲಿಗೆ ಹೋಗಿ ಒಟ್ಟಾರೆ ಪರಿಸ್ಥಿತಿಯನ್ನು ಪರಿಶೀಲಿಸುತ್ತೇನೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.