ಭಾರತದಲ್ಲಿ ಇಂತಹ ಪರಿಸ್ಥಿತಿ ಬರಬಹುದು ಎಂಬುದು ಯಾರೂ ನಿರೀಕ್ಷಿಸಿರಲಿಲ್ಲ; ಆದರೆ ಆಪತ್ಕಾಲ ಬರುತ್ತದೆ, ಎಂದು ದ್ರಷ್ಟಾರರು, ಸಂತರು ಇತ್ಯಾದಿಗಳು ಹೇಳುತ್ತಿದ್ದರು, ಅದು ಅಂತಹ ಘಟನೆಗಳಲ್ಲಿ ಕಂಡುಬರುತ್ತದೆ !
ಬೆಂಗಳೂರು (ಕರ್ನಾಟಕ) – ಕೊರೋನಾ ಸೋಂಕಿನಿಂದ ನಗರದಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳು ಸಾಯುತ್ತಿದ್ದಾರೆ. ಅವರ ಶವಸಂಸ್ಕಾರ ಮಾಡಲು ಸ್ಮಶಾನದಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗುತ್ತಿದೆ. ಚಾಮರಾಜಪೇಟೆಯ ಸ್ಮಶಾನಭೂಮಿಯ ಹೊರಗಂತೂ ‘ಹೌಸ್ ಫುಲ್’ ಎಂಬ ಫಲಕ ಹಾಕಲಾಗಿದೆ. ಸ್ಮಶಾನಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಸ್ಥಳಾವಕಾಶವಿಲ್ಲದ ಕಾರಣ ಈ ಫಲಕವನ್ನು ಹಾಕಲಾಗಿದೆ. ಸ್ಮಶಾನಭೂಮಿಯಲ್ಲಿ ೨೦ ಶವಗಳ ಅಂತ್ಯಕ್ರಿಯೆ ಮಾಡಲು ವ್ಯವಸ್ಥೆ ಇದೆ. ಆದ್ದರಿಂದ ಶವ ಸಂಸ್ಕಾರಕ್ಕಾಗಿ ಹೊಸ ಮೃತದೇಹಗಳನ್ನು ತೆಗೆದುಕೊಳ್ಳಲು ನಿರಾಕರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಈ ರೀತಿಯ ೧೩ ಸ್ಮಶಾನ ಭೂಮಿಗಳಿವೆ ಅಲ್ಲಿ ವಿದ್ಯುತ್ ಶವಗಾರಿವೆ; ಆದರೆ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಜನರು ಅಂತ್ಯಕ್ರಿಯೆಗಾಗಿ ಬಹಳ ಸಮಯ ಕಾಯಬೇಕಾಬೇಕಾಗುತ್ತದೆ.
ಚಿತಾಗಾರ ತುಂಬಿದೆ: ಸ್ಮಶಾನಗಳ ಮುಂದೆಯೂ ಹೌಸ್ಫುಲ್ ಬೋರ್ಡ್, ಬುಕ್ಕಿಂಗ್ ಫುಲ್ ಆದ ನಂತರ ಅವಕಾಶವಿಲ್ಲ#Cremation #crematoriums #Bengaluru #Housefull #Corona2ndWave https://t.co/3V0kejnXXj
— TV9 Kannada (@tv9kannada) May 4, 2021
ಸೂರತ್‍ನಲ್ಲಿ ಮರಣ ಪ್ರಮಾಣಪತ್ರಕ್ಕಾಗಿ ಸಾಲು
ಕೊರೋನಾದಿಂದ ಸಾವನ್ನಪ್ಪಿದವರ ಮರಣ ಪ್ರಮಾಣಪತ್ರವನ್ನು ಪಡೆಯಲು ಸೂರತ್‍ನ ಜನರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ಪಡೆಯಲು ಸರಕಾರಿ ಕಚೇರಿಗಳ ಹೊರಗೆ ದೊಡ್ಡ ಸರತಿ ಸಾಲುಗಳು ಇದೆ. ನಗರದಲ್ಲಿ ಸಾವಿನ ಸಂಖ್ಯೆ ಹೆಚ್ಚು ಇದೆ.