ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಂದ ಲಂಚ ಪಡೆದು ಹಾಸಿಗೆ(ಬೆಡ್) ನೀಡಲಾಗುತ್ತಿದೆ ! – ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಆರೋಪ

ತೇಜಸ್ವಿ ಸೂರ್ಯ

ಬೆಂಗಳೂರು – ಮಧ್ಯವರ್ತಿಗಳು ಬೆಂಗಳೂರಿನಲ್ಲಿರುವ ಯಾವುದೇ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಸಿಗೆ ಒದಗಿಸಲು ಲಂಚ ತೆಗೆದುಕೊಳ್ಳುತ್ತಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಸೂರ್ಯ ಅವರು, ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಹೊರಗಿನ ದಲ್ಲಾಳಿಗಳು, ಕೊವಿಡ್ ವಾರ್ ರೂಮ್ ಮತ್ತು ಕಾಲ್ ಸೆಂಟರ್ ಮುಖ್ಯಸ್ಥರು ಈ ಹಗರಣವನ್ನು ನಡೆಸುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ, ಕೊರೋನಾದ ಯಾವುದೇ ಲಕ್ಷಣಗಳಿಲ್ಲದ ವ್ಯಕ್ತಿಯ ಹೆಸರಿನಲ್ಲಿ ಹಾಸಿಗೆಯನ್ನು ಕಾಯ್ದಿರಿಸಲಾಗುತ್ತದೆ ನಂತರ ೧೨ ಗಂಟೆಗಳ ನಂತರ ಲಂಚ ತೆಗೆದುಕೊಂಡು ಕೊರೋನಾ ರೋಗಿಗಳಿಗೆ ನೀಡಲಾಗುತ್ತದೆ. ಕಳೆದ ೭-೮ ದಿನಗಳಲ್ಲಿ ಇಂತಹ ೪೦೬೫ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅವರು ಹೇಳಿದ್ದಾರೆ. ತಮ್ಮ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಾದರೆ ಆಸ್ಪತ್ರೆಯ ಕಂಪ್ಯೂಟರ್‍ನಲ್ಲಿನ ಡೇಟಾವನ್ನು ವಿಶ್ಲೇಷಿಸಲು ಅವರು ಹೇಳಿದರು. ‘ರೋಗಿಗಳು ಡಿಸ್ಚಾರ್ಜ್ ಆದ ನಂತರ ಅಥವಾ ಸತ್ತ ನಂತರವೂ ಹಾಸಿಗೆಗಳು ಲಭ್ಯವಿಲ್ಲ; ಅದು ಹೇಗೆ ?’ ಎಂದು ಸೂರ್ಯ ಕೇಳಿದರು.

ತೇಜಸ್ವಿ ಸೂರ್ಯ ಅವರನ್ನು ಚರ್ಚೆಗೆ ಕರೆಯಲಾಗಿದೆ ! – ಮುಖ್ಯಮಂತ್ರಿ ಯಡಿಯೂರಪ್ಪ

ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ತೇಜಸ್ವಿ ಸೂರ್ಯ ಇವರು ದೊಡ್ಡ ಹಗರಣವನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಚರ್ಚಿಸಲು ನಾವು ಅವರನ್ನು ಕರೆದಿದ್ದೇವೆ ಎಂದು ಹೇಳಿದ್ದಾರೆ.

(ಸೌಜನ್ಯ : Tv9 Kannada)