‘ಟಿ.ಸಿ.ಎಸ್.’, ‘ಎಸ್.ಬಿ.ಐ.’ ನಂತರ ‘ವಿಪ್ರೋ’ದಲ್ಲೂ ಕಾರ್ಪೊರೇಟ್ ಜಿಹಾದ್?
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂತ್ರಸ್ತೆ
ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದ ಶಾಹಿನಾ ರಫೀಕ್ ಎಂಬ ಮಹಿಳಾ ಉದ್ಯೋಗಿಗೆ ‘ವಿಪ್ರೋ’ ಆಡಳಿತ ಮಂಡಳಿಯಿಂದ ರಕ್ಷಣೆ!

ಪುಣೆ, ಜೂನ್ ೩ (ವಾರ್ತೆ) – ನಾಸಿಕ್‌ನ ‘ಟಿ.ಸಿ.ಎಸ್.’ನಲ್ಲಿ ನಡೆದ ಆಘಾತಕಾರಿ ಘಟನೆಯ ನಂತರ, ಮುಂಬಯಿನ ಸ್ಟೇಟ್ ಬ್ಯಾಂಕ್‌ನಲ್ಲಿನ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿತ್ತು. ಈಗ ಪುಣೆಯ ‘ವಿಪ್ರೋ’ ಎಂಬ ಪ್ರತಿಷ್ಠಿತ ಸಂಸ್ಥೆಯಲ್ಲೂ ‘ಕಾರ್ಪೊರೇಟ್ ಜಿಹಾದ್’ ಮತ್ತು ಧಾರ್ಮಿಕ ಕಿರುಕುಳದ ಅತ್ಯಂತ ಗಂಭೀರ ಪ್ರಕರಣ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಹಿಂಜವಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂಬಂಧಪಟ್ಟ ಸಂತ್ರಸ್ತ ಹಿಂದೂ ಮಹಿಳೆಯು ಹಿಂದೂ ಜನಜಾಗೃತಿ ಸಮಿತಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಖುದ್ದಾಗಿ ಉಪಸ್ಥಿತರಿದ್ದು, ಧೈರ್ಯದಿಂದ ಈ ಪ್ರಕರಣವನ್ನು ಬಹಿರಂಗಪಡಿಸಿದರು.

ಸಮಿತಿಯು ಈ ಆಕ್ರೋಶಕಾರಿ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. “ಈ ಪ್ರಕರಣದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ತಕ್ಷಣ ಗಮನಹರಿಸಿ ಇಡೀ ಪ್ರಕರಣದ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯಗಳ ಸಂಘಟಕ ಶ್ರೀ. ಸುನಿಲ್ ಘನವಟ್ ಮತ್ತು ಸಂತ್ರಸ್ತ ಮಹಿಳೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಪುಣೆಯ ‘ಶ್ರಮಿಕ್ ಪತ್ರಕಾರ್ ಭವನ’ದಲ್ಲಿ ನಡೆದ ಈ ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತ ಹಿಂದೂ ಮಹಿಳೆ (‘ವಿಪ್ರೋ’ದ ಮಾಜಿ ಉದ್ಯೋಗಿ), ಹಿಂದೂ ಜನಜಾಗೃತಿ ಸಮಿತಿಯ ಪುಣೆ ಜಿಲ್ಲಾ ಸಂಯೋಜಕ ಶ್ರೀ. ಪರಾಗ್ ಗೋಖಲೆ, ‘ರಾಷ್ಟ್ರಭಕ್ತ ಅಧಿವಕ್ತಾ ಸಮಿತಿ’ಯ ನ್ಯಾಯವಾದಿ ವಿವೇಕ್ ಭೋಸಲೆ, ನ್ಯಾಯವಾದಿ ಗೋಪಾಲ್ ತೇಲಂಗ್ ಮತ್ತು ರಣರಾಗಿಣಿ ಶಾಖೆಯ ಕು. ಕ್ರಾಂತಿ ಪೇಟ್ಕರ್ ಉಪಸ್ಥಿತರಿದ್ದರು.
ಏನಿದು ಪ್ರಕರಣ?
‘ವಿಪ್ರೋ’ದಲ್ಲಿ ಕೆಲಸ ಮಾಡುತ್ತಿದ್ದಾಗ ಸಂತ್ರಸ್ತೆಯ ಮೇಲೆ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಮತ್ತು ಮುಸ್ಲಿಂ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧ ಹೊಂದಲು ತೀವ್ರ ಮಾನಸಿಕ ಒತ್ತಡ ಹೇರಲಾಗಿತ್ತು. ಈ ಧರ್ಮವಿರೋಧಿ ಮತ್ತು ಅನೈತಿಕ ಕೃತ್ಯವನ್ನು ಅವಳು ಕಡ್ಡಾಯವಾಗಿ ನಿರಾಕರಿಸಿ ಕಂಪನಿ ಆಡಳಿತ ಮಂಡಳಿಗೆ ದೂರು ನೀಡಿದ್ದಳು; ಆದರೆ ಆಡಳಿತ ಮಂಡಳಿಯು ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವ ಬದಲಿಗೆ ಸಂತ್ರಸ್ತೆಯನ್ನೇ ಕೆಲಸದಿಂದ ವಜಾಗೊಳಿಸಿದೆ.
ಕಾರ್ಪೊರೇಟ್ ವಲಯದಲ್ಲಿ ಹಿಂದೂ ಮಹಿಳೆಯರ ಸುರಕ್ಷತೆ ಮತ್ತು ಕಂಪನಿ ಆಡಳಿತದ ಪಾರದರ್ಶಕತೆ ಪ್ರಶ್ನಾರ್ಹವಾಗಿದೆ! – ಸಂತ್ರಸ್ತೆ

ತಾನು ‘ವಿಪ್ರೋ’ದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ತನ್ನ ‘ಟೀಮ್’ (ತಂಡ) ನಲ್ಲಿದ್ದ ಶಾಹಿನಾ ರಫೀಕ್ ಎಂಬ ಮಹಿಳಾ ಸಹೋದ್ಯೋಗಿ ತನ್ನ ವೈಯಕ್ತಿಕ ಜೀವನದಲ್ಲಿ ಉದ್ದೇಶಪೂರ್ವಕವಾಗಿ ಅತಿಯಾದ ಹಸ್ತಕ್ಷೇಪ ಮಾಡಲು ಪ್ರಾರಂಭಿಸಿದಳು. ಶಾಹಿನಾ ತನಗೆ ಪರಿಚಯವಿರುವ ‘ಶೇಖ್’ ಎಂಬ ಮುಸ್ಲಿಂ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧ ಹೊಂದುವಂತೆ, ಹಾಗೂ ತನ್ನ ಮೂಲ ಹಿಂದೂ ಧರ್ಮವನ್ನು ಬಿಟ್ಟು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ತುಂಬಾ ಒತ್ತಾಯಿಸುತ್ತಿದ್ದಳು. “ನೀನು ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಮುಸ್ಲಿಂ ವ್ಯಕ್ತಿಯೊಂದಿಗೆ ಇದ್ದರೆ, ದುಬೈನಲ್ಲಿ ಐಷಾರಾಮಿ ಮತ್ತು ಶಾಂತಿಯುತ ಜೀವನ ನಡೆಸಬಹುದು” ಎಂದು ನಿರಂತರವಾಗಿ ಆಮಿಷ ಒಡ್ಡಲಾಗುತ್ತಿತ್ತು, ಎಂದು ಸಂತ್ರಸ್ತ ಹಿಂದೂ ಮಹಿಳೆ ತಿಳಿಸಿದರು. ಸತತ ಧಾರ್ಮಿಕ ಮತ್ತು ಮಾನಸಿಕ ಕಿರುಕುಳದಿಂದ ಬೇಸತ್ತ ಸಂತ್ರಸ್ತೆ ಶಾಹಿನಾಳೊಂದಿಗೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ, ಕೇವಲ ಕಚೇರಿಯ ಕೆಲಸಕ್ಕೆ ಮಾತ್ರ ಸೀಮಿತ ಸಂಪರ್ಕವನ್ನು ಹೊಂದಿದ್ದಳು.
ಸಂತ್ರಸ್ತೆಯ ಪ್ರಕಾರ, ಈ ಹೆಚ್ಚುತ್ತಿರುವ ತೊಂದರೆ ಮತ್ತು ಕಿರುಕುಳದ ಬಗ್ಗೆ ಅವಳು ಕಂಪನಿಯ ಹಿರಿಯ ಅಧಿಕಾರಿಗಳಿಗೆ ಅಧಿಕೃತವಾಗಿ ದೂರು ನೀಡಿದ್ದಳು; ಆದರೆ ‘ವಿಪ್ರೋ’ ಆಡಳಿತವು ಶಾಹಿನಾ ರಫೀಕ್ ವಿರುದ್ಧ ಯಾವುದೇ ದಂಡನಾತ್ಮಕ ಅಥವಾ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಬದಲಾಗಿ ಶಾಹಿನಾ ಸೇಡಿನ ಬುದ್ಧಿಯಿಂದ ಸಂತ್ರಸ್ತೆಯ ಸಂಭಾಷಣೆಯನ್ನು ರಹಸ್ಯವಾಗಿ ಮತ್ತು ಸತ್ಯವನ್ನು ತಿರುಚಿ ಧ್ವನಿಮುದ್ರಣ (ಆಡಿಯೋ ರೆಕಾರ್ಡಿಂಗ್) ಮಾಡಿ ಸುಳ್ಳು ದೂರು ನೀಡಿದಳು. ಈ ಇಡೀ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಶಾಹಿನಾಳನ್ನು ಬಹಿರಂಗವಾಗಿ ಬೆಂಬಲಿಸಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸಿದರು. ಅಲ್ಲದೆ ‘ವಿಪ್ರೋ’ದ ಹೆಚ್.ಆರ್. (ಮಾನವ ಸಂಪನ್ಮೂಲ ಇಲಾಖೆ) ಮತ್ತು ಆಡಳಿತ ಸಮಿತಿಯು ಸಂತ್ರಸ್ತೆಯ ವಾದ, ಆಕೆಯ ಹಳೆಯ ದೂರು ಮತ್ತು ಪುರಾವೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ಏಕಪಕ್ಷೀಯ ಕ್ರಮ ಕೈಗೊಂಡಿದೆ.
ಸಂತ್ರಸ್ತೆಯ ಒಪ್ಪಿಗೆಯಿಲ್ಲದೆ ಬಲವಂತವಾಗಿ ಆಕೆಯ ‘ಲ್ಯಾಪ್‌ಟಾಪ್’ನಿಂದ ರಾಜೀನಾಮೆ ಸಲ್ಲಿಕೆ!
ಆಗಸ್ಟ್ ೨೦೨೫ ರ ಕೊನೆಯಲ್ಲಿ, ಹೆಚ್.ಆರ್. ಪ್ರತಿನಿಧಿ ಪ್ರಶಾಂತ್ ಜಿ.ಆರ್. ಅವರು ಸಂತ್ರಸ್ತೆಯನ್ನು ‘ಮೈಕ್ರೋಸಾಫ್ಟ್ ಟೀಮ್ಸ್’ ಸಭೆಗೆ ಕರೆದರು. ಆ ಸಭೆಯ ಸಮಯದಲ್ಲಿ ‘ಟೆಕ್ನಿಕಲ್ ಟ್ರಿಕ್ಸ್’ (ತಾಂತ್ರಿಕ ತಂತ್ರಗಳನ್ನು) ಬಳಸಿ ಸಂತ್ರಸ್ತೆಯ ‘ಲ್ಯಾಪ್‌ಟಾಪ್’ನ ‘ಸ್ಕ್ರೀನ್ ಕಂಟ್ರೋಲ್’ ಅನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು, ಅವಳಿಗೆ ಯಾವುದೇ ಮುನ್ಸೂಚನೆ ನೀಡದೆ, ಆಕೆಯ ಒಪ್ಪಿಗೆಯಿಲ್ಲದೆ ಬಲವಂತವಾಗಿ ರಾಜೀನಾಮೆ ಸಲ್ಲಿಸುವಂತೆ ಮಾಡಿದರು.
ಬಲವಂತವಾಗಿ ರಾಜೀನಾಮೆ ಬರೆಸಿಕೊಳ್ಳುವುದು ಕಾರ್ಮಿಕ ಕಾಯ್ದೆಗಳ ನೇರ ಉಲ್ಲಂಘನೆ! – ನ್ಯಾಯವಾದಿ ವಿವೇಕ್ ಭೋಸಲೆ
ಯಾವುದೇ ಮುನ್ಸೂಚನೆ ಇಲ್ಲದೆ, ನೈಸರ್ಗಿಕ ನ್ಯಾಯದ ತತ್ವಗಳನ್ನು ಗಾಳಿಗೆ ತೂರಿ ಮತ್ತು ತನಿಖೆಯ ನಂತರ ತನ್ನ ಅಭಿಪ್ರಾಯವನ್ನು ಮಂಡಿಸಲು ಕಾನೂನುಬದ್ಧ ಅವಕಾಶವನ್ನು ನೀಡದೆ ಬಲವಂತವಾಗಿ ರಾಜೀನಾಮೆ ಪಡೆದುಕೊಳ್ಳುವುದು ಭಾರತೀಯ ಶ್ರಮ ಮತ್ತು ಕಾರ್ಮಿಕ ಕಾಯ್ದೆಗಳ ನೇರ ಉಲ್ಲಂಘನೆಯಾಗಿದೆ ಎಂದು ನ್ಯಾಯವಾದಿ ಭೋಸಲೆ ಈ ಸಂದರ್ಭದಲ್ಲಿ ಹೇಳಿದರು.
ನ್ಯಾಯಕ್ಕಾಗಿ ೫೦ ಲಕ್ಷ ರೂಪಾಯಿ ಪರಿಹಾರದೊಂದಿಗೆ ‘ವಿಪ್ರೋ’ ಆಡಳಿತಕ್ಕೆ ಕಾನೂನು ನೋಟಿಸ್!ಈ ಸಾಂಸ್ಥಿಕ ಅನ್ಯಾಯ ಮತ್ತು ಕಿರುಕುಳದ ವಿರುದ್ಧ ಸಂತ್ರಸ್ತೆಯು ತನ್ನ ನ್ಯಾಯವಾದಿಗಳ ಮೂಲಕ ‘ವಿಪ್ರೋ’ ಆಡಳಿತಕ್ಕೆ ಕಾನೂನು ನೋಟಿಸ್ ಕಳುಹಿಸಿದ್ದಾಳೆ. ಅದರಲ್ಲಿನ ಪ್ರಮುಖ ಅಂಶಗಳು ಈ ಕೆಳಗಿನಂತಿವೆ… ೧. ಅನುಭವಿಸಿದ ತೀವ್ರ ಮಾನಸಿಕ ಕಿರುಕುಳ ಮತ್ತು ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆಯುಂಟಾಗಿದ್ದಕ್ಕಾಗಿ ‘ವಿಪ್ರೋ’ ಆಡಳಿತವು ೫೦ ಲಕ್ಷ ರೂಪಾಯಿ ಆರ್ಥಿಕ ಪರಿಹಾರವನ್ನು ನೀಡಬೇಕು. ೨. ಒತ್ತಡ ಮತ್ತು ಬಲವಂತವಾಗಿ ಬರೆಸಿಕೊಂಡ ರಾಜೀನಾಮೆಯು ಕಾನೂನಿನ ದೃಷ್ಟಿಯಲ್ಲಿ ಅಮಾನ್ಯವಾಗಿದ್ದು, ಅದನ್ನು ತಕ್ಷಣವೇ ರದ್ದುಗೊಳಿಸಬೇಕು. ೩. ಸಂತ್ರಸ್ತೆಯನ್ನು ಪೂರ್ಣ ವೇತನ ಮತ್ತು ‘ಸೇವೆಯ ನಿರಂತರತೆ’ಯೊಂದಿಗೆ (Service Continuity) ಮತ್ತೆ ಗೌರವಯುತವಾಗಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ೪. ಕಂಪನಿಯು ಸಂತ್ರಸ್ತೆಯ ಬಳಿ ಅಧಿಕೃತವಾಗಿ ಲಿಖಿತ ಕ್ಷಮೆಯಾಚಿಸಬೇಕು ಮತ್ತು ಮುಖ್ಯ ಶಂಕಿತೆ ಶಾಹಿನಾ ರಫೀಕ್ ಸೇರಿದಂತೆ ಆಕೆಯನ್ನು ಬೆಂಬಲಿಸಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. |
೧೫ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮೊಕದ್ದಮೆ ಹೂಡುವುದಾಗಿ ಸಂತ್ರಸ್ತೆಯಿಂದ ಎಚ್ಚರಿಕೆ!ಮುಂಬರುವ ೧೫ ದಿನಗಳಲ್ಲಿ ಕಂಪನಿಯು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಸಿವಿಲ್, ಕ್ರಿಮಿನಲ್ ಮತ್ತು ಕಾರ್ಮಿಕ ನ್ಯಾಯಾಲಯದಲ್ಲಿ ‘ವಿಪ್ರೋ’ ವಿರುದ್ಧ ನೇರವಾಗಿ ಮೊಕದ್ದಮೆ ಹೂಡುವುದಾಗಿ ಸಂತ್ರಸ್ತ ಹಿಂದೂ ಮಹಿಳೆ ಎಚ್ಚರಿಕೆ ನೀಡಿದ್ದಾರೆ. ಸಂತ್ರಸ್ತೆಯು ಪತ್ರಕರ್ತರ ಪ್ರಶ್ನೆಗಳಿಗೆ ಅತ್ಯಂತ ಧೈರ್ಯದಿಂದ ಉತ್ತರಿಸಿದಳು. ಆಕೆಯ ಮಾತುಗಳಲ್ಲಿ ಆತ್ಮವಿಶ್ವಾಸ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಛಲ ಎದ್ದು ಕಾಣುತ್ತಿತ್ತು; ಆದರೆ ಕೆಲವು ಕ್ಷಣಗಳಲ್ಲಿ ಆಕೆಗೆ ಕಣ್ಣೀರು ತಡೆಯಲಾಗಲಿಲ್ಲ. |
ಪುಣೆಯ ಐಟಿ ವಲಯದಲ್ಲಿ ಹಿಂದೂ ವಿರೋಧಿ ಅಜೆಂಡಾವನ್ನು ಸಹಿಸುವುದಿಲ್ಲ! – ಹಿಂದೂ ಜನಜಾಗೃತಿ ಸಮಿತಿ
ಈ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಕೊಡಿಸಲು ಹಿಂದೂ ಜನಜಾಗೃತಿ ಸಮಿತಿಯು ಆಕೆಯ ಬೆನ್ನಿಗೆ ನಿಂತಿದೆ. ಈ ಘಟನೆಯು ವ್ಯವಸ್ಥಿತ ‘ಕಾರ್ಪೊರೇಟ್ ಜಿಹಾದ್’ನ ಒಂದು ಭಾಗವಾಗಿದೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕುಳಿತು ಹಿಂದೂ ಮಹಿಳೆಯರ ಧಾರ್ಮಿಕ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಈ ಪ್ರಯತ್ನ ಅತ್ಯಂತ ಕಳವಳಕಾರಿಯಾಗಿದೆ. ಇದು ಕೇವಲ ಒಂದು ಪ್ರಕರಣವಲ್ಲ, ಇಂತಹ ಅನೇಕ ಪ್ರಕರಣಗಳು ನಡೆದಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಪುಣೆಯ ಐಟಿ ವಲಯದಲ್ಲಿನ ಈ ಹಿಂದೂ ವಿರೋಧಿ ಅಜೆಂಡಾ ಮತ್ತು ಕಿರುಕುಳವನ್ನು ಯಾವುದೇ ಪರಿಸ್ಥಿತಿಯಲ್ಲೂ ಸಹಿಸಲಾಗುವುದಿಲ್ಲ. ಇತರ ದೊಡ್ಡ ಕಂಪನಿಗಳಲ್ಲೂ ಇಂತಹ ಘಟನೆಗಳು ನಡೆಯುತ್ತಿವೆಯೇ? ಎಂಬುದರ ಕುರಿತು ಸರಕಾರ ಸಮಗ್ರ ತನಿಖೆ ನಡೆಸಬೇಕು. ಯಾವುದೇ ಹಿಂದೂ ಮಹಿಳೆಗೆ ಇಂತಹ ಅನ್ಯಾಯ, ಧಾರ್ಮಿಕ ಕಿರುಕುಳ ಅಥವಾ ಮತಾಂತರಕ್ಕೆ ಒತ್ತಡ ಬರುತ್ತಿದ್ದರೆ, ಅವರು ಭಯಪಡದೆ ಹಿಂದೂ ಜನಜಾಗೃತಿ ಸಮಿತಿಯ ೭೭೩೮೨ ೩೩Template:Redacted (ದೂರವಾಣಿ ಸಂಖ್ಯೆ) ಅನ್ನು ಸಂಪರ್ಕಿಸಬೇಕು ಎಂದು ಶ್ರೀ. ಘನವಟ್ ಕರೆ ನೀಡಿದರು. |

ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ